ರಿಯಾದ್: ಸೌದಿ ಅರೇಬಿಯಾ ಉಮ್ರಾ ಯಾತ್ರಿಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದು, ಒಂದು ವರ್ಷದ ಅವಧಿಯ ಉಮ್ರಾ ವೀಸಾವನ್ನು ಪರಿಚಯಿಸಿದೆ. ಹಜ್ ಮತ್ತು ಉಮ್ರಾ ಸಚಿವಾಲಯವು ಒಂದು ವರ್ಷದ ಅವಧಿಯ ‘ಮಲ್ಟಿಪಲ್ ಎಂಟ್ರಿ’ (Multiple Entry) ಉಮ್ರಾ ವೀಸಾವನ್ನು ಘೋಷಿಸಿದೆ. ಈ ವೀಸಾ ಅವಧಿಯಲ್ಲಿ ಹಲವು ಬಾರಿ ದೇಶಕ್ಕೆ ಬರಲು ಮತ್ತು ಗರಿಷ್ಠ 90 ದಿನಗಳವರೆಗೆ ತಂಗಲು ಸಾಧ್ಯವಾಗಲಿದೆ.
ವೀಸಾ ಮಂಜೂರಾದ ದಿನದಿಂದ ಒಂದು ವರ್ಷದವರೆಗೆ ಈ ವೀಸಾದ ಅವಧಿ ಜಾರಿಯಲ್ಲಿರುತ್ತದೆ. ಈ ಅವಧಿಯೊಳಗೆ ಒಟ್ಟು 90 ದಿನಗಳವರೆಗೆ ಸೌದಿಯಲ್ಲಿ ತಂಗಬಹುದು. ಪ್ರತಿಯೊಬ್ಬರೂ ಬಂದಿಳಿದು ಹಿಂತಿರುಗುವಾಗ, ಅವರು ತಂಗಿದ ದಿನಗಳನ್ನು ಈ 90 ದಿನಗಳಿಂದ ಕಳೆಯಲಾಗುತ್ತದೆ (ಡಿಡಕ್ಟ್ ಮಾಡಲಾಗುತ್ತದೆ).
ಹಜ್ ಅವಧಿಯಲ್ಲಿ ನಿಯಂತ್ರಣ
ಹಜ್ ಸಮಯದಲ್ಲಿ ಈ ವೀಸಾಗೆ ನಿಯಂತ್ರಣವಿರುತ್ತದೆ. ದುಲ್ ಕಅದ್ 1 ರಿಂದ ದುಲ್ ಹಿಜ್ಜಾ 13 ರವರೆಗಿನ ಹಜ್ ಸೀಸನ್ನಲ್ಲಿ ಈ ವೀಸಾ ಬಳಸಿ ಸೌದಿಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಈ ವೀಸಾದಲ್ಲಿ ಬರುವವರು ಪ್ರತಿ ಭೇಟಿಯಲ್ಲೂ ‘ನುಸುಕ್’ (Nusuk) ಪ್ಲಾಟ್ಫಾರ್ಮ್ ಮೂಲಕ ಅಧಿಕೃತ ಕಂಪನಿಗಳಿಂದ ಉಮ್ರಾ ಪ್ಯಾಕೇಜ್ ಖರೀದಿಸುವುದು ಕಡ್ಡಾಯವಾಗಿದೆ. ಪ್ಯಾಕೇಜ್ನ ಅವಧಿಯು ವೀಸಾದಲ್ಲಿ ಬಾಕಿ ಇರುವ ದಿನಗಳಿಗಿಂತ ಹೆಚ್ಚಿರಬಾರದು. ಸೌದಿಗೆ ಪ್ರಯಾಣಿಸುವ ಮೊದಲು ‘ನುಸುಕ್’ ಆಪ್ ಮೂಲಕ ಉಮ್ರಾ ಪರ್ಮಿಟ್ (ಅನುಮತಿ) ಪಡೆದುಕೊಳ್ಳಬೇಕು.
ಮೊದಲ ಬಾರಿಗೆ ಬರುವಾಗ ನುಸುಕ್ ಮೂಲಕ ಪ್ಯಾಕೇಜ್ ಪಡೆದು ವೀಸಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ನಂತರ ಅದೇ ವೀಸಾದಲ್ಲಿ ಮತ್ತೆ ಬರುವಾಗ, ಹೊಸ ಪ್ಯಾಕೇಜ್ ಪಡೆದು ನುಸುಕ್ ಆಪ್ ಮೂಲಕ ಮತ್ತೆ ಪರ್ಮಿಟ್ ಪಡೆದುಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ತಲುಪಿದಾಗ ಮತ್ತು ಹಿಂತಿರುಗುವಾಗ ನಿಮ್ಮ ವೀಸಾದಲ್ಲಿ ಬಾಕಿ ಇರುವ ದಿನಗಳು ಸಿಸ್ಟಮ್ನಲ್ಲಿ ಅಪ್ಡೇಟ್ ಆಗಲಿದೆ.
ಈ ಯೋಜನೆಯು ಪ್ರಪಂಚದಾದ್ಯಂತದ ಮುಸ್ಲಿಂ ಯಾತ್ರಿಕರಿಗೆ ಉಮ್ರಾ ನಿರ್ವಹಿಸಲು ಮತ್ತು ಸೌದಿ ಅರೇಬಿಯಾದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲು ಸುಲಭ ಮತ್ತು ಅನುಕೂಲಕರ ವಾತಾವರಣವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ವಿದ್ಯುನ್ಮಾನ (Online/E-visa) ವ್ಯವಸ್ಥೆಯ ಮೂಲಕ ಸುಲಭವಾಗಿ ಈ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು