janadhvani

Kannada Online News Paper

ಕಾಂತಪುರಂ ಉಸ್ತಾದರ ಆತ್ಮಕಥೆ ‘ವಿಶ್ವಾಸಪೂರ್ವಂ’ – ಸಿಎಂ ಪಿಣರಾಯಿ ವಿಜಯನ್ ಬಿಡುಗಡೆ

ಸಮಾರಂಭದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಯೋಜನೆಗಳಿಗಾಗಿ ಆರಂಭಿಸಲಾಗುತ್ತಿರುವ 'ಶೈಖ್ ಅಬೂಬಕ್ಕರ್ ಫೌಂಡೇಷನ್' ನ ಲೋಕಾರ್ಪಣೆ ಕೂಡ ನಡೆಯಿತು

ತಿರುವನಂತಪುರಂ | ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಆತ್ಮಕಥೆ ‘ವಿಶ್ವಾಸಪೂರ್ವಂ’ ಪುಸ್ತಕವನ್ನು ಕೇರಳ ರಾಜ್ಯ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್‌ ಬಿಡುಗಡೆ ಮಾಡಿದರು.

ತಿರುವನಂತಪುರಂ ಹಯಾತ್ ರೀಜೆನ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಶಶಿ ತರೂರ್ ಅವರು ಪುಸ್ತಕದ ಮೊದಲ ಆವೃತ್ತಿಯನ್ನು ಮುಖ್ಯಮಂತ್ರಿಗಳಿಂದ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಉದ್ಯಮ ಕ್ಷೇತ್ರದಲ್ಲಿನ ಪ್ರಸಿದ್ಧ ವ್ಯಕ್ತಿಗಳು ಮತ್ತು ದೇಶ ಮತ್ತು ವಿದೇಶದ ಪ್ರಮುಖರು ಭಾಗವಹಿಸಿದ್ದರು.

ಸಮಾರಂಭದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಯೋಜನೆಗಳಿಗಾಗಿ ಆರಂಭಿಸಲಾಗುತ್ತಿರುವ ‘ಶೈಖ್ ಅಬೂಬಕ್ಕರ್ ಫೌಂಡೇಷನ್’ ನ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.

ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಕೇಂದ್ರೀಕೃತವಾಗಿರುವ ಸಂಶೋಧನಾ ಉಪಕ್ರಮವಾದ ಮಲಯ್‌ಬಾ‌ರ್ ಫೌಂಡೇಶನ್ ಫಾರ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್‌ನಿಂದ ಆತ್ಮಕಥೆ ‘ವಿಶ್ವಾಸಪೂರ್ವಂ’ ಪ್ರಕಟಿಸಲಾಗಿದೆ. ಪುಸ್ತಕದ ವಿತರಣಾ ಅಭಿಯಾನವನ್ನು ಸಮಸ್ತ ಕೇರಳ ಸುನ್ನಿ ಯುವಜನ ಸಂಘದ ಪ್ರಕಾಶನ ವಿಭಾಗವಾದ ರೀಡ್ ಪ್ರೆಸ್‌ ನಡೆಸುತ್ತಿದೆ. ಪುಸ್ತಕದ ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯವು ಇಂದಿಗೆ ಕೊನೆಗೊಳ್ಳುತ್ತದೆ.

ಕಾಂತಪುರಂ ಅವರ ಆತ್ಮಕಥೆಯು ಕೇರಳದ ವಿಶಿಷ್ಟ ರಾಜಕೀಯ ಮತ್ತು ಸಾಮಾಜಿಕ ಪರಿಸರದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.