ಸೌದಿ ಅರೇಬಿಯಾ (ಜುಬೈಲ್) : ಇತ್ತೀಚೆಗೆ ಜುಬೈಲ್ ನಲ್ಲಿ ನಿಧನರಾದ ಜುಬೈಲ್ Al muzain ಕಾರ್ಮಿಕನಾಗಿದ್ದ ಎಸ್.ವೈ.ಎಸ್. ಸದಸ್ಯ ಅಬ್ದುಲ್ ಬಶೀರ್ ಹಿದಾಯತ್ ನಗರ ಇವರ ಅಂತ್ಯ ಸಂಸ್ಕಾರ ಜುಬೈಲ್ ನಲ್ಲಿ ನಡೆಯಿತು.
ಜುಬೈಲ್ KFC ಸಮೀಪದ ಉಮರ್ ಬಿನ್ ಅಬ್ದುಲ್ ಅಝೀಜ್ ಮಸ್ಜಿದ್ ನಲ್ಲಿ ಮಯ್ಯಿತ್ ನಮಾಜ್ ಮಾಡಿ ನಂತರ ಜುಬೈಲ್ ನ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಮೃತರು ಹೆಂಡತಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಗೊಳಿಸಲು ಸೌದಿ ಅರೇಬಿಯಾ ಕರ್ನಾಟಕ ಕಲ್ಚರಲ್ ಫಂಡೇಷನ್ (ಕೆಸಿಎಫ್) ನಾಯಕರಾದ ಬಾಷಾ ಗಂಗಾವಳಿ, ಜುಬೈಲ್ ಝೋನ್ ನಾಯಕರಾದ ನೌಫಲ್ ಬಜಾಲ್ ದಾಯಿ ಶಾಫಿ ಮದನಿ ಮತ್ತು Al-Muzain ನಾಯಕರ ನಿರಂತರ ಶ್ರಮದಿಂದಾಗಿ ಆದಷ್ಟು ಬೇಗ ದಫನ ಕಾರ್ಯ ನಡೆಯಿತು ಸಹಕರಿಸಿದ ಎಲ್ಲಾ ನಾಯಕರುಗಳಿಗೆ ಕೃತಙ್ನತೆ ಸಲ್ಲಿಸುತ್ತಿದ್ದೇವೆ.
ಸಾಂತ್ವನ ವಿಭಾಗ
KCF ಜುಬೈಲ್ ಝೋನ್