janadhvani

Kannada Online News Paper

SSF ತುಂಬೆ ಶಾಖೆ: ಮಾಸಿಕ ಮಹ್’ಳರತುಲ್ ಬದ್ರಿಯ್ಯಃ ಮಜ್ಲಿಸ್

SSF ತುಂಬೆ ಶಾಖೆ ವತಿಯಿಂದ ಮಾಸಿಕ ಮಹ್’ಳರತುಲ್ ಬದ್ರಿಯಾ: ಮಜ್ಲಿಸ್ ತುಂಬೆ ತಾಜುಲ್ ಉಲಮಾ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ದಿನಾಂಕ 05-08-2018 ಆದಿತ್ಯವಾರ ಇಶಾ ನಮಾಝಿನ ಬಳಿಕ SSF ಮಂಗಳೂರು ಡಿವಿಷನ್ ಅಧ್ಯಕ್ಷರಾದ ಬಹು|ಜುನೈದ್ ಸಅದಿ ಅಲ್-ಅಪ್ಲಳಿ ವಳವೂರ್ ಉಸ್ತಾದರ ನೇತೃತ್ವದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ SSF ತುಂಬೆ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಹಿಮಮಿ, ಬಹು: ಫಾರೂಕ್ ಸಅದಿ ತುಂಬೆ,ತಾಜುಲ್ ಉಲಮಾ ಸುನ್ನೀ ಕಲ್ಚರಲ್ ಸೆಂಟರಿನ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,ಶಾಖಾ ಸಂಘಟನಾ ಕಾರ್ಯದರ್ಶಿ ಅದಂ ಟಿ.ಎ ಹಾಗೂ ಹಲವಾರು ಸಂಘಟನಾ ಕಾರ್ಯಕರ್ತರು,ಊರ ನಾಗರಿಕರು ಉಪಸ್ಥರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಪ್ರ.ಕಾರ್ಯದರ್ಶಿ ನೌಷಾದ್ ತುಂಬೆ ಧನ್ಯವಾದವಿತ್ತರು.

ವರದಿ: ಇರ್ಫಾಝ್ ತುಂಬೆ

error: Content is protected !! Not allowed copy content from janadhvani.com