janadhvani

Kannada Online News Paper

ಭಾರತೀಯ ಕೆಲಸಗಾರರನ್ನು ನೇಮಿಸುವ ಮುನ್ನ ಯೋಚಿಸಿ- ಅರಬ್ ದೇಶಗಳ ಕಂಪೆನಿಗಳಿಗೆ ಸಲಹೆ

ಭಾರತದಲ್ಲಿ ಮುಸ್ಲಿಮರ ಮನೆ, ವ್ಯಾಪಾರ ಕೇಂದ್ರಗಳಿಗೆ ಬೆಂಕಿಯಿಟ್ಟು ಕ್ರೂರವಾಗಿ ನರ್ತಿಸುತ್ತಿರುವ ಹಿಂದುತ್ವ ಉಗ್ರವಾದಿಗಳನ್ನು ಅರಬ್ ದೇಶಗಳ ಕಂಪೆನಿಗಳಿಗೆ ನೇಮಕಗೊಳಿಸದಿರುವಂತೆ ಸಲಹೆ ನೀಡಲಾಗಿದೆ

ಕುವೈತ್: ದುಬೈನಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯೊಂದಕ್ಕೆ ಸೇಫ್ಟೀ ಆಫಿಸರ್ ನ ಅವಶ್ಯಕತೆಯಿದ್ದು, ಆದರೆ ಭಾರತದ ಸಂಘೀ ಏಜೆಂಟ್‌ಗಳು ಮುಸ್ಲಿಮರನ್ನು ಬದಿಗಿಟ್ಟು ಹಿಂದೂಗಳಿಗೆ ಮಾತ್ರ ಅವಕಾಶ ಕಲ್ಫಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ದುಬೈನ ಕಂಪೆನಿಯೊಂದಕ್ಕೆ ಕೆಲಸಗಾರರಾಗಿ ಹಿಂದೂಗಳನ್ನು ಮಾತ್ರ ಹುಡುಕುವ, ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಒಂದು ಅರಬ್ ವಂಶಜರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದಲ್ಲಿ ಮುಸ್ಲಿಮರ ಮನೆ, ವ್ಯಾಪಾರ ಕೇಂದ್ರಗಳಿಗೆ ಬೆಂಕಿಯಿಟ್ಟು ಕ್ರೂರವಾಗಿ ನರ್ತಿಸುತ್ತಿರುವ ಹಿಂದುತ್ವ ಉಗ್ರವಾದಿಗಳನ್ನು ಅರಬ್ ದೇಶಗಳ ಕಂಪೆನಿಗಳಿಗೆ ನೇಮಕಗೊಳಿಸದಿರುವಂತೆ ಸಲಹೆ ನೀಡಲಾಗಿದೆ.

ಭಾರತದ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ಹಿಂದುತ್ವ ಭಯೋತ್ಪಾದನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ರಾಮನ ಹೆಸರಿನಲ್ಲಿ ನಾಮದಾರಿ ಹಿಂದೂ ಉಗ್ರರು ನಡೆಸುತ್ತಿರುವ ಕ್ರೂರ ಕೃತ್ಯವು ಶ್ರೀ ರಾಮನ ಹೆಸರಿಗೆ ಮತ್ತು ಹಿಂದೂ ಧರ್ಮಕ್ಕೂ ಕಳಂಕವನ್ನುಂಟು ಮಾಡುತ್ತಿದೆ. ಬಹು ಸಂಖ್ಯಾತ ಹಿಂದೂ ಬಾಂಧವರು ಈ ಕ್ರೂರ ಕೃತ್ಯವನ್ನು ಖಂಡಿಸುತ್ತಿದ್ದರೂ, ಸರ್ಕಾರದ ಬೆಂಬಲದೊಂದಿಗೆ ಹಿಂದೂ ಉಗ್ರರ ಅಟ್ಟಹಾಸ ಮುಗಿಲು ಮುಟ್ಟಿದೆ. ಆಡಳಿತ ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳು ಆರ್ ಎಸ್ ಎಸ್ ನ ಕೈಗೊಂಬೆಯಾಗಿ ವರ್ತಿಸುತ್ತಿದೆ. ಇದು ಅರಬ್ ದೇಶಗಳಲ್ಲಿ ಉದ್ಯೋಗದಲ್ಲಿರುವ ಸಾಮಾನ್ಯ ಹಿಂದೂ ಸಹೋದರರಿಗೂ ಕಂಟಕವಾಗಿ ಪರಿಣಮಿಸಲಿದೆ.

ಏತನ್ಮಧ್ಯೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಒಂದು ಚರ್ಚೆಗೆ ಈಡಾಗಿದ್ದು, ಅದರ ಬಗ್ಗೆ ಪ್ರತಿಕ್ರಿಯಿಸಿದ ಕುವೈತ್‌ನ ಮಾನವ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಕೇಂದ್ರದ ಮುಖ್ಯಸ್ಥ, ಕುವೈತ್ ಇನ್‌ಸ್ಟಿಟ್ಯೂಟ್ ಫಾರ್ ಲಾಯರ್ಸ್ ಮತ್ತು ಲೀಗಲ್ ಸ್ಟಡೀಸ್‌ನಲ್ಲಿ ತರಬೇತಿ ಪ್ರಾಧಿಕಾರದ ಸದಸ್ಯರಾಗಿರುವ ಲಾಯರ್ ಮುಜ್ಬಿಲ್ ಅಲ್ ಶರೀಕ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ #BanRSS ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಈ ಸಲಹೆ ನೀಡಿದ್ದಾರೆ.

“ಮಧ್ಯಪ್ರಾಚ್ಯದಲ್ಲಿರುವ ಮುಸ್ಲಿಂ ಅರಬ್ ಉದ್ಯೋಗದಾತರಿಗೆ ಇದು ಸಲಹೆಯಾಗಿದೆ. ನೀವು ಭಾರತದಿಂದ ಯಾರನ್ನಾದರೂ ನೇಮಿಸಿಕೊಳ್ಳುವ ಮೊದಲು ಕಾರ್ಯವಿಧಾನವನ್ನು ಗಂಭೀರವಾಗಿ ಪರಿಗಣಿಸಿ. ದುರುದ್ದೇಶ ಪೂರ್ವಕವಾಗಿ ಮುಸ್ಲಿಂ ಅಭ್ಯರ್ಥಿಗಳನ್ನು ಬದಿಗಿಟ್ಟು, ಬದಲಾಗಿ ಇಸ್ಲಾಮೋಫೋಬಿಕ್ ಸಂಘಿಯನ್ನು ನೇಮಕ ಮಾಡುವ ಪಿತೂರಿ ನಡೆಯುತ್ತಿದೆ” ಎಂಬ ಟ್ವೀಟ್ ನೊಂದಿಗೆ ಸಂಘಿಗಳನ್ನು ನೇಮಿಸದಂತೆ ಸಲಹೆ ನೀಡಿದ್ದು, ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ನ್ನು ಹಂಚಿದ್ದಾರೆ.

error: Content is protected !! Not allowed copy content from janadhvani.com