ಮಂಗಳೂರು: ಎಸ್‌ವೈಎಸ್ ರಾಜ್ಯ ಸಮಿತಿಯ ಅಧೀನದಲ್ಲಿ ಪ್ರಕೃತಿ ವಿಕೋಪ ಮುಂತಾದ ಸಂದರ್ಭದಲ್ಲಿ ತುರ್ತುಸೇವೆ ಹಾಗೂ ರಕ್ತದಾನ ಸಹಿತವಿರುವ ಸಮಾಜಸೇವೆ ಹಾಗೂ ಇನ್ನಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜ್ಯದ 13 ಜಿಲ್ಲೆಗಳಿಂದ ಆಯ್ಕೆಯಾದ ಸುಮಾರು 2300 ಇಸಾಬಾ ಕಾರ್ಯಕರ್ತರನ್ನು ಸಮಾಜಸೇವೆಗೆ ಅರ್ಪಿಸುವ ನಿಟ್ಟಿನಲ್ಲಿ ಮಂಗಳೂರಿನ ಪುರಭವನದಲ್ಲಿ ಜುಲೈ 24 ರಂದು ನಡೆಸುವ ಇಸಾಬಾ ‘ಅಲ್-ಅರೀಶ್’ ಕ್ಯಾಂಪ್ ನಡೆಯಲಿದ್ದು, ಇದರ ಪೂರ್ವಸಿದ್ಧತಾ ಸಭೆಯು ರಾಜ್ಯ ಇಸಾಬಾ ಕಾರ್ಯದರ್ಶಿ ಖಲೀಲ್ ಮಾಲಿಕಿ ಬೋಳಂತೂರು ರವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ಕಣ್ಣೂರು ಸುನ್ನೀ ಸೆಂಟರ್ ನಲ್ಲಿ ನಡೆಯಿತು.ಎಸ್‌ವೈಎಸ್ ರಾಜ್ಯ ನಾಯಕ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ ಸಭೆಯನ್ನು ಉದ್ಘಾಟಿಸಿದರು.ಹಾಫಿಳ್ ಯಾಕೂಬ್ ಸಅದಿ ನಾವೂರು ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ, ದಅ್‌ವಾ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಕೈಕಂಬ, ಜಿಲ್ಲಾ ನಾಯಕರಾದ ಮಹ್ಮೂದ್ ಸಅದಿ ಕುಕ್ಕಾಜೆ, ಖಾಸಿಂ ಲತೀಫಿ ಮಂಜನಾಡಿ
ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ಹಸನ್ ಪಾಂಡೇಶ್ವರ, ಇಸ್ಹಾಕ್ ತಂಙಳ್ ಕಣ್ಣೂರು,ಝೋನ್ ಅಧ್ಯಕ್ಷ ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್‌ಪದವು, ಪ್ರಧಾನ ಕಾರ್ಯದರ್ಶಿ ನಝೀರ್ ವಳವೂರು, ಎಸ್ ಎಸ್ ಎಸ್ ಎಫ್ ಮಂಗಳೂರು ಸೆಕ್ಟರ್ ಅಧ್ಯಕ್ಷ ತನ್ವೀರ್ ಸಖಾಫಿ ಕಣ್ಣೂರು ಅಖೀಲ್ ಬಜಾಲ್, ಮನ್ಸೂರ್ ಬಜಾಲ್, ನೌಶೀರ್ ಫೈಝಲ್ ನಗರ ಮುಂತಾದ ನಾಯಕರು ಉಪಸ್ಥಿತರಿದ್ದರು.