ದಮ್ಮಾಮ್ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ದಮ್ಮಾಮ್ ರೋನ್ ಅಧೀನದ ದಮ್ಮಾಮ್ ಘಟಕದ 28 ನೇ ವಾರ್ಷಿಕ ಮಹಾಸಭೆಯು ಫೆ. 2-2023 ಡಿಕೆಯಸ್ಸಿ ದಮ್ಮಾಮ್ ಹಾಲ್ ನಲ್ಲಿ ಜರಗಿತು.
ದಮ್ಮಾಮ್ ಘಟಕದ ಅಧ್ಯಕ್ಷ ರಾದ ಅಬೂಬಕ್ಕರ್ ಅಜಿಲಮೊಗರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಸ್ತಫಾ ದಾರಿಮೀ ಉಸ್ತಾದ್ ದುಆ ನೆರವೇರಿಸಿದರು. ಸಿದ್ದೀಖ್ ಖಿರಾಅತ್ ಪಠಿಸಿದರು.ಸ್ಥಾಪಕ ಸದಸ್ಯ ಅಬ್ದುಲ್ ಅಝೀಜ್ ಮೂಡುತೋಟ ಸ್ವಾಗತಿಸಿದರು.
ಅಧ್ಯಕ್ಷರಾದ ಅಬೂಬಕ್ಕರ್ ಅಜಿಲಮೊಗರು ಮಾತನಾಡಿ, ನಮ್ಮ ಅಧಿಕಾರವಧಿಯಲ್ಲಿ ಡಿಕೆಯಸ್ಸಿ ಗಾಗಿ ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತಕ್ಕುದಾದ ಪ್ರತಿಫಲ ಅಲ್ಲಾಹು ದ್ವಿಲೋಕದಲ್ಲೂ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
2023-24 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ದಮ್ಮಾಮ್ ರೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೊಯಲ್ ಮುಕ್ವೆ ರಚಿಸಿದರು.
ಅಧ್ಯಕ್ಷರಾಗಿ ಸಯ್ಯದ್ ಬಾವಾ ಬಜ್ಜೆ, ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಅಜಿಲಮೊಗರು, ಕೋಶಾಧಿಕಾರಿಯಾಗಿ ಉಮರಬ್ಬ ಮರವೂರು, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಜ್ ಮೂಡುತೋಟ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಇಸ್ಮಾಯೀಲ್ ಕಾಟಿಪಳ್ಳ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಮುಸ್ತಫಾ ಕಾಟಿಪಳ್ಳ, ಝಬೀರ್ ಮಂಗಳೂರು ಹಾಗೂ ತಸ್ ಲೀಂ ಉಪ್ಪಿನಂಗಡಿ , ಜೊತೆ ಕಾರ್ಯದರ್ಶಿಗಳಾಗಿ ಶೌಕತ್ ತೀರ್ಥಹಳ್ಳಿ, ಇಮ್ಮಿಯಾಜ್ ಕೂಳೂರು, ಬದ್ರುದ್ದೀನ್ ಕೊಲ್ನಾಡ್ ರವರನ್ನು ನೇಮಿಸಲಾಯಿತು.
ಸಲಹಾ ಸಮಿತಿಗೆ ಅಬ್ದುಲ್ ಕರೀಂ ಮೂಳೂರು, ಸಿದ್ದೀಖ್ ಕೊಂಚಾರ್ ಹಾಗೂ ಮುಹಮ್ಮದ್ ಹಸನ್ ಮೂಡುತೋಟ, ಸಂಚಾಲಕ ರಾಗಿ ಹಸನ್ ಬಾವ ಕುಪ್ಪೆಪದವು, ಜಮಾಲ್ ಉಚ್ಚಿಲ ಹಾಗೂ ಹನೀಫ್ ಪರಂಗಿಪೇಟೆ ಮತ್ತು 20 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಸದಸ್ಯರು: ಮುಹಮ್ಮದ್ ಕೊಂಚಾ, ಬದ್ರುದ್ದೀನ್ ತಡಂಬೈಲ್, ಅಬ್ದುಲ್ ಹಮೀದ್ ಕೊಲ್ನಾಡ್, ನಜೀರ್ ಕಾನ, ಅಬ್ದುರಹ್ಮಾನ್ ಕುಪ್ಪೆಪದವು, ನಾಸಿರ್ ಸಾಗರ, ಮುಸ್ತಫಾ ತನ್ನೀರ್, ಅಲ್ತಾಫ್ ಚೊಕ್ಕಬೆಟ್ಟು, ಉಮರ್ ಮಣಿಪುರ, ಉಸ್ಮಾನ್ ಕಣ್ಣಂಗಾರ್, ನವಾಝ್, ಅಬ್ದುಲ್ ಕರೀಂ ವಿಟ್ಲ, ಶರೀಫ್ ಬೇಲೂರು, ಹಬೀಬ್ ವಾಮಂಜೂರು, ರಫೀಖ್ ಕಣ್ಣೂರು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ದಮ್ಮಾಮ್ ರೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರಹ್ಮಾನ್ ಪಾಣಾಜೆ, ಹಾತಿಂ ಕೂಳೂರು, ಅಬ್ದುಲ್ ಹಮೀದ್ ಉಳ್ಳಾಲ, ಮುಸ್ತಫಾ ಮೈನ, ಅಶ್ರಫ್ ಚಿಕ್ಕಮಗಳೂರು ಆಗಮಿಸಿದ್ದರು,
ದಮ್ಮಾಮ್ ಘಟಕ ಉಸ್ತುವಾರಿ ಅಬೂಬಕ್ಕರ್ ಬರ್ವ, ಅಬ್ದುಲ್ ಖಾದರ್ ಹಾಜಿ ಸಶ್ಲೇಶಪುರ, ಸ್ಥಾಪಕ ಸದಸ್ಯ ಮೈನುದ್ದೀನ್ ಮುಕ್ವೆ ಸಮಾರಂಭಕ್ಕೆ ಶುಭಕೋರಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸಯ್ಯದ್ ಬಾವ ಬಜ್ಜೆ ಮಾತನಾಡುತ್ತಾ ತಾವುಗಳೆಲ್ಲರೂ ಡಿಕೆಯಸ್ಸಿ ಗಾಗಿ ಹೆಚ್ಚಿನ ಮುತುವರ್ಜಿಯಿಂದ ಕಾರ್ಯಾಚರಿಸಿ,ಡಿಕೆಯಸ್ಸಿಯ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ವಿನಂತಿಸಿದರು.ನೂತನ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ಧನ್ಯವಾದ ಗೈದರು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ