janadhvani

Kannada Online News Paper

ಹಾಫಿಝ್ ಮೊಹಮ್ಮದ್ ಆಸಿಮ್ – ಕೆಸಿಎಫ್ ಖತ್ತರ್ ನಿಯೋಗ ಭೇಟಿ

ದೋಹಾ : ಖತ್ತರ್ ಪ್ರವಾಸದಲ್ಲಿರುವ ಸಾಮಾಜಿಕ ಕಾರ್ಯಕರ್ತ, ಮಕ್ಕಳ ಹಕ್ಕುಗಳ ಹೋರಾಟಗಾರ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿ ವಿಜೇತ, ಹಾಫಿಝ್ ಮೊಹಮ್ಮದ್ ಆಸಿಮ್ ವೆಲಿಮನ್ನ (ಕೇರಳ) ರವರನ್ನು ಕೆಸಿಎಫ್ ಖತ್ತರ್ ರಾಷ್ಟ್ರೀಯ ನಾಯಕರು ದಿನಾಂಕ 07-12-2022 ರಂದು ದೋಹಾದಲ್ಲಿ ಭೇಟಿ ನೀಡಿದರು.

ಹುಟ್ಟಿನಿಂದಲೇ 90% ಶೇಕಡಾವಾರು ದೈಹಿಕ ಅಸಮರ್ಥತೆಯಿಂದ ಬಳಲುತ್ತಿದ್ದರೂ, ಆತ್ಮವಿಶ್ವಾಸದೊಂದಿಗೆ ಖುರ್’ಆನ್ ಕಂಠಪಾಠಗೊಳಿಸಿ ಹಾಫಿಝ್ ಪದವಿ ಅಲಂಕರಿಸುವುದರ ಜೊತೆಗೆ ಹಲವಾರು ಸಾಧನೆಗಳನ್ನು ತೋರಿಸಿದಕ್ಕಾಗಿ ಗೌರವಸೂಚಕವಾಗಿ ಖತ್ತರ್ ಕೆಸಿಎಫ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಖತ್ತರ್ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ, ಕೋಶಾಧಿಕಾರಿ ಮುನೀರ್ ಮಾಗುಂಡಿ, ಸಂಘಟನಾ ಅಧ್ಯಕ್ಷ ಮಿರ್ಶಾದ್ ಕನ್ಯಾನ, ಸಂಘಟನಾ ಕಾರ್ಯದರ್ಶಿ ರಿಶಾದ್ ಮದುವನ, ನಾಯಕರಾದ ಇಮ್ರಾನ್ ಕೂಳೂರು, ಆಶಿಕ್ ಬೈರಿಕಟ್ಟೆ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com