ಮಂಗಳೂರು ಮೇ.8: ಪ್ರಮುಖ ಧಾರ್ಮಿಕ ಪಂಡಿತರೂ, ಖ್ಯಾತ ವಾಗ್ಮಿಯೂ ಸುನ್ನೀ ಸಂಘ ಸಂಸ್ಥೆಗಳ ಧೀಮಂತ ನಾಯಕರೂ ಆಗಿದ್ದ ನೆಕ್ಕಿಲಾಡಿ ಇಸ್ಮಾಈಲ್ ಮದನಿ ಉಸ್ತಾದ್ ವಫಾತ್.
ಅವರು ತಮ್ಮ ನಿವಾಸದಲ್ಲಿ ಬಿದ್ದು, ತಲೆಗೆ ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗೀ ಆಸ್ಪತ್ರೆಯೊಂದರಲ್ಲಿ ತೀವ್ರನಿಗಾ ವಿಭಾಗದಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಮ್ಮನ್ನಗಲಿದ್ದಾರೆ. ಅವರಿಗೆ 68 ವರ್ಷ ಪ್ರಾಯವಾಗಿತ್ತು.ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗ, ಸ್ನೇಹಿತರನ್ನು ಅಗಲಿದ್ದಾರೆ.
ಸದ್ರಿ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡಿನ ಮುಫತ್ತಿಷರಾಗಿ ಸೇವೆ ಗೆಯ್ಯುತ್ತಿದ್ದ ಉಸ್ತಾದರು ಕರ್ನಾಟಕದ ಹಲವಾರು ಮೋಹಲ್ಲಾಗಳಲ್ಲಿ ಮುದರ್ರಿಸ್,ಖತೀಬ್ ರಾಗಿ ಸೇವೆ ಗೈದಿದ್ದಾರೆ.ಇವರು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಎಸ್‍ಇಡಿಸಿ, ಜಂಇಯ್ಯತ್ತುಲ್ ಮುಫತ್ತಿಶೀನ್ ಸೇರಿದಂತೆ ಹಲವಾರು ಸಂಘಟನೆಗಳ ಸಾರಥ್ಯ ವಹಿಸಿದ್ದರು.
ಮೂಲತಃ ತುಂಬೆ,ವಳವೂರಿನವರಾದ ಉಸ್ತಾದರು,ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಎಂಬ ಪ್ರದೇಶದಲ್ಲಿ ಸೇವೆ ಗೈಯ್ಯುತ್ತಿದ್ದ ಸಂದರ್ಭದಲ್ಲಿ ಕೇಳುಗರ ಮನಮುಟ್ಟುವಂತೆ ಬ್ಯಾರೀ ಭಾಷೆಯಲ್ಲಿ ಧಾರ್ಮಿಕ ಬೋಧನೆ ನೀಡುತ್ತಾ ಭಾಷಣಾ ರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿ, ನೆಕ್ಕಿಲಾಡಿ ಉಸ್ತಾದ್ ಎಂದೇ ಖ್ಯಾತರಾದರು. ಅವರು ಸೇವೆ ಗೈಯ್ಯುವ ಊರಿಗೆ ಹೊಂದಿಕೊಂಡ ಭಾಷೆಯಲ್ಲೇ ಧಾರ್ಮಿಕ ಬೋಧನೆ ನೀಡಿ, ಆ ಮೊಹಲ್ಲಾವನ್ನು ಧಾರ್ಮಿಕ ಅಭಿವೃದ್ಧಿ ಪಡಿಸುವಲ್ಲಿ ಸಫಲರಾಗಿದ್ದರು.
ಸಮೀಪ ದಿವಸಗಳಲ್ಲಿ ‘ಮಯ್ಯಿತ್ ಪರಿಪಾಲನೆ’ ಎಂಬ ವಿಷಯದಲ್ಲಿ ಹಲವು ಕಡೆ ಬ್ಯಾರಿ ಭಾಷೆಯಲ್ಲಿ ತರಬೇತಿ ನೀಡಿ ಹಿರಿಯ,ಕಿರಿಯರೆನ್ನದೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು,ಸಾಮಾಜಿಕ ಮಾಧ್ಯಮಗಳಲ್ಲಿ ಉಸ್ತಾದರ ಈ ತರಗತಿಯು ವೈರಲ್ ಆಗಿದೆ.ಎಲ್ಲರೊಂದಿಗೂ ನಗುಮುಖದೊಂದಿಗೆ ವ್ಯವಹರಿಸುತ್ತಿದ್ದ ಉಸ್ತಾದರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ನೆಕ್ಕಿಲಾಡಿ ಉಸ್ತಾದ್ ಅವರ ಅಕಾಲಿಕ ನಿಧನಕ್ಕೆ ಹಿರಿಯ ಧಾರ್ಮಿಕ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಎ.ಪಿ ಉಸ್ತಾದ್ ಸಂತಾಪ:
ಕರ್ನಾಟಕದಲ್ಲಿ,ಪ್ರತ್ಯೇಕವಾಗಿ ದಕ್ಷಿಣಕನ್ನಡ ಭಾಗದಲ್ಲಿ ಸುನ್ನತ್ ಜಮಾಅತ್ತಿನ ಬೆನ್ನೆಲುಬಾಗಿ ಕಾರ್ಯಾಚರಿಸುತ್ತಿದ್ದ ನೆಕ್ಕಿಲಾಡಿ ಇಸ್ಮಾಯಿಲ್ ಹಾಜಿ ಯವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ. ನಾವು ಪರಸ್ಪರ ಆಪ್ತರಾಗಿದ್ದೆವು, ಉಸ್ತಾದರ ಪಾರತ್ರಿಕ ಜೀವನವನ್ನು ಅಲ್ಲಾಹು ಬೆಳಗಿಸಲಿ ಎಂದು ಸದ್ಯ ಅಬುದಾಭಿಯಲ್ಲಿರುವ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರು ಸಂತಾಪ ಸೂಚಿಸಿದ್ದಾರೆ.
ನೆಕ್ಕಿಲಾಡಿ ಉಸ್ತಾದರು ನಡೆಸಿ ಕೊಟ್ಟ ‘ಮಯ್ಯಿತ್ ಪರಿಪಾಲನೆ’ ತರಬೇತಿಗಳಲ್ಲಿ ಕೆಲವು
Inna lillahi wa inna ilaihi ra’ajioon
InnalillAhi wa inna ilaihi raajihoon
innalillahi wainna ilaihi rajioon
Innalillahi wa Innalillahi rajihoon