janadhvani

Kannada Online News Paper

ಕೆಸಿಎಫ್ ಗ್ರಾಂಡ್ ಇಫ್ತಾರ್ ಮೀಟ್, ಸ್ವಾಗತ ಸಮಿತಿ ರಚನೆ

ರಿಯಾದ್:(ಜನಧ್ವನಿ ವಾರ್ತೆ) ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಬೃಹತ್ ಮಟ್ಟದ ಇಫ್ತಾರ್ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಯಶಸ್ವಿ ಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಈ ಕುರಿತಂತೆ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಿಯಾದ್ ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಅಧ್ಯಕ್ಷತೆ ವಹಿಸಿದರು. ಜೂನ್ 1 ರಂದು ಶುಕ್ರವಾರ ರಿಯಾದ್ ನ ಎಕ್ಸಿಟ್ 18 ರ ನೋಫಾ ಇಸ್ತಿರಾಹ ದಲ್ಲಿ ಆಯೋಜಿಲಾಗುವ ಈ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಎಲ್ಲರಿಗೂ ಭಾಗವಹಿಸುವ ಅವಕಾಶವಿದ್ದು ಸುಮಾರು ಒಂದು ಸಾವಿರ ಮಂದಿಗೆ ‘ಇಫ್ತಾರ್’ ನ ವ್ಯವಸ್ಥೆ ಕಲ್ಪಿಸಲಾಗುವುದು.

ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ನಝೀರ್ ಕಾಷಿಪಟ್ಣ ಹಾಗೂ ಕಾರ್ಯದರ್ಶಿಯಾಗಿ ಹನೀಫ್ ಕಣ್ಣೂರು ಆಯ್ಕೆಯಾದರು. ಉಳಿದಂತೆ ವಿವಿಧ ಉಪಸಮಿತಿಗಳಿಗೆ ಇಸ್ಮಾಯಿಲ್ ಜೋಗಿಬೆಟ್ಟು, ಅನ್ಸಾರ್ ಉಳ್ಳಾಲ್ ( ಹಣಕಾಸು) ಝಹೀರ್ ಉಳ್ಳಾಲ್ (ಪ್ರಚಾರ) ಸಲೀಂ ಕನ್ಯಾಡಿ, ರಮೀಝ್ ಕುಳಾಯಿ ( ಸಿದ್ಧತೆ, ನಿಯಂತ್ರಣ) ಮುಸ್ತಫಾ ಸಅದಿ, ಸಿದ್ದೀಕ್ ಸಖಾಫಿ, ಇಲ್ಯಾಸ್ ಲತೀಫಿ, ಅಬ್ದುಲ್ಲಾ ಸಖಾಫಿ ( ವೇದಿಕೆ, ಕಾರ್ಯಕ್ರಮ) ಸೇರಿದಂತೆ 21 ಮಂದಿಯನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಝೋನ್ ಗೊಳಪಟ್ಟ ವಿವಿಧ ಸೆಕ್ಟರ್ ಗಳ ನಾಯಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಅಧ್ಯಕ್ಷ ಹನೀಫ್ ಬೆಳ್ಳಾರೆ, ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಹಾಗೂ ಕೋಶಾಧಿಕಾರಿ ಇಸ್ಮಾಯಿಲ್ ಕಣ್ಣಂಗಾರ್ ಇವರನ್ನು ಸ್ವಾಗತ ಸಮಿತಿಯ ವಿಶೇಷ ಸಲಹೆಗಾರರನ್ನಾಗಿ ನೇಮಿಸಲಾಯಿತು. ಆರಂಭದಲ್ಲಿ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಸ್ವಾಗತಿಸಿ ಕೊನೆಯಲ್ಲಿ ಜತೆ ಕಾರ್ಯದರ್ಶಿ ಹಬೀಬ್ ಟಿ.ಹೆಚ್ ಧನ್ಯವಾದ ಅರ್ಪಿಸಿದರು.

error: Content is protected !! Not allowed copy content from janadhvani.com