janadhvani

Kannada Online News Paper

ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರಗೋಷ್ಠಿ

ಮಂಗಳೂರು: ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಆನ್‌ಲೈನ್‌ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರ ಗೋಷ್ಠಿ ದಿನಾಂಕ: 29-6-2025 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆ ತನಕ ನಡೆಯಲಿದ್ದು ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ವಾಗತ ಭಾಷಣ ಮಾಡಲಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ‌ ವಿಟ್ಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಬ ಕೆ.ಎಂ.ಇಖ್ಬಾಲ್ ಬಾಳಿಲ ಸಮಾರಂಭವನ್ನು ಉದ್ಘಾಟಿಸುವರು.

ಕರ್ನಾಟಕ ಭಾವೈಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ,ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಕವಿಗೋಷ್ಠಿ ಮತ್ತು ಭಾವೈಕ್ಯ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಲಿಮ್ರಾ ಗ್ರೂಪ್ ಆಫ್ ಕರ್ನಾಟಕ ಅಧ್ಯಕ್ಷ ಶೈಖ್ ಮುಹಮ್ಮದ್ ಇರ್ಫಾನಿ ಆಶಯ ಭಾಷಣ ಮಾಡುವರು.

ಇಖ್ಬಾಲ್ ಕೋಲ್ಪೆ,ಡಿ.ಐ.ಅಬೂಬಕರ್ ಕೈರಂಗಳ,ಎ.ಬಿ.ಮೊಹಿದೀನ್ ಕಳಂಜ, ಎಂ.ಎ‌.ಅಬ್ದುರ್ರಹ್ಮಾನ್ ಝುಹ್‌ರಿ ಮಗಿರೆ,ವಿಜಯದಾಸ ನವಲಿ ರಾಯಚೂರು, ಇಬ್ರಾಹಿಂ ಬಾತಿಷ ಝುಹ್‌ರಿ ಕುಂಬ್ರ, ಹನೀಫ್ ನಿಝಾಮಿ,ಅಸೈಗೋಳಿ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು.

ಎಸ್.ಬಿ.ಮುಹಮ್ಮದ್ ದಾರಿಮಿ ಉಪ್ಪಿನಂಗಡಿ,ನಾರಾಯಣ ರೈ ಕುಕ್ಕುವಳ್ಳಿ, ಉಬೈದ್.ಕೆ.ವಿಟ್ಲ,ಡಿ.ಎಅಬ್ಬಾಸ್ ಪಡಿಕ್ಕಲ್ ಭಾವೈಕ್ಯ ಸಂದೇಶ ನೀಡಲಿದ್ದಾರೆ.

ಕವಿಗಳಾದ ನಾರಾಯಣ ಕುಂಬ್ರ, ಝುನೈಫ್ ಕೋಲ್ಪೆ, ಪ್ರಶಾಂತ್ ಚೌಕದಪಾಲು, ಕೆ.ಹೆಚ್.ಇಖ್ಬಾಲ್ ನಿಝಾಮಿ ಕಿತ್ತಲೆಗಂಡಿ, ಪೆರುಮಾಳ್ ಐವರ್ನಾಡು, ಹಮೀದ್ ಹಸನ್ ಮಾಡೂರು, ದಿಲೀಪ್ ವೇದಿಕ್ ಕಡಬ, ಎ.ಎಸ್.ಬಾವ ಪುತ್ತೂರು, ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ಹೈದರಲಿ ಐವತ್ತೊಕ್ಲು, ಹರೀಶ್ ಸುಲಾಯ ಒಡ್ಡಂಬೆಟ್ಟು ಮೊದಲಾದವರು ಕವನ ವಾಚನ ಮಾಡಲಿದ್ದು ಎಂ.ಎ.ಮುಸ್ತಫಾ ಬೆಳ್ಳಾರೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆಂದು ಕರ್ನಾಟಕ ಭಾವೈಕ್ಯ ಪರಿಷತ್ ಪ್ರಕಟಣೆ ತಿಳಿಸಿದೆ.