ಜಿದ್ದಾ: ಸೌದಿ ಅರೇಬಿಯಾ ಸೇರಿದಂತೆ ತನ್ನ ಅಂತಾರಾಷ್ಟ್ರೀಯ ವಿಮಾನ ಸೇವೆಗಳಿಗೆ ಶೇಕಡಾ 15 ರವರೆಗೆ ಟಿಕೆಟ್ ದರ ಕಡಿತವನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಿಸಿದೆ. ಜುಲೈ ಒಂಬತ್ತರವರೆಗೆ ಟಿಕೆಟ್ ಬುಕ್ ಮಾಡುವವರಿಗೆ ಈ ಆಫರ್ ಲಭ್ಯವಿರಲಿದೆ. ರಜಾದಿನಗಳನ್ನು ಆಚರಿಸಲು ತಾಯ್ನಾಡಿಗೆ ಪ್ರಯಾಣಿಸುವ ಪ್ರವಾಸಿಗರಿಗೆ (ಅನಿವಾಸಿಗಳಿಗೆ) ಈ ಪ್ರಕಟಣೆ ದೊಡ್ಡ ಸಮಾಧಾನ ತಂದಿದೆ.
ಇಂದಿನಿಂದಲೇ ಈ ಟಿಕೆಟ್ ದರ ಕಡಿತದ ಸೌಲಭ್ಯ ಲಭ್ಯವಾಗಲಿದೆ. ಮುಂದಿನ ವರ್ಷದ ಮಾರ್ಚ್ 27 ರವರೆಗಿನ ಪ್ರಯಾಣದ ಅವಧಿಗೆ ಈ ರಿಯಾಯಿತಿ ಸಿಗಲಿದೆ. ಇದಕ್ಕಾಗಿ ಜುಲೈ 9 ರ ಒಳಗಾಗಿ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಡಿಮೆ ದರ ಮತ್ತು ಸ್ಟ್ಯಾಂಡರ್ಡ್ ದರ ಹೊಂದಿರುವ ‘ಎಕ್ಸ್‌ಪ್ರೆಸ್ ಲೈಟ್’ ಮತ್ತು ‘ಎಕ್ಸ್ ವ್ಯಾಲ್ಯೂ’ ಟಿಕೆಟ್‌ಗಳಲ್ಲಿ ಈ ರಿಯಾಯಿತಿ ಅನ್ವಯಿಸುತ್ತದೆ. ಮೊಬೈಲ್ ಆಪ್ ಹಾಗೂ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡುವವರಿಗೆ ಯಾವುದೇ ಬುಕ್ಕಿಂಗ್ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಇದರೊಂದಿಗೆ, ಒಂದು ಬಾರಿ ಉಚಿತವಾಗಿ ಪ್ರಯಾಣದ ದಿನಾಂಕವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಒಮಾನ್, ಬಹ್ರೇನ್, ಸಿಂಗಾಪುರ, ಬ್ಯಾಂಕಾಕ್ ಮತ್ತು ಫುಕೆಟ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವಲಯಗಳ ಪ್ರಯಾಣಕ್ಕೆ ಈ ಆಫರ್ ಅನ್ವಯವಾಗುತ್ತದೆ.
















ಇನ್ನಷ್ಟು ಸುದ್ದಿಗಳು
ಸಾದು ಹಾಜಿ: ಸಾಗ್ ಕುಟುಂಬದ ಪರಂಪರೆಯ ದಾರಿದೀಪ
ಗುರುವಾಯನಕೆರೆಯಲ್ಲಿ ನಾಳೆ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’
ಸಾಗ್ ಕುಟುಂಬದ ‘ಗ್ರ್ಯಾಂಡ್ ಫ್ಯಾಮಿಲಿ ಮೀಟ್-2026: ಮೀಲಾದುನ್ನಬಿ ﷺ ಸಮಾವೇಶ ಹಾಗೂ ದುಆ ಮಜ್ಲಿಸ್
BFR ಕಾಟಿಪಳ್ಳ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ- ಆನ್ಲೈನ್ ಸ್ಪರ್ಧೆಗಳು
ಕರಾವಳಿ ಐಕ್ಯತಾ ವೇದಿಕೆಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ನೆಲ್ಲಿಕಾರ್ ಮದ್ರಸ ದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
ಬಜಗೋಳಿ ನೂರುಲ್ ಹುದಾ ಜುಮ್ಮಾ ಮಸೀದಿ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ