janadhvani

Kannada Online News Paper

ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್‌: SYS ದ.ಕ ಈಸ್ಟ್ ಜಿಲ್ಲಾ ವತಿಯಿಂದ ಧನ ಸಹಾಯ ಹಸ್ತಾಂತರ

ಆರು ಲಕ್ಷ ರೂ. ಚೆಕ್ಕನ್ನು ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂಲಕ ಹಸ್ತಾಂತರಿಸಲಾಯಿತು.

ಪುತ್ತೂರು: ಆಧ್ಯಾತ್ಮಿಕ ನೇತಾರ,
ನೂರಾರು ಮೊಹಲ್ಲಾಗಳ ಖಾಝಿಗಳು ಆಗಿದ್ದ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಒಂದನೇ ಉರೂಸ್ ಪ್ರಯುಕ್ತ ಎಸ್ ವೈ ಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ಸುತ್ತೋಲೆ ಪ್ರಕಾರ ದ.ಕ ವ್ಯಾಪ್ತಿಯ 205 ಯೂನಿಟ್‌ಗಳಿಂದ ಸಂಗ್ರಹಿಸಿದ ಸಕ್ಕರೆಯ ಮೊತ್ತ ₹6 ಲಕ್ಷದ ಚೆಕ್ಕನ್ನು ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂಲಕ ಹಸ್ತಾಂತರಿಸಲಾಯಿತು.

ಜಿಲ್ಲಾಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ, ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಜಿಲ್ಲಾ ಉಸ್ತುವಾರಿ ಹಂಝ ಮದನಿ ಗುರುವಾಯನಕೆರೆ, ಸಾಂತ್ವನ ಇಸಾಬ ಉಪಾಧ್ಯಕ್ಷ ಉಸ್ಮಾನ್ ಸೋಕಿಲ, ಕಾರ್ಯದರ್ಶಿ ಸಲೀಂ ಕನ್ಯಾಡಿ, ದ‌ಅವಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲಾ ವ್ಯಾಪ್ತಿಯ ಝೋನ್ ಸಮಿತಿಗಳ ಹಾಗೂ ಸರ್ಕಲ್ ಸಮಿತಿಗಳ ಸಹಕಾರದೊಂದಿಗೆ ನಡೆದ ಸಕ್ಕರೆ ಸಂಗ್ರಹಕ್ಕೆ ಆಯಾ ಇಸಾಬ ಸಾಂತ್ವನ ವಿಭಾಗ ಮೇಲ್ನೋಟ ವಹಿಸಿತು.