janadhvani

Kannada Online News Paper

“ನಮ್ಮ ಮಕ್ಕಳು ನಮ್ಮವರಾಗಲು” SSF ಗುರುವಾಯನಕೆರೆ ಸೆಕ್ಟರ್: ಬೃಹತ್ ಸಂದೇಶ ಜಾಥ

 

ಗುರುವಾಯನಕೆರೆ;ಸುನ್ನಿ ಸ್ಟೂಡೆಂಟ್  ಫೆಡೆರೇಶನ್ SSF ಕರ್ನಾಟಕ ರಾಜ್ಯ ಸಮಿತಿಯ ಆದೇಶದಂತೆ SSF ಗುರುವಾಯನಕೆರೆ ಸೆಕ್ಟರ್ ವತಿಯಿಂದ “ನಮ್ಮ ಮಕ್ಕಳು ನಮ್ಮವರಾಗಲು – ಸಂದೇಶ ಜಾಥ” ಕಾರ್ಯಕ್ರಮವನ್ನು ದಿನಾಂಕ 05-08-2018 ಆದಿತ್ಯವಾರ ದಂದು ವಿಜೃಂಭನೆಯಿಂದ ನಡೆಸಲಾಯಿತು.

ಕಾರ್ಯಕ್ರಮವು ವಲಿಯುಲ್ಲಾಹಿ ದರ್ಗಾ ಶರೀಫ್, ಪರಪ್ಪು ಮಖಾಂ ಝಿಯಾರತ್ ನೊಂದಿಗೆ ಆರಂಭಗೊಂಡು , ಜಾರಿಗೆಬೈಲು ಜಂಕ್ಷನ್ ನಲ್ಲಿ ಉದ್ಘಾಟನೆ ಗೊಂಡಿತು…ಉದ್ಘಾಟನಾ ಕಾರ್ಯಕ್ರಮದಲ್ಲಿ ಸೆಕ್ಟರ್ ಪ್ರ.ಕಾರ್ಯದರ್ಶಿ ಝೈನುದ್ದೀನ್ ಅಳದಂಗಡಿ ರವರು ಸ್ವಾಗತಿಸಿ, ಸೆಕ್ಟರ್ ನಾಯಕರಾದ ನಝೀರ್ ಅಹ್ಸನಿ ಉಸ್ತಾದರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂದೇಶ ಭಾಷಣ ಮಾಡಿದರು..

ನಂತರ ಸಂದೇಶ ಜಾಥಾವು ಬಟ್ಟೆಮಾರು, ಪರಪ್ಪು , ಗೇರುಕಟ್ಟೆ, ಗುರುವಾಯನಕೆರೆ ಜಂಕ್ಷನ್, ಸುನ್ನತ್ ಕೆರೆ, ಮದ್ದಡ್ಕ, ಆಲಂದಿಲ, ಲಾಡಿ, ಬದ್ಯಾರ್, ತೆಂಕಕಾರಂದೂರು, ಬಳಂಜ, ವಾಗಿ ಹಾದುಬಂದು ನಂತರ ಅಳದಂಗಡಿ ಜಂಕ್ಷನ್ ನಲ್ಲಿ ಸಮಾಪ್ತಿಗೊಂಡಿತು..

ಸಂದೇಶ ಜಾಥಾ ಕಾರ್ಯಕ್ರಮದಲ್ಲಿ ಸೆಕ್ಟರ್ ನಾಯಕರಾದ ಬಹು|| ನಝೀರ್ ಅಹ್ಸನಿ ಬಟ್ಟೆಮಾರ್ , ಬಹು|| ಮುಸ್ತಫಾ ಹಿಮಮಿ ಪರಪ್ಪು, ಬಹು|| ಸಿದ್ದೀಖ್ ಸಖಾಫಿ ಬೇಂಗಿಲ, ಸಿದ್ದೀಕ್ ಜಾರಿಗೆಬೈಲು, ದಾನಿಷ್ ಸುನ್ನತ್ ಕೆರೆ, ರಿಝ್ವಾನ್ ಜಿ.ಕೆರೆ, ಝೈನುದ್ದೀನ್ ಅಳದಂಗಡಿ ಮುಂತಾದವರು ಆವೇಶಭರಿತವಾದ ಸಂದೇಶ ಭಾಷಣವನ್ನು ಮಾಡಿದರು..

ಕಾರ್ಯಕ್ರಮದ ಕೊನೆಯ ಭಾಗವಾದ ಸಮಾರೋಪ ಸಮಾರಂಭವು ಅಳದಂಗಡಿ ಜಂಕ್ಷನ್ ನಲ್ಲಿ ಸೆಕ್ಟರ್ ಅಧ್ಯಕ್ಷರಾದ ಬಹು|| ಕರೀಂ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು..ಬಹು|| ಅಸ್ಸಯ್ಯಿದ್ ಬದ್ರುದ್ದೀನ್ ಅಲ್-ಹಾದಿ ತಂಙಳ್ ಪಿಲ್ಯ ರವರ ದುಆ ದೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಹು|| ನಝೀರ್ ಅಹ್ಸನಿ ಉಸ್ತಾದರು ಮಾಡಿದರು..

ನಮ್ಮ ಭಾರತ ದೇಶದಲ್ಲಿ ಅನೈತಿಕ ಮತ್ತು ಅಮಾನವೀಯ ಕೃತ್ಯಗಳ ವಿರುಧ್ದ ಜಾತಿಧರ್ಮ ಮರೆತು ಹೋರಾಟ ಮಾಡಬೇಕಾಗಿದೆ, ಅಲ್ಲದೇ ಅಶ್ಲೀಲ ವೆಬ್ ಸೈಟ್ ಗಳು ಮಕ್ಕಳ ಉನ್ನತ ಭವಿಷ್ಯಕ್ಕೆ ಮಾರಕವಾಗಿರುವುದರಿಂದ ಅಂತಹ ವೆಬ್ ಸೈಟ್ ಗಳನ್ನು ನಮ್ಮ ದೇಶದಲ್ಲಿ ಉಪಯೋಗಿಸುವುದನ್ನು ರದ್ದು ಗೊಳಿಸಬೇಕು ಎಂದು ಖ್ಯಾತ ವಾಗ್ಮಿ ಬಹು|| ಯಾಸೀನ್ ಸಖಾಫಿ ಉಸ್ತಾದರು ಸಮಾರೋಪ ಕಾರ್ಯಕ್ರಮದ ಸಂದೇಶ ಭಾಷಣದಲ್ಲಿ ನಮ್ಮ ಮಕ್ಕಳು ನಮ್ಮವರಾಗಲು ಪೋಷಕರ ಜವಬ್ದಾರಿಯ ಕುರಿತು ವಿವರಿಸಿ ಹೇಳಿದರು….ಡಿವಿಶನ್ ನಾಯಕರಾದ ಬಹು|| ಅಯ್ಯೂಬ್ ಮಹ್-ಳರಿ ಉಸ್ತಾದರು ಆಶಂಶ ಭಾಷಣ ಮಾಡಿದರು…
ಕಾರ್ಯಕ್ರಮದಲ್ಲಿ ಡಿವಿಶನ್ ನಾಯಕರಾದ ಬಹು|| ಹನೀಫ್ ಮುಸ್ಲಿಯಾರ್, ಸಿದ್ದೀಕ್ ಪರಪ್ಪು, ಕಾರ್ಯಕ್ರಮದ ಚೆಯ್ಯರ್ ಮನ್ ಇಸ್ಹಾಕ್ ಅಳದಂಗಡಿ, ಪ್ರ.ಕಾರ್ಯದರ್ಶಿ ಝೈನುದ್ದೀನ್ ಅಳದಂಗಡಿ ಮುಂತಾದ ಸಂಘಟನಾ ನಾಯಕರು,ಶಾಖಾ,ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.
ಸೆಕ್ಟರ್ ನಾಯಕರಾದ ನವಾಝ್ ಮಾವಿನಕಟ್ಟೆ ರವರು ಸ್ವಾಗತಿಸಿ, ಸಿದ್ದೀಕ್ ಜಾರಿಗೆಬೈಲು ರವರು ವಂದಿಸಿದರು.

ವರದಿ: ಸಿದ್ದೀಕ್ ಜಾರಿಗೆಬೈಲು

error: Content is protected !! Not allowed copy content from janadhvani.com