janadhvani

Kannada Online News Paper

ಎಸ್.ಎಸ್.ಎಫ್ ಮಂಚಿ ಸೆಕ್ಟರ್ ವತಿಯಿಂದ ಜಾಗೃತಿ ಅಭಿಯಾನ.

SSF ಮಂಚಿ ಸೆಕ್ಟರ್ ವತಿಯಿಂದ ‘ನಮ್ಮ ಮಕ್ಕಳು ನಮ್ಮವರಾಗಲು’ ಎಂಬ ಘೋಷ ವಾಕ್ಯದೊಂದಿಗೆ ಜನಜಾಗೃತಿ ಅಭಿಯಾನವು SSF ಮಂಚಿ ಸೆಕ್ಟರ್ ಅದ್ಯಕ್ಷರಾದ ಅಸ್ಲಂ ಸಂಪಿಲ ಇವರ ಅಧ್ಯಕ್ಷತೆಯಲ್ಲಿ 4/08/2018 ಶನಿವಾರ ಸಂಜೆ 4:00 ಘಂಟೆಗೆ ಸಾಲೆತ್ತೂರು ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯಕ್ರಮವು ಬಂಟ್ವಾಳ ಡಿವಿಷನ್ ಪ್ರ.ಕಾರ್ಯದರ್ಶಿ. ಝೈನುಲ್ ಆಬಿದ್ ನಈಮಿ ಯವರ ದುಆ ದೊಂದಿಗೆ ಪ್ರಾರಂಬಗೊಂಡಿತು
ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿದರು
ಉದ್ಘಾಟನೆಯನ್ನು ಸಾಲಿಂ ಸಅದಿ ನಡೆಸಿದರು. ಪ್ರಾಸ್ತಾವಿಕ ಭಾಷಣವನ್ನು ಕಟ್ಟತ್ತಿಲ ದರ್ಸ್ ವಿದ್ಯಾರ್ಥಿ ಮುಹಮ್ಮದ್ ಬಿಲಾಲ್ ಹಾಗೂ ಹಕೀಂ ಕುಕ್ಕಾಜೆ. ಬಾಷಣದ ಮೂಲಕ ಇತ್ತೀಚೆಗೆ ನಡೆಯುತ್ತಿರುವ ಮಕ್ಕಳ ಅಪಹರಣ,ಅತ್ಯಾಚಾರ ಹಾಗೂ ಮಾದಕ ದುರ್ವ್ಯಸನಗಳಿಗೆ
ಬಳಿಯಾಗುತ್ತಿರುವ ಮಕ್ಕಳ ಬಗ್ಗೆ ಹೆತ್ತವರು ಜಾಗೃತವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೈದರ್ ಅಶ್ರಫಿ ಕಟ್ಟತ್ತಿಲ ಮುಖ್ಯ ಭಾಷಣ ನಡೆಸಿ ನಮ್ಮ ಮಕ್ಕಳು ನಮ್ಮವರಾಗಲು’ ಕಾರ್ಯಕ್ರಮದ ಉದ್ದೇಶ ಹಾಗೂ ಒಲವು ನಿಲುವುಗಳನ್ನು ಸವಿಸ್ತಾರವಾಗಿ ತಿಳಿಸಿದರು
ಪ್ರಸ್ತುತ ಕಾರ್ಯಕ್ರಮದಲ್ಲಿ ಡಿವಿಷನ್ ಕೋಶಾಧಿಕಾರಿ ರಫೀಖ್ ಝುಹ್ರಿ ಮಂಚಿ, ಮಂಚಿ ಸೆಕ್ಟರ್ ಉಸ್ತುವಾರಿ ಮುಹಮ್ಮದ್ ಅಲಿ ಮದನಿ ಸೆರ್ಕಳ,ಕರೀಂ ಕದ್ಕಾರ್,ಸ್ವಾಗತ ಸಮಿತಿ ಚೇರ್ಮಾನ್ ಸಿದ್ದೀಕ್ ಝುಹ್ರಿ, ಶರೀಫ್ ಹನೀಫಿ ಪಂಜರಕೋಡಿ, ಸೆಕ್ಟರ್ ಕೋಶಾಧಿಕಾರಿ ಹಂಝ ಮಂಚಿ,ಕ್ಯಾಂಪಸ್ ಕಾರ್ಯದರ್ಶಿ ಫರ್ವಾಝ್,ಕಾರ್ಯದರ್ಶಿ ಹಾಫಿಲ್ ಬಿ.ಎಚ್ ನಗರ, ಹೈದರ್ ಲತೀಫಿ ಮೆದು, ಹಸೈನಾರ್ ಕಟ್ಟತ್ತಿಲ ಮುಂತಾದವರು ಉಪಸ್ತಿತರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಸೆಕ್ಟರ್ ಪ್ರ.ಕಾರ್ದರ್ಶಿ ನೌಫಲ್ ಕಟ್ಟತ್ತಿಲ ರವರು ವಂದಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

error: Content is protected !! Not allowed copy content from janadhvani.com