ಸುನ್ನಿ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಆಶ್ರಯದಲ್ಲಿ ಡಿಸೆಂಬರ್ 9 ಶುಕ್ರವಾರ ಸಾಯಂಕಾಲದಿAದ ಡಿಸೆಂಬರ್ 10 ಶನಿವಾರ ಸಾಯಂಕಾಲದವರೆಗೆ ಬೃಹತ್ ಉಲಮಾ ಸಂಗಮವು ಕಾವಲ್‌ಕಟ್ಟೆಯ ಅಲ್ ಖಾದಿಸಾ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆಯುವ ಸಂಗಮವು ಇಂದು ಸಾಯಂಕಾಲ 4.00ಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಹಝ್ರತ್ ಡಾ. ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್‌ಕಟ್ಟೆ ಧ್ವಜಾರೋಹಣ ಮೂಲಕ ಪ್ರಾರಂಭಗೊಳ್ಳಲಿದೆ.
ಸಾಯAಕಾಲ 4.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಯ್ಯಿದ್ ಇಸ್ಮಾಯಿಲ್ ತಂಞಲ್ ಉಜಿರೆ ದುಆಗೈಯ್ಯಲಿದ್ದು, ಕೆ ಎಸ್ ಆಟಕೋಯ ತಂಙಲ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಅಬ್ದುಲ್ ರಜಾಕ್ ಮದನಿ ವಳವೂರು ಪ್ರಾಸ್ತಾವಿಕ ಬಾಷಣ ಮಾಡಲಿದ್ದಾರೆ.
ಮಗ್ರಿಬ್ ಬಳಿಕ ‘ತಪ್ಪು ಕಲ್ಪನೆಗೊಳಗಾಗಿರುವ ಜಿಹಾದ್’ ಎಂಬ ವಿಷಯದ ಬಗ್ಗೆ ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಶೋಲ ಹಾಗೂ ರಾತ್ರಿ 9.00 ಕ್ಕೆ ‘ಆಧುನಿಕತೆಯ ಅರಿವಿನಲ್ಲಿ ವಿವಾಹ’ ಎಂಬ ವಿಷಯದ ಬಗ್ಗೆ ಸ್ವಾಲಿಹ್ ಸಅದಿ ತಳಿಪ್ಪರಂಬು ವಿಷಯ ಮಂಡಿಸಲಿದ್ದಾರೆ. ಡಿಸೆಂಬರ್ 10 ರಂದು ಬೆಳಿಗ್ಗೆ 6.30 ಕ್ಕೆ ಇಲ್ಮ್ ಮತ್ತು ತಸವ್ವುಫ್ ಎಂಬ ವಿಷಯದ ಬಗ್ಗೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, 8.00 ಕ್ಕೆ ಮದರಸಗಳ ಸುತ್ತಮುತ್ತ ಎಂಬ ವಿಷಯದಲ್ಲಿ ಅಬ್ದುಲ್ ಅಝೀಝ್ ಪೈಝಿ ಚೆರ್ವಾಡಿ, 10.00 ಕ್ಕೆ ‘ಆತ್ಮ ಶುದ್ದಿ’ ವಿಷಯದಲ್ಲಿ ಮೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, 11.30 ಕ್ಕೆ ‘ಇಸ್ಲಾಮೀ ದಅವತ್’ ಎಂಬ ವಿಷಯದಲ್ಲಿ ಸಯ್ಯಿದ್ ಇಬ್ರಾಹಿಮ್ ಖಲೀಲ್ ತಂಙಲ್ ಅಲ್ ಬುಖಾರಿ ಕಡಲುಂಡಿ ವಿಷಯ ಮಂಡಿಸಲಿರುವರು. ತರಗತಿಗಳಲ್ಲಿ ಕ್ರಮವಾಗಿ ಯುಕೆ ಮಹಮ್ಮದ್ ಸಅದಿ ವಳವೂರು, ಕೆ ಎಂ ಖಾಸಿಮ್ ಮದನಿ ಕರಾಯ, ಮಹ್ಮೂದ್ ಪೈಝಿ ವಾಲೆಮುಂಡೋವು, ಎನ್ ಎಮ್ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆ ಎಮ್ ಇಬ್ರಾಹಿಮ್ ಪೈಝಿ ಕನ್ಯಾನ, ಎಚ್ ಐ ಅಬೂ ಸುಫ್ ಯಾನ್ ಮದನಿ ಮುನ್ನುಡಿ ಭಾಷಣ ನಡೆಸುವರು.
ಅಪರಾಹ್ನ 2.00 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖಾಝಿ ಸಯ್ಯಿದ್ ಖುರ್ರತುಸ್ಸಾದಾತ್ ಪಝಲ್ ಕೋಯಮ್ಮ ತಂಙಲ್ ಕೂರತ್‌ರವರು ದುಆ ನಡೆಸಲಿದ್ದು ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಲ್ ಗುರುವಾಯನಕೆರೆ ಉದ್ಘಾಟಿಸಲಿದ್ದಾರೆ. ಸುನ್ನಿ ಜಮ್‌ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ ಪಿ ಹುಸೈನ್ ಸಅದಿ ಕೆಸಿರೋಡ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿರುವರು. ಸಯ್ಯಿದ್ ಎಪಿಎಸ್ ಹುಸೈನ್ ಅಲ್ ಅಹ್ದಲ್ ತಂಙಲ್ ಉಪ್ಪಳ್ಳಿ ಚಿಕ್ಕಮಗಳೂರು,ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಲ್ ಉಜಿರೆ, ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ತಂಙಲ್ ತಲಕ್ಕಿ, ಸಯ್ಯಿದ್ ಸಈದುದ್ದೀನ್ ತಂಙಲ್ ಶಿವಮೊಗ್ಗ, ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೆöÊಲಿ ತಂಙಲ್ ಕಾಜೂರು, ಸಯ್ಯಿದ್ ಹಬೀಬುಲ್ಲಾ ಪುಕೋಯ ತಂಙಲ್ ಪೆರುವಾಯಿ, ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಲ್ ತೀರ್ಥಹಳ್ಳಿ, ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಲ್ ಕಿಲ್ಲೂರು, ಸಯ್ಯಿದ್ ಪಝಲ್ ಜಮಾಲುಲ್ಲ್ಯೆಲಿ ತಂಙಲ್ ಸಬರಬೈಲ್ ವಾದಿ ಇರ್ಫಾನ್, ಸಯ್ಯಿದ್ ಹಾಮೀಮ್ ತಂಙಲ್ ಬಾಳೆಹೊನ್ನೂರು, ಬಿ ಎಚ್ ಅಬೂಸಾಲಿಹ್ ಮದನಿ ಆಲಡ್ಕ, ಕೆಎಂ ಹೈದರ್ ಮದನಿ ಕರಾಯ, ಅಬ್ಬಾಸ್ ಸಅದಿ ಪೆರ್ನೆ, ಎಸ್ ಡಿ ಶಾದುಲಿ ಪೈಝಿ ಕೊಟ್ಟಮುಡಿ ಕೊಡಗು ಉಪಸ್ಥಿತರಿರುವರು. ಅಲ್ಲದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಎರಡು ಸಾವಿರ ಉಲಮಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ