janadhvani

Kannada Online News Paper

ಸೌದಿ: ಹೆಚ್ಚು ಕುಟುಂಬ ಸದಸ್ಯರನ್ನು ಸಂದರ್ಶಕ ವೀಸಾದಲ್ಲಿ ತರಲು ಅವಕಾಶ

ಈ ಹಿಂದೆ, ವಲಸಿಗರ ಪೋಷಕರು, ಪತ್ನಿ, ಮಕ್ಕಳು ಮತ್ತು ಪತ್ನಿಯ ಪೋಷಕರನ್ನು ಮಾತ್ರ ಸಂದರ್ಶಕ ವೀಸಾದಲ್ಲಿ ತರಲು ಅವಕಾಶವಿತ್ತು.

ರಿಯಾದ್: ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ವಿದೇಶಿಗರು ತಮ್ಮ ಹೆಚ್ಚಿನ ಸಂಬಂಧಿಕರನ್ನು ಸಂದರ್ಶಕ ವೀಸಾದಲ್ಲಿ ಕರೆತರಲು ಅವಕಾಶ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವೆಬ್‌ಸೈಟ್‌ನಲ್ಲಿ ಈ ಹಿಂದೆ ಲಭ್ಯವಿಲ್ಲದ ಕೆಲವು ವಿಭಾಗಗಳನ್ನು ಒಳಪಡಿಸಿದೆ.

ಈ ಹಿಂದೆ, ವಲಸಿಗರ ಪೋಷಕರು, ಪತ್ನಿ, ಮಕ್ಕಳು ಮತ್ತು ಪತ್ನಿಯ ಪೋಷಕರನ್ನು ಮಾತ್ರ ಸಂದರ್ಶಕ ವೀಸಾದಲ್ಲಿ ತರಲು ಅವಕಾಶವಿತ್ತು. ನಂತರ, ಕೆಲವು ಸಂಬಂಧಿಕರನ್ನು ‘ಇತರರು’ ವರ್ಗದ ಅಡಿಯಲ್ಲಿ ತರಲು ಅನುಮತಿ ನೀಡಲಾಗಿತ್ತು.

ಇದೀಗ ಈಗ ಪಟ್ಟಿಯನ್ನು ವಿಸ್ತರಿಸಲಾಗಿದ್ದು, ತಾಯಿಯ ಸಹೋದರ,ಸಹೋದರಿಯರು, ತಂದೆಯ ಸಹೋದರ, ಸಹೋದರಿಯರು, ತಂದೆಯ ತಂದೆ, ತಾಯಿಯ ತಂದೆ, ಮೊಮ್ಮಕ್ಕಳು ಮತ್ತು ಸೋದರಸಂಬಂಧಿಗಳ ಮಕ್ಕಳು ಸಹ ಪಟ್ಟಿಯಲ್ಲಿ ಸೇರಿಲಾಗಿದೆ.

ಇದರೊಂದಿಗೆ, ಬಹುತೇಕ ಎಲ್ಲಾ ರೀತಿಯ ವಲಸಿಗರ ಸಂಬಂಧಿಕರು ಕೌಟುಂಬಿಕ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಅವಕಾಶವನ್ನು ಹೊಂದಿರುತ್ತಾರೆ. ಅದರ ಹೊರತಾಗಿ ಇತರೆ ಎಂಬ ಅಂಕಣವೂ ಇದೆ. ಮೇಲಿನ ಪಟ್ಟಿಯಲ್ಲಿಲ್ಲದ ಸಂಬಂಧಿಕರನ್ನು ಸೇರಿಸಲು ಇದನ್ನು ಬಳಸಬಹುದಾಗಿದೆ.

ಇತ್ತೀಚೆಗೆ, ತಾಯಿ ಮತ್ತು ತಂದೆಯ ಸಹೋದರ ಸಹೋದರಿಯರಿಗೆ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಈಗ ಅವರಿಗೆ ವೀಸಾ ಲಭಿಸಲಿದೆ. ವೀಸಾ ಸ್ಟಾಂಪಿಂಗ್ ಪ್ರಕ್ರಿಯೆಯಲ್ಲಿ ಅರ್ಜಿದಾರರು ತಮ್ಮ ಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ಸೌದಿ ದೂತಾವಾಸಕ್ಕೆ ನೀಡಬೇಕಾಗಿದೆ.

error: Content is protected !! Not allowed copy content from janadhvani.com