janadhvani

Kannada Online News Paper

ದುಬೈ: ಹಿಂದೂಗಳಿಗೆ ಮಾತ್ರ ಉದ್ಯೋಗಾವಕಾಶ- GBMT ಕಂಪೆನಿಯಿಂದ ಸ್ಪಷ್ಟೀಕರಣ

ಈ ನೋಟೀಸಿನ ಹಿಂದೆ ಯಾರೆಂದು ಗೊತ್ತಿಲ್ಲ. ಕೆಲವರು ಕಂಪನಿಯ ಹೆಸರಿಗೆ ಕಳಂಕವನ್ನುಂಟು ಮಾಡಲು ಮತ್ತು ಆ ಮೂಲಕ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಪನಿ ಅಧಿಕೃತರು ಹೇಳಿದ್ದಾರೆ.

ದುಬೈ: ಹಿಂದೂಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಉದ್ಯೋಗಿಗಳಿಗೆ ಆಹ್ವಾನ ನೀಡಿ ಪ್ರಕಟಿಸಿರುವ ಜಾಹೀರಾತು ನಕಲಿಯಾಗಿದೆ ಎಂದು ದುಬೈ ಮೂಲದ ಕಂಪನಿ ಸ್ಪಷ್ಟಪಡಿಸಿದೆ.

ವ್ಯಾಪಕ ವಿವಾದವೆಬ್ಬಿಸಿದ GBMT ಕಂಪನಿಯ ಜಾಹೀರಾತು, ಧಾರ್ಮಿಕ ತಾರತಮ್ಯದ ಆರೋಪಗಳು ಕೇಳಿ ಬಂದ ನಂತರ ಕಂಪನಿಯ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ ಭುಗಿಲೆದ್ದಿತ್ತು.

GBMT ಸ್ಟೀಲ್ ಸೇವೆಯ ಹೆಸರಿನಲ್ಲಿ ಪ್ರಚಾರಗೊಂಡ ಜಾಹೀರಾತು ಪೋಸ್ಟರ್ ನಲ್ಲಿ, ಕಂಪನಿಯಲ್ಲಿ ಸುರಕ್ಷತಾ ಅಧಿಕಾರಿಗಳ ಐದು ಹುದ್ದೆಗಳು ಖಾಲಿ ಇದ್ದು, ಹಿಂದೂ ಉದ್ಯೋಗಾಕಾಂಕ್ಷಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. AED 3,000 ರಿಂದ AED 5,000 ವರೆಗೆ ವೇತನ ಇರುತ್ತದೆ. CV ಕಳುಹಿಸಲು ಇ-ಮೇಲ್ ಮತ್ತು ಫೋನ್ ಸಂಖ್ಯೆಯನ್ನೂ ಲಗತ್ತಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಕಂಪೆನಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕಂಪನಿ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಈ ಜಾಹೀರಾತು ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಮತ್ತು ದುಬೈ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.ಈ ನೋಟೀಸಿನ ಹಿಂದೆ ಯಾರೆಂದು ಗೊತ್ತಿಲ್ಲ. ಕೆಲವರು ಕಂಪನಿಯ ಹೆಸರಿಗೆ ಕಳಂಕವನ್ನುಂಟು ಮಾಡಲು ಮತ್ತು ಆ ಮೂಲಕ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಪನಿ ಅಧಿಕೃತರು ಹೇಳಿದ್ದಾರೆ.

ಯುಎಇ ರಾಜಮನೆತನದ ಸದಸ್ಯೆ ಶೈಖಾ ಹಿಂದ್ ಫೈಸಲ್ ಆಲ್ ಖಾಸಿಮಿ ಸಹಿತವಿರುವ ಪ್ರಮುಖರಿಗೆ ನೋಟೀಸಿನ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.GBMT ಸ್ಟೀಲ್ ಎರಡು ದಶಕಗಳಿಂದ ದುಬೈ ಇನ್ವೆಸ್ಟ್‌ಮೆಂಟ್ ಪಾರ್ಕ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಕಂಪನಿಯು ಅಬುಧಾಬಿಯಲ್ಲೂ ಕಾರ್ಖಾನೆಯನ್ನು ಹೊಂದಿದೆ.

https://janadhvani.com/post/38409/

error: Content is protected !! Not allowed copy content from janadhvani.com