janadhvani

Kannada Online News Paper

ದಾರುಲ್ ಹಿಕ್ಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ಳಾರೆ ಸಂಭ್ರಮದ 75 ನೇ ಸ್ವಾತಂತ್ರೋತ್ಸವವ ಆಚರಣೆ

ಈ ವರದಿಯ ಧ್ವನಿಯನ್ನು ಆಲಿಸಿ

ಬೆಳ್ಳಾರೆ : ದಾರುಲ್ ಹಿಕ್ಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ಳಾರೆ ಇದರ ಆವರಣದಲ್ಲಿ ಸಂಭ್ರಮದ 75 ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ದಾರುಲ್ ಹಿಕ್ಮ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ರಶೀದ್ ಬೆಳ್ಳಾರೆ ಅವರು ಧ್ವಜಾರೋಹಣ ವನ್ನು ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಲಿಹ್ ಬೆಳ್ಳಾರೆ ಸ್ವಾತಂತ್ರ್ಯ ಹೋರಾಟ ಮತ್ತು ಸಧ್ಯದ ಭಾರತ ಪರಿಸ್ಥಿತಿ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕೇಂದ್ರ ಸಮಿತಿಯ ಕೋಶಾಧಿಕಾರಿ ಹಮೀದ್ ಆಲ್ಫಾ ವಹಿಸಿದರು . ಆಜಾದಿ ಅಮೃತ ಮಹೋತ್ಸವವಾದ ಅಂಗವಾಗಿ ರಾಷ್ಟ್ರೀಯತೆ ಮತ್ತು ರಾಷ್ಟ್ರಪ್ರೇಮ ವನ್ನು ಜಾಗೃತಿಗೊಳಿಸಲು ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಸ್ಪರ್ಧೆ, ಛದ್ಮ ವೇಷ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ನಡೆಯಿತು. ವಿಜಯಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಸ್ಸನ್ ಹಾಜಿ ಇಂದ್ರಾಜೆ, ಹನೀಫ್ ಬಿಸ್ಮಿಲ್ಲಾ , ಅಬೂಬಕ್ಕರ್ ಸೆಲೆಕ್ಟ್ , ಶರೀಫ್ ಕರ್ನಾಟಕ ಫರ್ನಿಚರ್ , ಮುನೀರ್ ಬೆಳ್ಳಾರೆ, ಉಮರ್ ಮಿಸ್ಬಾಹಿ, ಅಬೂಬಕ್ಕರ್ ಮುಚ್ಚಿಲ ಹಾಜರಿದ್ದರು. ಕಾರ್ಯಕ್ರವನ್ನು ಶಾಲಾನಾಯಕಿ ರಿಝ ಫಾತಿಮಾ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com