janadhvani

Kannada Online News Paper

ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಪೆರುವಾಯಿ: SBS ಮಹಾಸಭೆ

ಸಂಘಟನಾ ಕಾರ್ಯಾಚರಣೆಗಳಿಂದ ಯಶಸ್ಸು ಖಚಿತ : ಪೆರುವಾಯಿ ಉಸ್ತಾದ್

ವಿಟ್ಲ : ಸಂಘಟಿತರಾಗಿ ಕಾರ್ಯಾಚರಣೆಗೆಯ್ಯುವುದರಿಂದ ಹತ್ತು ಹಲವು ಗುಣಗಳು ಲಭ್ಯವಾಗುವುದು. ಬದುಕಿನಲ್ಲಿ ಯಶಸ್ಸು ಸಿಗಲು ಸಂಘಟಿತರಾಗಿ ವರ್ಕ್ ಮಾಡುವುದರಿಂದ ಸುಲಭವಾಗುತ್ತದೆ. ಸುನ್ನೀ ಸಂಘಟನೆಗಳ ಗುರಿಯು ಪರಲೋಕ ಮೋಕ್ಷವಾಗಿದ್ದು, ಆ ಗುರಿಯೆಡೆಗೆ ತಲುಪುವ ಲಕ್ಷದೊಂದಿಗೆ ನಾವು ಕಾರ್ಯಾಚರಿಸಬೇಕೆಂದು ಪೆರುವಾಯಿ ಉಸ್ತಾದ್ ಮುಹಮ್ಮದ್ ಶರೀಫ್ ಮದನಿ ಕರೆ ನೀಡಿದರು.ಅವರು ಪೆರುವಾಯಿ ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಹಾಲಿನಲ್ಲಿ ನಡೆದ ಇಲ್ಲಿನ ವಿದ್ಯಾರ್ಥಿಗಳ ಸಂಘಟನೆಯಾದ ಸುನ್ನೀ ಬಾಲ ಸಂಘ-ಎಸ್ಬೀಯಸ್ಸ್ ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸ್ಥಳೀಯ ಮುಖ್ಯೋಪಾಧ್ಯಾಯರಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಮುಹಮ್ಮದ್ ಹಾರಿಸ್ ಹಿಮಮಿಯವರು ಹಿತವಚನ ನೀಡಿದರು.

ಜಮಾತ್ ಸಮಿತಿ ಅಧ್ಯಕ್ಷರಾದ ಮಮ್ಮುಹಾಜಿ, ಉಪಾಧ್ಯಕ್ಷರಾದ ಜಿಎಂ ಅಬೂಬಕರ್ ಸುನ್ನಿ ಫೈಝಿ, ಪ್ರಧಾನಿ ಕಾರ್ಯದರ್ಶಿ ಹಮೀದ್ ಕಾನ, ಕೋಶಾಧಿಕಾರಿ ಇಸ್ಮಾಯಿಲ್ ಕಾನ ಹಾಗೂ ಸ್ಥಳೀಯ ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ ನಾಯಕರಾದ ಹಲವರು ಉಪಸ್ಥಿತರಿದ್ದರು.

ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅನಸ್ ರವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿಯಾಗಿದ್ದ ಮುಹಮ್ಮದ್ ಸಿನಾನ್ ಹಣಕಾಸು ವರದಿ ಮಂಡಿಸಿದರು.ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿಮುಹಮ್ಮದ್ ಅನಸ್ ಸ್ವಾಗತಿಸಿ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಸಲ್ಮಾನುಲ್ ಫಾರಿಸ್ ಧನ್ಯವಾದ ಸಲ್ಲಿಸಿದರು.

ನೂತನ ಸಮಿತಿಯ ಸಾರಥಿಗಳು

ಗೌರವಾಧ್ಯಕ್ಷರು:ಅಲ್ಹಾಜ್ ಮುಹಮ್ಮದ್ ಶರೀಫ್ ಮದನಿ ಪುಂಜಾಲಕಟ್ಟೆ, ನಿರ್ದೇಶಕರು:ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ, ಮದಬ್ಬಿರ್:ಎಪಿ ಮುಹಮ್ಮದ್ ಹಾರಿಸ್ ಹಿಮಮಿ ಪೆರುವಾಯಿ.

ಅಧ್ಯಕ್ಷರು:ಮುಹಮ್ಮದ್ ಅನಸ್.ಉಪಾಧ್ಯಕ್ಷರು:ಮುಹಮ್ಮದ್ ಸಿನಾನ್, ಅಬ್ದುಲ್ಲಾ ಅರ್ಶಾಕ್

ಪ್ರಧಾನ ಕಾರ್ಯದರ್ಶಿ:ಸಲ್ಮಾನುಲ್ ಫಾರಿಸ್, ಕಾರ್ಯದರ್ಶಿ:ಅಬ್ದುಲ್ಲಾ ಅರ್ಶಾಕ್, ಮುಹಮ್ಮದ್ ಜಾಸಿಂ, ಕೋಶಾಧಿಕಾರಿ:ಅಬೂಬಕರ್ ಸಾಬಿತ್

ಕಾರ್ಯಕಾರಿ ಸಮಿತಿ ಸದಸ್ಯರು:ಮುಹಮ್ಮದ್ ಅಝ್ಮಾನ್, ಮುಹಮ್ಮದ್ ಶರೀಫ್

error: Content is protected !! Not allowed copy content from janadhvani.com