janadhvani

Kannada Online News Paper

ಎಸ್ಸೆಸ್ಸೆಫ್ ಕರ್ನಾಟಕ ರೈನ್ ಬೋ ಟೀಂ ವತಿಯಿಂದ ಗಣರಾಜ್ಯೋತ್ಸವ

SSF ಕರ್ನಾಟಕ ರಾಜ್ಯ ಸಮಿತಿಯ ಅಧೀನದಲ್ಲಿ ರಾಜ್ಯಾದ್ಯಂತವಿರುವ ಸಾವಿರಾರು ಯುನಿಟ್‌ಗಳಲ್ಲಿ SSF ರೈನ್ ಬೋ ವಿದ್ಯಾರ್ಥಿಗಳಿಂದ ನಾಳೆ(ಜನವರಿ 26) ರಂದು ಸಂಜೆ 4 ಗಂಟೆಗೆ ಗಣರಾಜ್ಯೋತ್ಸವ ಸಂಬಂಧಿತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದೇಶ ಪ್ರೇಮದ ಸಂದೇಶ ಸಾರುವ ಪ್ಲೇ ಕಾರ್ಡ್ ಪ್ರದರ್ಶನದೊಂದಿಗೆ ಮಿನಿ ರ್ಯಾಲಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಮಾರೋಪ ಸಮಾರಂಭ ಕೂಡಾ ನಡೆಯಲಿದ್ದು.
ಬೆಳೆದು ಬರುವ ಹಂತದಲ್ಲೇ ಮಕ್ಕಳಲ್ಲಿ ದೇಶ ಪ್ರೇಮ ಬಿತ್ತರಿಸುವ ಸಲುವಾಗಿ SSF ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಆ ಪೈಕಿ ಇದೂ ಒಂದಾಗಿದೆ.

ಸಂವಿಧಾನ ಸಂರಕ್ಷಣೆ ಎಂಬ ವಿಷಯದಲ್ಲಿ ಮಕ್ಕಳಿಂದಲೇ ಭಾಷಣ ನಡೆಯಲಿದ್ದು. ಜೊತೆಗೆ ರಾಷ್ಟ್ರ ಗೀತೆ ಆಲಾಪನೆ ಮತ್ತು ಸಂವಿಧಾನ ಪೀಠಿಕೆ ವಾಚನ ಮುಂತಾದ ಹಲವಾರು ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com