janadhvani

Kannada Online News Paper

ಮಂಜ ಮರ್ಕಝ್ ನಲ್ಲಿ ನಾಳೆ ‘ಮಜ್ಲಿಸುಲ್ ಬದ್ರಿಯ್ಯೀನ್’ ಪ್ರಾರ್ಥನಾ ಸಂಗಮ

ಪುತ್ತೂರು ಮಂಜ ಪ್ರಸಿದ್ಧ ದರ್ಗಾ ಶರೀಫ್ ವಠಾರದ, ಮರ್ಕಝ್ ಆಕಾಡೆಮಿ ಆಫ್ ಥಿಯೋಲಜಿ ಕ್ಯಾಂಪಸ್ ನಲ್ಲಿ ಇದೇ ಜುಲೈ ಏಳರಂದು ಭಾನುವಾರ ಮಗ್ರಿಬ್ ನಮಾಝ್ ಬಳಿಕ ‘ಮಜ್ಲಿಸುಲ್ ಬದ್ರಿಯ್ಯೀನ್’ ಪ್ರಾರ್ಥನಾ ಸಂಗಮ ನಡೆಯಲಿರುವುದು.

ಇದರ ಅಂಗವಾಗಿ, ಶೈಖುನಾ ಮಾದಿಹುರಸೂಲ್ ತಿರೂರಂಗಾಡಿ ಬಾಪು ಉಸ್ತಾದ್ ವಿರಚಿತ ಖಸೀದತುಲ್ ಬದ್ರಿಯ್ಯ ಪಾರಾಯಣ, ದಿಕ್ರ್, ನಸೀಹತ್ ಹಾಗೂ ಪ್ರಾರ್ಥನೆಗಳು ನಡೆಯಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಕೆ. ಎ. ಮಹ್ಮೂದುಲ್ ಫೈಝಿ ವಾಲೆಮುಂಡೋವು ಪ್ರಾರ್ಥನೆ ಮತ್ತು ಆಶೀರ್ವಚನ ನಡೆಸಿ ಕೊಡಲಿದ್ದಾರೆ. ಮರ್ಕಝ್ ಮಂಜ ಅಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೈನಿ ಕಾಮಿಲ್ ನೇತೃತ್ವ ವಹಿಸಲಿದ್ದಾರೆ.
ಸ್ತ್ರೀಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪುಣ್ಯಗಳಿಸಬೇಕಾಗಿ ಸಂಸ್ಥೆಯ ಸಾರಥಿಗಳು ವಿನಂತಿಸಿಕೊಂಡಿದ್ದಾರೆ