ಬೈಂದೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಅಧೀನದಲ್ಲಿ ರಾಜ್ಯಾದಂತ ಸೆಕ್ಟರ್ ಮಟ್ಟದಲ್ಲಿ ನಡೆಯುತ್ತಿರುವ “ನಮ್ಮ ಮಕ್ಕಳು ನಮ್ಮವರಾಗಲು” ಎಂಬ ಘೋಷಣೆಯೊಂದಿಗೆ ಎಸ್ಸೆಸ್ಸೆಫ್ ನಾವುಂದ ಸೆಕ್ಟರ್ ವತಿಯಿಂದ ಜನಜಾಗ್ರತಿ ಅಭಿಯಾನವು ನಾವುಂದ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ನಡೆಸಲಾಯಿತು.ನಾವುಂದ ಕೇಂದ್ರ ಮಸೀದಿಯಿಂದ ನಾವುಂದ ಪಟ್ಟಣ ವರೆಗೆ ನಡೆಸಿದ ಕಾಲ್ನಡಿಗೆ ಜಾಥಾದ ಬಳಿಕ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಹನೀಫ್ ಸಅದಿ ನಾವುಂದರವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ.ಕ.ಜಿಲ್ಲಾ ನಾಯಕರಾದ ಕೊಂಬಾಳಿ ಕೆ.ಎಂ.ಎಚ್. ಝುಹುರಿ ಉದ್ಘಾಟಿಸಿ, ಶುಭಹಾರೈಸಿದರು. ಸ್ಥಳೀಯ ಮುದರ್ರಿಸರಾದ ಹಾಜಿ ಇಕ್ರಾಮುಲ್ಲಾ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು, ಎಸ್ಸೆಸ್ಸೆಫ್ ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಮರುಲ್ ಫಾರೂಖ್ ಸಖಾಫಿ ಬಡಾಕೆರೆ ಸ್ವಾಗತಿಸಿ, ಸೆಕ್ಟರ್ ಕಾರ್ಯದರ್ಶಿ ಬದ್ರುದ್ದೀನ್ ಝುಹುರಿ ವಂದಿಸಿದರು.