janadhvani

Kannada Online News Paper

ಎಸ್ಸೆಸ್ಸೆಫ್ ಕೋಯನಗರ ಯುನಿಟ್ ಕಾನ್ಫರೆನ್ಸ್* ಯೌವ್ವನ ಮರೆಯಾಗುವ ಮುನ್ನಾ ಜಾಗೃತರಾಗಿರಿ: ಝೈನೀ ಕಾಮಿಲ್

ಈ ವರದಿಯ ಧ್ವನಿಯನ್ನು ಆಲಿಸಿ


ನಾವುಂದ: ಯೌವ್ವನ ಎಂಬುದು ಅಲ್ಲಾಹು ನೀಡಿದ ಅತೀ ದೊಡ್ಡ ಅನುಗ್ರಹವಾಗಿದೆ. ಅದು ಮರೆಯಾಗುವ ಮುನ್ನಾ ಪಾರತ್ರಿಕ ಲೋಕದ ವಿಜಯಕ್ಕಾಗಿ ಏನಾದರೂ ಸತ್ಕರ್ಮಗಳನ್ನು ನಿರ್ವಹಿಸಿ ನಾಳೆಯ ಜೀವನದ ಬಗ್ಗೆ ಜಾಗೃತರಾಗಿರಿ ಎಂದು ಎಸ್. ವೈ. ಎಸ್. ಕರ್ನಾಟಕ ರಾಜ್ಯ ಪ್ರ. ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಹೇಳಿದರು. ಅವರು ಕೋಯನಗರ ಶಾಖಾ ಎಸ್ಸೆಸ್ಸೆಫ್ ಆಯೋಜಿಸಿದ್ದ ಯೂನಿಟ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಪ್ರಭಾಷಣ ಮಾಡಿ ಮಾತನಾಡುತ್ತಿದ್ದರು. ಆಧುನಿಕ ಸನ್ನಿವೇಶದಲ್ಲಿ ಯುವಕ – ಯುವತಿಯರು ಮಾಡುತ್ತಿರುವ ಆನಾಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಕರೆ ನೀಡಿದರು.

ಸಯ್ಯಿದ್ ಕುಟುಂಬದ ಅಗ್ರಗಣ್ಯ ಆಧ್ಯಾತ್ಮಿಕ ನಾಯಕರಾದ ಅಸ್ಸಯ್ಯಿದ್ ಮುಹಮ್ಮದ್ ಸಲೀಂ ತಂಙಲ್ ಕೆ. ಸಿ. ರೋಡು ಪ್ರಾರ್ಥನೆಗೆ ನೇತೃತ್ವ ನೀಡಿದರು.

ಕೋಯನಗರ ನೂರುಲ್ ಹುದಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಇರ್ಷಾದ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಕಾರ್ಯಕ್ರಮವನ್ನು ನಾವುಂದ ಮುಹ್’ಯದ್ದೀನ್ ಜುಮಾ ಮಸೀದಿಯ ಮುದರ್ರಿಸರಾದ ಹಾಜಿ ಇಕ್ರಾಮುಲ್ಲಾಃ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶೈಖುನಾ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರ ಇಜಾಝತಿನೊಂದಿಗೆ ಪ್ರತೀ ತಿಂಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಅಲ್ – ಮಹ್’ಳರತುಲ್ ಬದ್ರಿಯ್ಯಃ ಎಂಬ ಆತ್ಮೀಯ ಮಜ್ಲಿಸ್ ಕಾರ್ಯಕ್ರಮವನ್ನು ಸ್ಥಳೀಯ ಇಮಾಮರಾದ ಕೊಂಬಾಳಿ ಕೆ. ಎಂ. ಎಚ್. ಝುಹುರಿಯವರ ನೇತೃತ್ವದಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಾಯಕರಾದ ರವೂಫ್ ಖಾನ್ ಮೂಡುಗೋಪಾಡಿ, ನವಾಝ್ ಭಟ್ಕಳ, ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಎಸ್. ಎಂ. ಹನೀಫ್ ಸಅದಿ ನಾವುಂದ, ಆಕಳಬೈಲು ಖತೀಬರಾದ ಹಾಜಿ ಇಸ್ಮಾಯಿಲ್ ಮುಸ್ಲಿಯಾರ್, ಹಂಗಳೂರು ಜುಮಾ ಮಸೀದಿಯ ಮುದರ್ರಿಸರಾದ ಅಬೂಬಕರ್ ಸಿದ್ದೀಖ್ ಸಖಾಫಿ ನೆಕ್ಕಿಲ, ಎಸ್ಸೆಸ್ಸೆಫ್ ನಾವುಂದ ಸೆಕ್ಟರ್ ಅಧ್ಯಕ್ಷ ಶಾಫೀ ಸಖಾಫಿ ಆಕಳಬೈಲು, ಮದ್ರಸ ಅಧ್ಯಾಪಕರಾದ ಮುನೀರ್ ಸಖಾಫಿ ಸುಳ್ಯ, ಎಸ್. ವೈ. ಎಸ್. ಕೋಯನಗರ ಬ್ರಾಂಚ್ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಕಿರಿಮಂಜೇಶ್ವರ, ನಾವುಂದ ರೀಜಿನಲ್ ಎಸ್. ಎಂ. ಎ. ನಿಕಟಪೂರ್ವ ಅಧ್ಯಕ್ಷ ಬಿ. ಎಸ್. ಮೊಯಿದು ಹಾಜಿ, ಕೋಯನಗರ ಬದ್ರುಲ್ ಹುದಾ ಅಧ್ಯಕ್ಷ ಸೆಮೀರ್ ಮುಲ್ಲಾ, ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮುಝ್ಝಮ್ಮಿಲ್ ಕೆ. ಎ. ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರ. ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ಶಾಖಾ ಕಾರ್ಯದರ್ಶಿ ಮುಸ್ತಫಾ ಎಚ್. ಎ. ವಂದಿಸಿದರು.

error: Content is protected !! Not allowed copy content from janadhvani.com