ಇತಿಹಾಸ ಪ್ರಸಿದ್ಧ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರಡನೇ ಪುರಾತನ ಮಸೀದಿ ಎಂದು ಖ್ಯಾತಿ ಪಡೆದ ಕಿಲ್ಲೂರು ಮುಹಿಯದ್ದೀನ್ ಜುಮಾ ಮಸೀದಿಯ ನವೀಕರಣಕ್ಕೆ ಶಿಲಾನ್ಯಾಸ ಹಾಗು ತಾತ್ಕಾಲಿಕ ಮಸ್ಜಿದ್ ಸ್ಥಳಾಂತರ ಮತ್ತು ವಕ್ಫ್ ನಿರ್ವಹಣಾ ಕಾರ್ಯಕ್ರಮ ಜುಲೈ 5 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಖಾಝಿ ಖುರ್ರತು ಸಾದತ್ ಕೂರ ತಂಗಲ್ ರವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು ವಹಿಸಿದ್ದರು, ಜಮಾಅತ್ ಧರ್ಮ ಗುರುಗಳಾದ ಪಿ.ಬಿ ಶಂಶೀರ್ ಸಖಾಫಿ ಕಾರ್ಯಕ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಸಂಘ ಸಂಸ್ಥೆಗಳ ಪ್ರದಾನ ಕಾರ್ಯದರ್ಶಿ JH ಅಬೂಬಕ್ಕರ್ ಸಿದ್ದಿಕ್ ಕಾಜೂರು, ಕಿಲ್ಲೂರು ಮಸ್ಜಿದ್ ಆಡಳಿತ ಅಧಿಕಾರಿ ಹಾಗೂ ಮಾಜಿ ಸೈನಿಕರಾದ ರಫೀ ಬೆಳ್ತಂಗಡಿ, ಜಮಾಅತ್ ಉಪಾದ್ಯಕ್ಷರಾದ ಹಮೀದ್ ಅಮ್ಮಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಕೋಶಾದಿಕಾರಿ ಅಬೂಬಕ್ಕರ್ ಮಲ್ಲಿಗೆ ಮನೆ, ಜೊತೆ ಕಾರ್ಯದರ್ಶಿ ಹಂಝತ್ ಸದಸ್ಯರಾದ ಮಹಮ್ಮದ್ ಪುತ್ತುಮೋನು, ಹನೀಫ್ ಹೆಚ್.ಎನ್, ಬದ್ರುದ್ದೀನ್ ಕಿಲ್ಲೂರು, ಮಹಮ್ಮದ್ ಮಣ್ಣಗುಂಡಿ , ಅಶ್ರಫ್ ಶ್ರವಣಗುಂಡ, ಹನೀಫ್ ಮಲ್ಲಿಗೆ ಮನೆ , SJM ಮುರ ರೇಂಜ್ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಪಿಚಲಾರ್ ಹಾಗೂ ಇಂಧಬೆಟ್ಟು , ಪಿಚಲಾರ್ , ಎರ್ಮಾಳ, ಬೆದ್ರಬೆಟ್ಟು, ಪೆರ್ದಾಡಿ ತಾಜುಲ್ ಉಲಾಮ ಮಸ್ಜಿದ್, ಅಜ್ಮೀರ್ ಜುಮ್ಮಾ ಮಸ್ಜಿದ್ ಪೆರ್ದಾಡಿಯ ಎಲ್ಲಾ ಮಸ್ಜಿದ್ ಗಳ ಅದ್ಯಕ್ಷರುಗಳು , ಪದಾಧಿಕಾರಿಗಳು, ಸಮೀತಿ ಸದಸ್ಯರು, ಮತ್ತು ಧರ್ಮ ಗುರುಗಳು ಜಮಾಅತರು ಉಪಸ್ಥಿತರಿದ್ದರು,
DK ಅಬ್ದುರಶೀದ್ ಮದನಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದಗೈದರು