janadhvani

Kannada Online News Paper

ಎಸ್.ಎಸ್‌.ಎಫ್. ಮಿತ್ತರಾಜೆ ಶಾಖೆಯ ವತಿಯಿಂದ ಯುನಿಟ್ ಕಾನ್ಫರೆನ್ಸ್

ಈ ವರದಿಯ ಧ್ವನಿಯನ್ನು ಆಲಿಸಿ


ಸಾಲೆತ್ತೂರ್: SSF ಮಿತ್ತರಾಜೆ ಶಾಖೆಯ ಯೂನಿಟ್ ಸಮ್ಮೇಳನ ಮತ್ತು ಮಹ್ಲರತುಳ್ ಬದ್ರಿಯಾ 28-10-2018 ಆದಿತ್ಯವಾರದಂದು ಪಂಜರಕೋಡಿ ರಿಫಾಯಿಯ್ಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರಾದ ಹಮೀದ್’ರವರು ವಹಿಸಿದ್ದರು.
ಪಂಜರಕೋಡಿ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಮದನಿ ಪಂಜರಕೋಡಿ ಉದ್ಘಾಟಿಸಿದರು. ಮು‌ಅಲ್ಲಿಂ ಶರೀಫ್ ಹನೀಫಿ ಮಾರ್ನಾಡ್ ಸ್ವಾಗತಿಸಿದರು, ಸಯ್ಯದ್ ಶಿಹಾಬುಧ್ದೀನ್ ತಂಙಳ್ ಮದಕ’ ಮಹ್ಲರತುಳ್ ಬದ್ರಿಯಾ ಮಜ್ಲಿಸ್’ಗೆ ನೇತೃತ್ವ ನೀಡಿದರು, SSF ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ಮಾಡಿದರು,

ಬಂಟ್ವಾಳ ಡಿವಿಷನ್ ಪ್ರ.ಕಾರ್ಯದರ್ಶಿ ಝೈನುಲ್ ಆಬಿದ್ ನ‌ಈಮಿ ಕಟ್ಟತ್ತಿಲ, ಪಂಜರಕೋಡಿ ಜುಮಾ ಮಸೀದಿ ಅಧ್ಯಕ್ಷರಾದ ಮಜೀದ್ ಕಲ್ಲಕಟ್ಟ, ಮಂಚಿ ಸೆಕ್ಟರ್ ಅಧ್ಯಕ್ಷರಾದ ಅಸ್ಲಂ ಪಂಜಿಕಲ್, SYS ಪಂಜರಕೋಡಿ ಬ್ರಾಂಚ್ ಅಧ್ಯಕ್ಷರಾದ ಇಬ್ರಾಹಿಂ ಮಿತ್ತರಾಜೆ, ಉಮ್ಮರ್ ಅಬ್ಬೆಮಾರ್, ಅಬೂಬಕ್ಕರ್ ಸಿದ್ದೀಕ್ ನೂಜಿ, ಇಬ್ರಾಹಿಂ ಪಂಜರಕೋಡಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com