ಸೌದಿಅರೇಬಿಯ:(ಜನಧ್ವನಿ ವಾರ್ತೆ) ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ನ ಸ್ವಲಾತ್ ವಾರ್ಷಿಕ, ವಾರ್ಷಿಕ ಕೌನ್ಸಿಲ್ ಮತ್ತು ಮಿಹ್ರಾಜ್ ಸಂದೇಶ ಕಾರ್ಯಕ್ರಮ ಸೆಕ್ಟರ್ ಅಧ್ಯಕ್ಷರಾದ ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಸವುಗಿಯದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಅಶ್ರಫ್ ಮುಸ್ಲಿಯಾರ್ ಪಂಜಲ ಉದ್ಘಾಟಿಸಿದರು. ಇಸ್ರಾಹ್ ಮಿಹ್ರಾಜ್ ಮತ್ತು ರಮಳಾನ್ ಸಿದ್ಧತೆ ವಿಷಯದಲ್ಲಿ ಸವಿಸ್ತಾರವಾಗಿ ಕಾರ್ಯಕರ್ತರಿಗೆ ಮನದಟ್ಟಾಗುವ ಮೂಲಕ ಉಸ್ಮಾನ್ ಸಅದಿ ನೆಲ್ಯಾಡಿ ಪ್ರಭಾಷಣ ಮಾಡಿದರು
ಇದೇ ವೇಳೆ ಕೆಲಸದ ನಡುವೆಯೂ ಸೆಕ್ಟರ್, ಝೋನ್ ಗೆ ಬೇಕಾದ ಬ್ಯಾನರ್ ಇನ್ನಿತರ ಕೆಸಿಎಫ್ ಗೆ ಗ್ರಾಫಿಕ್ಸ್ ಡಿಸೈನರಾಗಿ ಸೇವೆ ಮಾಡುತ್ತಿರುವ ತ್ವಾಯಿಫ್ ಸೆಕ್ಟರ್ ಪಬ್ಲಿಷಿಂಗ್ ವಿಭಾಗ ಕಾರ್ಯದರ್ಶಿ ಸಫ್ವಾನ್ ಕಲ್ಕಟ್ಟ ರವರನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕೆಸಿಎಫ್ ತ್ವಾಯಿಫ್ ಸೆಕ್ಟರ್ ಪ್ರ.ಕಾರ್ಯದರ್ಶಿ ಹನೀಫ್ ಹಿಮಮಿ ಕಕ್ಕೆಪದವು ಶುಭ ಹಾರೈಸಿ ಮಾತನಾಡಿದರು
ವಾರ್ಷಿಕ ವರದಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ವಾಚಿಸಿದರು. ಲೆಕ್ಕ ಪತ್ರವನ್ನು ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್ ಮಂಡಿಸಿದರು ವರದಿ ಮತ್ತು ಲೆಕ್ಕಪತ್ರ ಯಾವುದೇ ತಿದ್ದುಪಡಿಗಳಿಲ್ಲದೆ ಅಂಗೀಕರಿಸಲಾಯಿತು
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಜಿದ್ದಾ ಝೋನ್ ನೇತಾರರಾದ ಅಶ್ರಫ್ ಮಂಡೆಕೋಲು ಮತ್ತು ಇಕ್ಬಾಲ್ ಮದನಿ ಪಾವೂರು ಕೌನ್ಸಿಲ್ ನಡೆಸಿ ತೆರವಾದ ಹುದ್ದೆಗಳಿಗೆ ಭರ್ತಿ ಮಾಡಿ ಸ್ವಲ್ಪ ಬದಲಾವಣೆಯೊಂದಿಗೆ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು
ಅಧ್ಯಕ್ಷರು: ಹನೀಫ್ ಸಖಾಫಿ ಬೊಳ್ಮಾರ್
ಪ್ರ.ಕಾರ್ಯದರ್ಶಿ: ಇಕ್ಬಾಲ್ ಕಕ್ಕಿಂಜೆ
ಕೋಶಾಧಿಕಾರಿ: ಇರ್ಷಾದ್ ಉಚ್ಚಿಲ್
ಸಂಘಟನೆ ವಿಭಾಗ
ಅಧ್ಯಕ್ಷರು: ಸ್ವಾದಿಖ್ ಸಖಾಫಿ ಕಿಲ್ಲೂರು
ಕಾರ್ಯದರ್ಶಿ: ಅಬ್ದುಲ್ ಹಮೀದ್ ಉಳ್ಳಾಲ
ಸದಸ್ಯರುಗಳು:- ಕಬೀರ್ ಬಾಜಾರ್, ಅಬ್ದುಲ್ ಅಝೀಝ್ ತುರ್ಕಳಿಕೆ, ನವಾಝ್ ಕಾಜೂರು.
ಶಿಕ್ಷಣ ವಿಭಾಗ
ಅಧ್ಯಕ್ಷರು: ಉಸ್ಮಾನ್ ಸಅದಿ ನೆಲ್ಯಾಡಿ
ಕಾರ್ಯದರ್ಶಿ: ನಿಸಾರ್ ಕಾಟಿಪಳ್ಳ
ಸದಸ್ಯರುಗಳು:- ಅಶ್ರಫ್ ಮುಸ್ಲಿಯಾರ್ ಪಂಜಲ, ಅಬ್ದುಲ್ ಲತೀಫ್ ನೆಲ್ಯಾಡಿ, ಅಶ್ರಫ್ ಮಂಗಿಲಪದವು.
ಸಾಂತ್ವನ ವಿಭಾಗ
ಅಧ್ಯಕ್ಷರು: ಮೂಸಾ ಹಾಜಿ ಕಿನ್ಯ
ಕಾರ್ಯದರ್ಶಿ: ಉಸ್ಮಾನ್ ಉರುವಲು ಪದವು
ಸದಸ್ಯರುಗಳು:- ಅಕ್ಬರ್ ಅಲಿ ಮಾಚಾರ್, ಅಬ್ದುಲ್ ಹಮೀದ್ ಆನೆಕಲ್ಲು, ಅಬ್ದುಲ್ ಖಾದರ್ ಮಠ, ಅಬ್ಬಾಸ್ ಸಾಲ್ಮರ.
ಕಛೇರಿ ವಿಭಾಗ
ಅಧ್ಯಕ್ಷರು: ಅಶ್ರಫ್ ಮಂಜನಾಡಿ
ಕಾರ್ಯದರ್ಶಿ: ಕಲಂದರ್ ಶಾಫಿ ಅಸೈಗೋಳಿ
ಸದಸ್ಯರುಗಳು:- ರಫೀಖ್ ಕೊಳಕೇರಿ, ಅಬ್ದುಲ್ ಹಮೀದ್ ಮಂಜನಾಡಿ, ಬಶೀರ್ ಕೆಜೆಕಾರ್.
ಪಬ್ಲಿಷಿಂಗ್ ವಿಭಾಗ
ಅಧ್ಯಕ್ಷರು: ನವಾಝ್ ಇಮ್ದಾದಿ ಬಜಲ್
ಕಾರ್ಯದರ್ಶಿ: ಇಕ್ಬಾಲ್ ನಾವೂರು
ಸದಸ್ಯರುಗಳು:- ಇಸ್ಮಾಯಿಲ್ ಝುಹ್ರಿ ಕನ್ಯಾಡಿ, ಶರೀಫ್ ಪಲ್ಲಮಜಲ್, ಹನೀಫ್ ಕೋಳಿಯೂರು. ಒಟ್ಟು 29 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ಆಸ್ತಿತ್ವಕ್ಕೆ ತರಲಾಯಿತು.
ಕಾರ್ಯಕ್ರಮವನ್ನು ಪ್ರ. ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿ, ನೂತನ ಸಾಂತ್ವನ ವಿಭಾಗ ಕಾರ್ಯದರ್ಶಿ ಉಸ್ಮಾನ್ ಉರುವಲು ಪದವು ಕೃತಜ್ಞತೆ ಸಲ್ಲಿಸಿದರು ಈ ಸಂದರ್ಭ ತಾಯಿಫ್ ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷರು ಹಂಝ ಮಡಿಕೇರಿ ಮತ್ತು ಕೆಸಿಎಫ್ ಸದಸ್ಯರು ಪಾಲ್ಗೊಂಡಿದ್ದರು.