janadhvani

Kannada Online News Paper

ನೆಲ್ಯಾಡಿ ಯಲ್ಲಿ ಕೂರತ್ ತಂಙಳ್ ಅನುಸ್ಮರಣಾ ಸಂಗಮ

ನೆಲ್ಯಾಡಿ; ಸುನ್ನೀ ಸಂಘ ಕುಟುಂಬ ಗಳಾದ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ಇದರ ಆಶ್ರಯದಲ್ಲಿ ಧಾರ್ಮಿಕ ವಿದ್ವಾಂಸ ನೆಲ್ಯಾಡಿ ಸಹಿತ ನೂರಾರು ಮಹಲ್ ಗಳ ಖಾಝಿ ಖುರ್ರತ್ತುಸ್ಸಾದಾತ್ ಕೂರತ್ ತಂಙಳ್ ಅನುಸ್ಮರಣಾ ಸಂಗಮ ಹಾಗೂ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಕೂರತ್ ತಂಙಳ್ ರ ಸುಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ರವರ ನೇತೃತ್ವದಲ್ಲಿ ಜುಲೈ 14 ರವಿವಾರ ಸುನ್ನೀ ಸೆಂಟರ್ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ನೇತೃತ್ವವನ್ನು ಎಸ್.ವೈ.ಎಸ್ ಅಧ್ಯಕ್ಷ ಉಸ್ಮಾನ್ ಔಹರಿ ವಹಿಸಿದ್ದರು. ಅಲ್ ಮಸ್ಜಿದುಲ್ ಜಲಾಲಿಯಾ ಖತೀಬರಾದ ಬಹು ಮಲ್ಲಿ ಸಖಾಫಿ ಅನುಸ್ಮರಣಾ ಪ್ರಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ಎಸ್ಸೆಸ್ಸೆಫ್ ಅಧ್ಯಕ್ಷರಾದ ಬಹು ಅನ್ಸಿಫ್ ಸಅದಿ ಸ್ವಾಗತ ಭಾಷಣ ಮಾಡಿದರು. ನೆಲ್ಯಾಡಿ ಕೆ.ಎಂ.ಜೆ ಅಧ್ಯಕ್ಷರಾದ ಎನ್.ಎಸ್ ಸುಲೈಮಾನ್, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹನೀಫ್ ಕರಾವಳಿ, ಎಸ್.ವೈ.ಎಸ್ ಮಾಜಿ ಅಧ್ಯಕ್ಷರು, ಹಿರಿಯ ವಿದ್ವಾಂಸ ಹಸೈನಾರ್ ಮುಸ್ಲಿಯಾರ್, ಹಿರಿಯರಾದ ಎನ್.ಎಸ್ ಉಮ್ಮರ್, ಎಸ್.ವೈ.ಎಸ್ ಕಾರ್ಯದರ್ಶಿ ಪಂಚಾಯತ್ ಸದಸ್ಯರಾದ ಜಬ್ಬಾರ್, ನೆಲ್ಯಾಡಿ ಪರಿಸರದ KMJ, KCF ,SYS, SSF, SBS ನಾ ನೂರಾರು ಕಾರ್ಯಕರ್ತರು, ಹಿತೖಷಿಗಳು ಭಾಗವಹಿಸಿದ್ದರು.

ಇದೇ ವೇಳೆ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿರುವ ಅಶ್ರಫ್ ಮದನಿ ರವರನ್ನು ಗೌರವಿಸಲಾಯಿತು.