ಸಂಘಟನಾ ಚಟುವಟಿಕೆ ಶ್ರೇಷ್ಠ ಆರಾಧನೆಯಾಗಿದ್ದು ಸಮಾಜಕ್ಕೆ ನೆರವಾಗಲು ಎಲ್ಲಾ ಕಾರ್ಯಕರ್ತರು ಸಿದ್ಧರಾಗಬೇಕೆಂದು ಖಾಝಿ ಮಾಣಿ ಉಸ್ತಾದ್ ಕರೆ ನೀಡಿದರು. ಪಾಣೆ ಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ನ ಸರ್ಕಲ್ ಸಮಾವೇಶದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ರಾಜ್ಯಾಧ್ಯಂತ ನಡೆಯುವ ‘ಸರ್ಕಲ್ ಇನ್ ಸೈಟ್’ ಸರ್ಕಲ್ ಸಮಾವೇಶದ ಸಿದ್ಧತೆಗಾಗಿ ಆಯೋಜಿಸಿದ ಈ ಶಿಬಿರದಲ್ಲಿ ಸರ್ಕಲ್ ನ ಆಯ್ದ ಪ್ರತಿನಿಧಿಗಳು ಭಾಗವಹಿಸಿದರು. ‘ನಾಯಕತ್ವವನ್ನು ಅನುಭವಿಸಿರಿ’ ಎಂಬ ಘೋಷ ವಾಕ್ಯದೊಂದಿಗೆ ನಡೆಯುವ ಸರ್ಕಲ್ ಸಮಾವೇಶದ ಲಾಂಛನ, ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಎಸ್.ಪಿ.ಹಂಝ ಸಖಾಫಿ, ಅಬ್ದುಲ್ ಹಮೀದ್ ಬಜ್ಪೆ ವಿವಿಧ ವಿಷಯಗಳಲ್ಲಿ ಶಿಬಿರಾರ್ಥಿಗಳಿಗೆ ತರಭೇತಿ ನೀಡಿದರು. ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಪಿ.ಪಿ ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ರಹೀಂ ಸ ಅದಿ ಧನ್ಯವಾದವಿತ್ತರು. ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು. ಮುಸ್ಲಿಂ ಜಮಾಅತಿನ ನೂರಕ್ಕೂ ಮಿಕ್ಕ ಸರ್ಕಲ್ ಗಳಲ್ಲಿ ಮುಂದಿನ ಎರಡು ತಿಂಗಳು ‘ಸರ್ಕಲ್ ಇನ್ ಸೈಟ್’ ಕಾರ್ಯಕ್ರಮ ನಡೆಯಲಿದೆ .