ಹಿಜ್ರಾ ಹೊಸ ವರ್ಷಾರಂಭದ ಸಾಧ್ಯತೆ ಇರುವ ಜೂನ್ 27 ಶುಕ್ರವಾರ ದಿನವನ್ನು ಕರ್ನಾಟಕ ರಾಜ್ಯ ಸುನ್ನೀ ಯವಜನ ಸಂಘವು ‘ಅನುಸ್ಮರಣಾ ದಿನ’ವಾಗಿ ಆಚರಿಸಲಿದೆ. ಅಂದು ಎಲ್ಲ ಶಾಖೆಗಳಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಸಂಘಟಿಸಿ, ನಮ್ಮನ್ನು ಅಗಲಿದ ನಾಯಕರು ಮತ್ತು ಕಾರ್ಯಕರ್ತರಿಗೆ ಹದ್ಯಾ ಸಮರ್ಪಿಸಿ, ಮರಣ ಸ್ಮರಣೆಯನ್ನು ಜಾಗೃತಗೊಳಿಸುವ ಉಪನ್ಯಾಸ ಸಂಘಟಿಸಲಾಗುವುದು.ಸುನ್ನೀ ಸಂಘಟನಾ ಕ್ಷೇತ್ರದ ಉನ್ನತ ನಾಯಕರಾಗಿದ್ದ ಅಸ್ಸಯ್ಯಿದ್ ತಾಜುಲ್ ಉಲಮಾ, ಶೈಖುನಾ ನೂರುಲ್ ಉಲಮಾ, ಸಯ್ಯಿದ್ ತ್ವಾಹಿರುಲ್ ಅಹ್ದಲ್, ಸಯ್ಯಿದ್ ಪೊಸೋಟ್ ತಂಙಳ್, ಸಯ್ಯಿದ್ ಕೂರತ್ ತಂಙಳ್, ತಾಜುಶ್ಶರೀಅಃ ಅಲೀ ಕುಂಞಿ ಮುಸ್ಲಿಯಾರ್, ತಾಜುಲ್ ಫುಖಹಾ ಬೇಕಲ್ ಉಸ್ತಾದ್, ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್, ಎಡಪ್ಪಲಂ ಮಹ್ಮೂದ್ ಮುಸ್ಲಿಯಾರ್, ಎಸ್ ವೈ ಎಸ್ ಪ್ರಥಮ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ.ಡಾ. ಎಸ್ ಅಬ್ದುರ್ರಹ್ಮಾನ್ ಇಂಜಿನಿಯರ್, ರಾಜ್ಯ ಕೋಶಾಧಿಕಾರಿಗಳಾಗಿದ್ದ ಉಸ್ಮಾನ್ ಹಾಜಿ ಮಿತ್ತೂರು, ಹೈದರ್ ಅಲಿ ನಿಝಾಮಿ ಶಿವಮೊಗ್ಗ, ಪಾಲಿಬೆಟ್ಟ ಮುಹಮ್ಮದ್ ಹಾಜಿ ಕೊಡಗು, ಸದಸ್ಯರಾಗಿದ್ದ ಅಬೂಬಕರ್ ಕಡಂಗ ಮಡಿಕೇರಿ ಸೇರಿದಂತೆ ನಮ್ಮನ್ನು ಅಗಲಿದ ಉನ್ನತ ನಾಯಕರು ಹಾಗೂ ಸಂಘಟನೆಗಾಗಿ ದುಡಿದ ಕಾರ್ಯಕರ್ತರನ್ನು ಸ್ಮರಿಸುವುದಕ್ಕಾಗಿ ‘ಅನುಸ್ಮರಣಾ ದಿನ’ ಆಚರಿಸಲಾಗುತ್ತದೆ.ಜೂನ್ 26 ರಿಂದ 29ರ ತನಕ ನಡೆಯಲಿರುವ
ಆಧ್ಯಾತ್ಮಿಕ ನಾಯಕರಾಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಅವರ ಪ್ರಥಮ ಉರೂಸ್ ಆರಂಭವನ್ನು ಯಶಸ್ವಿಗೊಳಿಸುವಂತೆಯೂ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಕರೆ ನೀಡಿದ್ದಾರೆ.
ಜೂನ್ 26 ರಿಂದ 29ರ ತನಕ ನಡೆಯಲಿರುವ
ಆಧ್ಯಾತ್ಮಿಕ ನಾಯಕರಾಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಅವರ ಪ್ರಥಮ ಉರೂಸ್ ಆರಂಭವನ್ನು ಯಶಸ್ವಿಗೊಳಿಸುವಂತೆಯೂ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಕರೆ ನೀಡಿದ್ದಾರೆ.