janadhvani

Kannada Online News Paper

ನೆಲ್ಯಾಡಿ: ಮನೆಗೆ ನುಗ್ಗಿದ ಕಳ್ಳರು ಸರ, ಹಣದೊಂದಿಗೆ ಪರಾರಿ

ನೆಲ್ಯಾಡಿ, ಎ.27. ಯಾರೂ ಇಲ್ಲದ ವೇಳೆ ಮನೆಯ ಒಳನುಗ್ಗಿರುವ ಕಳ್ಳರು ಮನೆಯಲ್ಲಿಟ್ಟಿದ್ದ ಹಣ ಹಾಗೂ ಒಡವೆಗಳನ್ನು ದೋಚಿದ ಘಟನೆ ನೆಲ್ಯಾಡಿಯಲ್ಲಿ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ.

ನೆಲ್ಯಾಡಿ ಬಸ್ ನಿಲ್ದಾಣ ಬಳಿಯ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಶೇಖ್ ಇಮಾಂ ಸಾಹೇಬ್ ಎಂಬವರು ಕುಟುಂಬ ಸಮೇತ ಬುಧವಾರದಂದು ಸುಳ್ಯದ ಸಂಬಂಧಿಕರ ಮನೆಗೆ ಮದುವೆಗೆಂದು ಹೋಗಿದ್ದರು.ಶುಕ್ರವಾರ ಸಂಜೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿಟ್ಟಿದ್ದ ಹಣ ಹಾಗು ಚಿನ್ನಗ ಸರವನ್ನು ಕಳ್ಳರು ದೋಚಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಇಮಾಂ ಸಾಹೇಬ್ ನೀಡಿದ ದೂರಿನಂತೆ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲ್ ನಾಯ್ಕ್, ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆಗಾಗಿ ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಕರೆಸಲಾಗಿದೆ.

error: Content is protected !! Not allowed copy content from janadhvani.com