ಮಂಗಳೂರು:(ಜನಧ್ವನಿ ವಾರ್ತೆ) ಅನಿವಾಸಿ ಮುಸ್ಲಿಂ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್.) ಇದರ “ಇಂಟರ್ನಾಷನಲ್ ಸಮ್ಮಿಟ್” ಇಂದು ಪೂರ್ವಾಹ್ನ ಹನ್ನೊಂದುವರೆ ಗಂಟೆಗೆ ಮಂಗಳೂರು ಹಂಪನಕಟ್ಟೆಯ ಸೂರ್ಯ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ.
ಸೌದಿ ಅರೇಬಿಯಾ, ಯು.ಎ.ಇ., ಬಹರೈನ್, ಕುವೈಟ್, ಖತರ್, ಓಮಾನ್, ಮಲೇಷ್ಯಾ ಹಾಗೂ ಲಂಡನ್ ಗಳಲ್ಲಿ ಘಟಕಗಳನ್ನು ಹೊಂದಿರುವ ಕೆ.ಸಿ.ಎಫ್., ಕನ್ನಡಿಗ ಮುಸ್ಲಿಮರ ಸಾಮಾಜಿಕ, ಸಾಂಸ್ಕೃತಿಕ ವೇದಿಕೆಯಾಗಿ ಕಾರ್ಯಾಚರಿಸುತ್ತಿದೆ.
ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಸಂಘಟನೆಯಲ್ಲಿ ಸದ್ಯ ಹತ್ತು ಸಾವಿರಕ್ಕೂ ಅಧಿಕ ಮಂದಿ ಸದಸ್ಯರಿದ್ದು ಊರಿನ ವಿವಿಧ ಜನಪರ ಕಾರ್ಯಗಳಿಗಾಗಿ ಅವರು ಸಕ್ರಿಯವಾಗಿ ದುಡಿಯುತ್ತಿದ್ದಾರೆ
ಸದರಿ ಸಂಘಟನೆಯ ಅಂತಾರಾಷ್ಟ್ರೀಯ ಸಮಿತಿಯ ಮಹಾಸಭೆಯ ಅಂಗವಾಗಿ ಇಂದು ನಡೆಯುವ ಸಮಾವೇಶದಲ್ಲಿ ರಾಜ್ಯದ ಸುನ್ನೀ ಸಂಘಟನಾ ಪ್ರಮುಖರು ಭಾಗವಹಿಸಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಶೈಖುನಾ ಬೇಕಲ್ ಉಸ್ತಾದ್ ಉದ್ಘಾಟನೆ ಮಾಡಲಿದ್ದಾರೆ.
ಊರಿನಲ್ಲಿರುವ ಎಲ್ಲಾ ಕೆಸಿಎಫ್ ಸದಸ್ಯರು ಸಮಾವೇಶದಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಎಸ್ ಪಿ.ಹಂಝ ಸಖಾಫಿ ಬಂಟ್ವಾಳ ವಿನಂತಿಸಿಕೊಂಡಿದ್ದಾರೆ