janadhvani

Kannada Online News Paper

ಕೆಸಿಎಫ್ ತ್ವಾಯಿಫ್ ಸೆಕ್ಟರ್ ಸ್ವಲಾತ್ ವಾರ್ಷಿಕ ಹಾಗೂ ವಾರ್ಷಿಕ ಕೌನ್ಸಿಲ್

ಸೌದಿಅರೇಬಿಯ:(ಜನಧ್ವನಿ ವಾರ್ತೆ) ಕೆಸಿಎಫ್ ತ್ವಾಯಿಫ್ ಸೆಕ್ಟರಿನ ಸ್ವಲಾತ್ ವಾರ್ಷಿಕ ಹಾಗೂ ವಾರ್ಷಿಕ ಕೌನ್ಸಿಲ್ ದಿನಾಂಕ 05/04/2018 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶಾರಾ ಖಾಲಿದ್ ಶುಗ್ಗ ದಾರುಲ್ ಬಯ್ಲಾದಲ್ಲಿ ಸಮಿತಿಯ ಅಧ್ಯಕ್ಷರಾದ ಇಕ್ಬಾಲ್ ಮದನಿಯವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಸ್ವಲಾತ್ ಮಜ್ಲಿಸ್ ಗೆ ಹನೀಫ್ ಹಿಮಮಿ ನೇತೃತ್ವ ವಹಿಸಿ ಮುಹಮ್ಮದ್ ಝುಹ್ರಿ ದುಆ ನೆರವೇರಿಸಿದರು.

ವಾರ್ಷಿಕ ಕೌನ್ಸಿಲ್ ಸಭೆಯನ್ನು ಹನೀಫ್ ಹಿಮಮಿ ಸ್ವಾಗತಿಸಿ KCF ನಲ್ಲಿ ಯಾತಕ್ಕಾಗಿ ಕಾರ್ಯಾಚರಿಸಬೇಕು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಇಮಾದ್ ಕುಂದಾಪುರ ಕಿರಾಅತ್ ಪಠಿಸಿದ ಸಭೆಯನ್ನು ಇಲ್ಯಾಸ್ ಮದನಿ ಉದ್ಘಾಟಿಸಿ ಸಂಘಟನೆಯಲ್ಲಿ ಕಾರ್ಯಾಚರಿಸುವುದರ ಮಹತ್ವದ ಬಗ್ಗೆ ಸವಿಸ್ತಾರವಾಗಿ ಸಭಿಕರ ಮುಂದೆ ವಿವರಿಸಿದರು.

ಸಂಘಟನೆಯ ಉನ್ನತಿಗಾಗಿ ಯಾವ ರೀತಿ ಸಹಕರಿಸಬೇಕು ಎಂಬುದನ್ನು ಮುಹಮ್ಮದ್ ಝುಹ್ರಿ ನೆರೆದ ಕಾರ್ಯಕರ್ತರಲ್ಲಿ ವಿವರಿಸಿ ಶುಭಾಶಯ ಕೋರಿದರು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಕ್ಕಾ ಸೆಕ್ಟರ್ ಅಧ್ಯಕ್ಷರಾದ ಹನೀಫ್ ಸಖಾಫಿ ಬೊಳ್ಮರ್ ರವರು ಮಾತನಾಡಿ ಸಂಘಟನೆಯ ಏಳಿಗೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಶುಭ ಹಾರೈಸಿದರು.

ಪ್ರ. ಕಾರ್ಯದರ್ಶಿ ಅಶ್ರಫ್ ಮಂಡೆಕೋಲುರವರು ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಸಭೆಯ ಮುಂದೆ ಮಂಡಿಸಿದ್ದರು ಯಾವುದೇ ತಿದ್ದುಪಡಿಗಳಿಲ್ಲದೆ ತಕ್ಬೀರ್ ಧ್ವನಿಯ ಮೂಲಕ ಸರ್ವಾನುಮತದಿಂದ ಅಂಗೀಕರಿಸಲಾಯಿತು

ಚುನಾವಣಾ ವೀಕ್ಷಕರಾಗಿ ಆಗಮಿಸಿದ ಜಿದ್ದಾ ಝೋನ್ ನೇತಾರರಾದ ಇರ್ಷಾದ್ ಉಚ್ಚಿಲ್ ಹಾಗೂ ಇಕ್ಬಾಲ್ ಕಕ್ಕಿಂಜೆಯವರು ಕೌನ್ಸಿಲ್ ನಡೆಸಿ ತೆರವಾದ ಹುದ್ದೆಗಳಿಗೆ ಭರ್ತಿ ಮಾಡಿ ಸ್ವಲ್ಪ ಬದಲಾವಣೆಯೊಂದಿಗೆ ಪದಾಧಿಕಾರಿಗಳನ್ನು ಘೋಷಣೆ ಮಾಡಿದ್ದರು.

ಸಂಘಟನೆಯ ಏಳಿಗೆಗಾಗಿ ರಾತ್ರಿ ಹಗಳೆನ್ನದೇ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ, ನಮ್ಮ ಸೆಕ್ಟರ್ ಅಧ್ಯಕ್ಷರು ಹಾಗೂ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿರುವ ಇಕ್ಬಾಲ್ ಮದನಿ ಉಸ್ತಾದರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೇ ಸಂಘಟನೆಯ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಬೇಕಾದ ಬೇನರ್ ಹಾಗೂ ಪೋಸ್ಟರ್ ಗಳನ್ನು ತಕ್ಕ ಸಮಯಕ್ಕೆ ಮಾಡಿ ಕೊಟ್ಟು ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದ ಸಫ್ವಾನ್ ಕಲ್ಕಟ್ಟ ರವರಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.

ಈ ಸಂದರ್ಭ DKSC ತ್ವಾಯಿಫ್ ಘಟಕದ ಅಧ್ಯಕ್ಷರು ಇಮ್ತಿಯಾಝ್ ಕುಂದಾಪುರ, ಕಾರ್ಯದರ್ಶಿ ರಝಾಕ್ ಕೊಡಂಗೈ ಹಾಗೂ ಹನೀಫ್ ಮುಸ್ಲಿಯಾರ್ ಕುತ್ತಾರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು

ಅಧ್ಯಕ್ಷರು; KH ಇಖ್ಬಾಲ್ ಮದನಿ ಪಾವೂರು

*ಪ್ರ. ಕಾರ್ಯದರ್ಶಿ;* ಹನೀಫ್ ಹಿಮಮಿ ಕುಂಡಡ್ಕ

ಕೋಶಾಧಿಕಾರಿ;ಅಶ್ರಫ್ ಮಂಡೆಕೋಲು

ಸಂಘಟನಾ ವಿಭಾಗ
ಅಧ್ಯಕ್ಷರು; ಮುಹಮ್ಮದ್ ಝುಹ್ರಿ
ಕಾರ್ಯದರ್ಶಿ; ನಾಸಿರ್ ಬೋವು

ಶಿಕ್ಷಣ ವಿಭಾಗ
ಅಧ್ಯಕ್ಷರು; ಇಲ್ಯಾಸ್ ಮದನಿ
ಕಾರ್ಯದರ್ಶಿ; ಹನೀಫ್ ಮುಸ್ಲಿಯಾರ್ ಕುತ್ತಾರು

ಸಾಂತ್ವನ ವಿಭಾಗ
ಅಧ್ಯಕ್ಷರು; ಹಂಝ ಮಡಿಕೇರಿ
ಕಾರ್ಯದರ್ಶಿ; ಹಮೀದ್ ಕರೋಪಾಡಿ

ಪಬ್ಲಿಷಿಂಗ್ ವಿಭಾಗ
ಅಧ್ಯಕ್ಷರು; ಸಿದ್ದೀಕ್ ಕರೋಪಾಡಿ
ಕಾರ್ಯದರ್ಶಿ; ಸಫ್ವಾನ್ ಕಲ್ಕಟ್ಟ

ಅಡ್ಮಿನ್ ವಿಭಾಗ
ಅಧ್ಯಕ್ಷರು; ಅಝ್ವೀರ್ ಬಡಕಬೈಲು
ಕಾರ್ಯದರ್ಶಿ; MK ರಝಾಕ್ ಕೊಡಂಗಾಯಿ

ಕಾರ್ಯಕಾರಿ ಸಮಿತಿ ಸದಸ್ಯರು
ಅರಬಿ ಕುಂಞಿ ಬೀರಿ, ಖಾಲಿದ್ ಕಬಕ,ಸೌಖತ್ ಕಿನ್ಯ
ರಿಯಾಝ್ ಉಳ್ಳಾಲ,ಅಬುಸಾಲಿ ಗುತ್ತಿಗಾರು,ಮನ್ಸೂರು ಕನ್ಯಾನ
ನವಾಝ್ ಮುರ, ಅಯ್ಯೂಬ್ ಕುಂದಾಪುರ,ಸಲೀಂ ಅಂಡೆಕೇರಿ

ಮಕ್ಕಾ ಸೆಕ್ಟರ್ ಸಂಘಟನಾ ವಿಭಾಗ ಕಾರ್ಯದರ್ಶಿ ಹಮೀದ್ ಉಳ್ಳಾಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು
ಕೋಶಾಧಿಕಾರಿ ಅಶ್ರಫ್ ಮಂಡೆಕೋಲು ರವರು ಧನ್ಯವಾದಗೈದರು ಈ ಸಂದರ್ಭ ಕೆಸಿಎಫ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು

ವರದಿ: ಹನೀಫ್ ಹಿಮಮಿ ಕುಂಡಡ್ಕ

error: Content is protected !! Not allowed copy content from janadhvani.com