janadhvani

Kannada Online News Paper

ಬೋವು ಸೇತುವೆಯಿಂದ ಕಾಲು ಜಾರಿ ನೀರಿಗೆ ಬಿದ್ದ 8 ವರ್ಷದ ಪುಟ್ಟ ಬಾಲಕ

ಬೆಳ್ತಂಗಡಿ: (ಜನಧ್ವನಿ ವಾರ್ತೆ) ತಣ್ಣೀರುಪಂಥ ಗ್ರಾಮದ ಬೋವು ಎಂಬಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಬೋವು ಮಜಲ್ ಸೆಲೀಮ್ ರವರ ಮಗನಾದ ಅಫ್ನಾನ್ ಎಂಬ ಪುಟ್ಟ ಬಾಲಕ ಕುಪ್ಪೆಟ್ಟಿ ಬೋವು ಕಡೆ ಹೋಗುವಾ ಸೇತುವೆಯಿಂದ ಕಾಲು ಜಾರಿಬಿದ್ದ ಘಟನೆ ಇಂದು ಸರಿಸುಮಾರು ಸಂಜೆ 4:30 ಕ್ಕೆ ನಡೆದಿದೆ,ಇದನ್ನು ಕಂಡ ಮತ್ತೊರ್ವ ವಿದ್ಯಾರ್ಥಿ ಕಾಮಿಲ್ ಜೋರಾಗಿ ಬೊಬ್ಬೆ ಹಾಕಿ ಕೂಗ ತೊಡಗಿದ,ಈ ಯುವಕನ ಕೂಗು ಕೇಳಿ ಕುಪ್ಪೆಟ್ಟಿಯ ಅರ್ಫಾಕ್ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದರು .

ಅರ್ಫಾಕ್ ಬರುವಷ್ಟರಲ್ಲಿ ನೀರಿಗೆ ಬಿದ್ದ ಪುಟ್ಟ ಬಾಲಕ 200 ಮೀಟರಷ್ಟು ಉದ್ದಕ್ಕೆ ತೇದು ಹೋದರು ಅರ್ಫಾಕ್ ತನ್ನ ಪ್ರಾಣವನ್ನು ಲೆಕ್ಕಿಸದೆ ತೇದು ಹೋಗುತ್ತಿದ್ದ ಆ ಪುಟ್ಟ ಬಾಲಕನನ್ನು ರಕ್ಷಿಸಿ ಪ್ರಾಣ ಅಪಾಯದಿಂದ ಪಾರು ಮಾಡುವ ಮೂಲಕ ಯಶಸ್ವಿಯಾಗಿದೆ.
ವರದಿ : ಉಬ್ಬಿ ಬೋವು.

error: Content is protected !! Not allowed copy content from janadhvani.com