janadhvani

Kannada Online News Paper

ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಸಭೆ

ಸೌದಿ ಅರೇಬಿಯಾ:(ಜನಧ್ವನಿ ವಾರ್ತೆ) ಕೆ.ಸಿ.ಎಫ್ ದಮ್ಮಾಂ ಝೋನ್‌ಗೊಳಪಟ್ಟ ಅಲ್ ಹಸ್ಸಾ ಸೆಕ್ಟರಿನ ವಾರ್ಷಿಕ ಕೌನ್ಸಿಲ್ ಹಾಗೂ ಮಾಸಿಕ ಸ್ವಲಾತ್ ಸಭೆಯು ಇತ್ತೀಚೆಗೆ ಸೆಕ್ಟರ್ ಅಧ್ಯಕ್ಷ ಹಾರೀಸ್ ಕಾಜೂರ್ ರವರ ಸಭಾಧ್ಯಕ್ಷತೆಯಲ್ಲಿ ನ್ಯೂ ಫಜೀರ್ ಹೌಸ್ ಹಫೂಫಿನಲ್ಲಿ ನಡೆಯಿತು,, ಈಸಂದರ್ಭದಲ್ಲಿ ಕೌನ್ಸಿಲ್ ನ ಉಸ್ತುವಾರಿಯಾಗಿ ಆಗಮಿಸಿದ ದಮ್ಮಾಂ ಝೋನ್ ಶಿಕ್ಷಣ ವಿಭಾಗದ ಚಯರ್ಮೇನ್ ರಶೀದ್ ಸಖಾಫಿ ಮಾತನಾಡಿ, ಸದಸ್ಯರು ಸಂಘಟನೆಯ ಆಶಯಾದರ್ಶಗಳನ್ನು ಚಾಚೂ ತಪ್ಪದೇ ಪಾಲಿಸಿ ಇತರರಿಗೆ ಮಾದರಿಯಾಗಬೇಕು. ತಮ್ಮ ಜವಾಬ್ಧಾರಿಯನ್ನು ಅರಿತು ಕಾರ್ಯಚರಿಸಬೇಕೇ ಹೊರತು ಜವಾಬ್ಧಾರಿಯನ್ನು ಮರೆತು ಸಂಘಟನೆಗೆ ಸಂಕಟವಾಗಬಾರದೆಂದು ತಿಳಿಸಿದರು…

ಕಾರ್ಯಕ್ರಮವನ್ನು ಹಬೀಬ್ ರಹ್ಮಾನ್  ಮರ್ದಾಳ ಉಧ್ಘಾಟಿಸಿದರು.
ಸೆಕ್ಟರ್ ಕಾರ್ಯದರ್ಶಿ ಇಸ್ಹಾಖ್ ಫಜೀರ್ ಸ್ವಾಗತಿಸಿ,
ವಾರ್ಷಿಕ ಲೆಕ್ಕ ಪತ್ರ ಮತ್ತು ವರದಿಯನ್ನು ವಾಚಿಸಿದರು..

ನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೌನ್ಸಿಲ್ ಉಸ್ತುವಾರಿಯಾಗಿ ಆಗಮಿಸಿದ ದಮ್ಮಾಮ್ ಝೋನ್ ಶಿಕ್ಷಣ ವಿಭಾಗದ ಚಯರ್ಮೇನ್ ಅಬ್ದುಲ್ ರಶೀದ್ ಸಖಾಫಿ ಮಿತ್ತೂರ್ ರವರು ತೆರವಾದ ಹುದ್ದೆಗಳ ಸ್ಥಾನಗಳನ್ನು ಭರ್ತಿ ಮಾಡಿ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು….

ಹೊಸ ಸಮಿತಿಯ ಪದಾಧಿಕಾರಿಗಳ ವಿವರ:-
ಅಧ್ಯಕ್ಷರು :- ಹಬಿಬ್ ರಹ್ಮಾನ್ ಮರ್ದಾಳ.‌.
ಪ್ರ. ಕಾರ್ಯದರ್ಶಿ:- ಕೆ.ಎಂ ಇರ್ಶಾದ್ ಪಕ್ಷಿಕೆರೆ.‌
ಕೋಶಾಧಿಕಾರಿ:- ಹಾರೀಸ್ ಕಾಜೂರ್..

ಶಿಕ್ಷಣ ವಿಭಾಗ
ಚಯರ್ಮೇನ್ :- ಇಸ್ಹಾಖ್ ಫಜೀರ್.
ಕಾರ್ಯದರ್ಶಿ:- ಅಶ್ರಫ್ ಕಟ್ಟದಪಡ್ಪು.

ಪಬ್ಲಿಷಿಂಗ್ ವಿಭಾಗ
ಚಯರ್ಮೇನ್:- ಶರೀಫ್ ಉಲ್ತೂರ್..
ಕಾರ್ಯದರ್ಶಿ:- ಇಬ್ರಾಹಿಂ ಕಾಜೂರ್…

ಓರ್ಗನೈಝ್ ವಿಭಾಗ
ಚಯರ್ಮೇನ್:- ಹಕೀಂ ನೆಕ್ಕರೆ.
ಕಾರ್ಯದರ್ಶಿ :- ಸಂಶುದ್ದೀನ್ ಕೆಮ್ಮಾರ..

ರಿಲೀಫ್ ವಿಭಾಗ
ಚಯರ್ಮೇನ್:- ಅಬುಬಕ್ಕರ್ ಕಿಲ್ಲೂರ್.
ಚಯರ್ಮೇನ್:- ಮುಝೈರ್ ಅಡ್ಡೂರ್..

ಅಡ್ಮಿನ್ ವಿಭಾಗ
ಚಯರ್ಮೇನ್:- ಇಕ್ಬಾಲ್ ಜಿ.ಕೆ ಗುಲ್ವಾಡಿ.
ಕಾರ್ಯದರ್ಶಿ:- ಹಕೀಂ ಝುಹ್ರಿ..

ಈ ಸಂದರ್ಭದಲ್ಲಿ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ನಾಯಕ ಅಶ್ರು ಬಜ್ಪೆ,ಝೋನ್ ನಾಯಕರಾದ ಇಕ್ಬಾಲ್ ಗುಲ್ವಾಡಿ ಮತ್ತಿತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com