janadhvani

Kannada Online News Paper

ಮಂಗಳಪೇಟೆ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಪ್ರಧಾನ ಕಾರ್ಯದರ್ಶಿ ಯಾಗಿ ಶರಫ್ರಾಝ್ ನವಾಝ್ ಆಯ್ಕೆ

ಮುಹ್‌ಯಿದ್ದೀನ್ ಜುಮಾ ಮಸ್ಜಿದ್ ಮಂಗಳಪೇಟೆ ಇದರ ವಾರ್ಷಿಕ ಮಹಾಸಭೆಯೂ ಇತ್ತೀಚಿಗೆ ಮುಹ್‌ಯಿದ್ದೀನ್ ಮದ್ರಸದಲ್ಲಿ ನಡೆಯಿತು. ಸಭೆಗೆ ನಿರ್ಗಮನ ಅಧ್ಯಕ್ಷರಾದ ಹಾಜಿ ಎಂ ಎ ಹಸನಬ್ಬ ನವರು ಸ್ವಾಗತ ಮಾಡಿದರು. ಸ್ಥಳೀಯ ಖತೀಬ್ ಅಡ್ವಕೇಟ್ ಶಫೀಖ್ ಸಖಾಫಿ ಯವರು ಸಭೆಯನ್ನು ಉದ್ಘಾಟಿಸಿದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಖ್ ರವರು ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದರು. ಬಳಿಕ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಹಮೀದ್, ಉಪಾಧ್ಯಕ್ಷರಾಗಿ ಅಶ್ರಫ್, ಮುಖ್ತಾರ್, ಪ್ರಧಾನ ಕಾರ್ಯದರ್ಶಿ ಯಾಗಿ ಶರಫ್ರಾಝ್ ನವಾಝ್, ಜೊತೆ ಕಾರ್ಯದರ್ಶಿ ಯಾಗಿ ಅಬ್ದುಲ್ ರಹ್ಮಾನ್, ಎಂ ಹೆಚ್ ಹಸನ್ ಝುಹ್‌ರಿ, ಲೆಕ್ಕ ಪರಿಶೋಧಕರಾಗಿ ಸೇಕುಞಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮರುಲ್ ಫಾರುಖ್ ಕೋಟೆಪುರ,ಮಯ್ಯದ್ದಿ, ಅಝರುದ್ದೀನ್,ಮುಹಮ್ಮದ್ ಇಕ್ಬಾಲ್, ಕಲಂದರ್, ಆದಿಲ್ ಮ‌ಅ್‌ರೂಫ್, ನಿಸಾರ್ ಅಹ್ಮದ್,ಅಬ್ದುಲ್ ಜಲೀಲ್ ರವರನ್ನು ಆಯ್ಕೆ ಗೊಳಿಸಲಾಯಿತು.

error: Content is protected !! Not allowed copy content from janadhvani.com