ಕುಂದಾಪುರ:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಅಧೀನದಲ್ಲಿ ರಾಜ್ಯಾದಂತಹ ಸೆಕ್ಟರ್ ಮಟ್ಟದಲ್ಲಿ ನಡೆಯುತ್ತಿರುವ “ನಮ್ಮ ಮಕ್ಕಳು ನಮ್ಮವರಾಗಲು” ಎಂಬ ಪ್ರಮೇಯದಡಿ ಜಾಗ್ರತಿ ಅಭಿಯಾನವು ಕೋಟೇಶ್ವರ ಸೆಕ್ಟರ್ ವತಿಯಿಂದ 05/08/2018 ರಂದು ನಡೆಸಲಾಯಿತು.ಸಮಾರೋಪ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿಯಾದ ಅಡ್ವಕೇಟ್ ಇಲ್ಯಾಸ್ ರವರು ಉದ್ಘಾಟನೆಗೈದರು. ನಮ್ಮಲ್ಲಿರುವ ಧರ್ಮ,ಜಾತಿ,ಮತ ಪಂಗಡದ ಬೇದ ಭಾವ ಮರೆತು – ಅನೈತಿಕತೆಯ ವಿರುದ್ದ ಒಗ್ಗಟ್ಟಾಗಿ ಐಕ್ಯತೆಯಿಂದ ಹೋರಾಡಿದರೆ ಮಾತ್ರ ನಮ್ಮ ಮಕ್ಕಳು ನಮ್ಮವರಾಗಿರಲು ಸಾಧ್ಯವಾಗುತ್ತದೆ, ಎಂದು ಉಡುಪಿ ಜಿಲ್ಲಾ ssf ಅಧ್ಯಕ್ಷರಾದ ಅಶ್ರಪ್ ಅಂಜದಿ ಉಸ್ತಾದರು ಅಭಿಯಾನದ ಸಮಾರೋಪದಲ್ಲಿ ಮುಖ್ಯ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಖ್ ಸಖಾಫಿ ಉಸ್ತಾದರು ಪ್ರಾಸ್ತಾವಿಕ ಭಾಷಣಗೈದರು. ವ್ಯಾಪ್ತಿಯ ಬಾಲ ಪ್ರತಿಭೆಗಳಾದ ರಹೀಂ ಮೂಡುಗೋಪಾಡಿ, ಸಲ್ಮಾನ್ ಪಡುಕೆರೆ, ಅಫ್ತಾಬ್ ಪಡುಕೆರೆ ಇವರು ಬೀದಿ ಬಾಷಣ ಹಾಗು ಅಭಿಯಾನ ಹಾಡು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ನಾಯಕರಾದ ರವೂಫ್ ಖಾನ್, ಡಿವಿಷನ್ ಅಧ್ಯಕ್ಷರಾದ ಮುಸ್ತಫಾ ಸಅದಿ, ಡಿವಿಷನ್ ಕಾರ್ಯದರ್ಶಿ ಶಮೀರ್, ಕೋಡಿ ಸೆಕ್ಟರ್ ಅಧ್ಯಕ್ಷರಾದ ಇಸ್ಮಾಈಲ್ ಸಖಾಫಿ, sys ನಾಯಕರಾದ ಹುಸೈನ್ ಪಡುಕೆರೆ, ibt ಕಾರ್ಯದರ್ಶಿ ನಾಸಿರ್ ಉಪಸ್ಥಿತಿಸಿದರು.
Amiin