janadhvani

Kannada Online News Paper

1

ಎಸ್‌ವೈಎಸ್ ದೇರಳಕಟ್ಟೆ ಝೋನ್ ಅಸ್ತಿತ್ವಕ್ಕೆ ; ನೂತನ ಸಾರಥಿಗಳ ಆಯ್ಕೆ

ದೇರಳಕಟ್ಟೆ; ಸುನ್ನೀ ಯುವಜನ ಸಂಘ (SYS) ಇದರ ದೇರಳಕಟ್ಟೆ ಝೋನ್ ರೂಪೀಕರಣ ಸಭೆಯು ಇಸ್ಮಾಈಲ್ ಸ‌ಅದಿ ಉರುಮಣೆ ರವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ರಹ್ಮಾನಿಯಾ ಮದರಸದಲ್ಲಿ ನಡೆಯಿತು. ಎಸ್‌ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಇಸ್ಹಾಕ್ ಝುಹ್ರಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಶ್ರಫ್ ಕಿನಾರ, ಕೆ.ಇ.ಸಾಲೆತ್ತೂರ್ ರಝ್ವಿ ಹಾಜರಿದ್ದರು.

ಸಭೆಯಲ್ಲಿ ದೇರಳಕಟ್ಟೆ ಝೋನ್ ರೂಪೀಕರಿಸಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ತೌಸೀಫ್ ಸ‌ಅದಿ ಹರೇಕಳ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾಲಿಹ್ ರೆಂಜಾಡಿ, ಕೋಶಾಧಿಕಾರಿಯಾಗಿ ಉಸ್ಮಾನ್ ಝುಹ್ರಿ ಕಿನ್ಯ, ಉಪಾಧ್ಯಕ್ಷರಾಗಿ ಹನೀಫ್ ಕಾಮಿಲ್ ಸಖಾಫಿ ನಾಟೆಕಲ್, ದ‌ಅ್‌ವಾ ಕಾರ್ಯದರ್ಶಿಯಾಗಿ ಹೈದರ್ ಹಿಮಮಿ ಮಲಾರ್, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಫಾ ಸ‌ಅದಿ ಹರೇಕಳ, ಸೋಶಿಯಲ್ ಕಾರ್ಯದರ್ಶಿಯಾಗಿ ಉಸ್ಮಾನ್ ಫಜೀರ್, ಇಸಾಬಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕಿನ್ಯ, ಸಾಂತ್ವನ ಕಾರ್ಯದರ್ಶಿಯಾಗಿ ಹನೀಫ್ ಬದ್ಯಾರ್ ರವರು ಆರಿಸಲಾಯಿತು.

ಮೆಹ್‌ಬೂಬ್ ಸಖಾಫಿ ಕಿನ್ಯ ಸ್ವಾಗತಿಸಿ, ತೌಸೀಫ್ ಸ‌ಅದಿ ಹರೇಕಳ ಧನ್ಯವಾದವಿತ್ತರು.

1
1
1

error: Content is protected !! Not allowed copy content from janadhvani.com