janadhvani

Kannada Online News Paper

ತಾಜುಲ್ ಫುಖಹಾಅ್ ಮಖಾಂ: ಮರಣಾನಂತರ 40 ದಿನಗಳ ನಿರಂತರ ಅನುಸ್ಮರಣಾ ಸಮ್ಮೇಳನ ನಡೆದ ಮಖ್ಬರ- ಮಾಣಿ ಉಸ್ತಾದ್

ಮರಿಕ್ಕಳ : ನನ್ನ ಸುಧೀರ್ಘ ಐವತ್ತು ವರ್ಷಗಳ ಸಹಪಾಠಿಯಾಗಿ ಬಾಳಿ ಬದುಕಿ ಅಕಾಲಿಕವಾಗಿ ನಮ್ಮನ್ನು ಅಗಲಿದ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಇಲ್ಮನ್ನು ಆಳವಾಗಿ ಪ್ರೀತಿಸಿದ ಅಪೂರ್ವ ವಿದ್ವಾಂಸರಲ್ಲಿ ಓರ್ವರಾಗಿದ್ದು ಅವರ ಮರಣ ಬಳಿಕ ಅವರ ಮಖ್ಬರ ಸನ್ನಿಧಿಯಲ್ಲಿ ನಲ್ವತ್ತು ದಿನಕ್ಕಿಂತ ಮಿಗಿಲು ಆಧ್ಯಾತ್ಮಿಕ ಸಂಗಮದೊಂದಿಗೆ ಅನುಸ್ಮರಣಾ ಸಮ್ಮೇಳನ ನಡೆದಿದೆ.

ಇದು ಅವರ ಅಗಾಧವಾದ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇಡೀ ಕರ್ನಾಟಕದಲ್ಲಿ ಮೊದಲಬಾರಿಯಾಗಿದ್ದು ಅದೊಂದು ಇತಿಹಾಸವನ್ನೇ ನಿರ್ಮಿಸಿದೆ ಎಂದು ಉಡುಪಿ ಹಾಗೂ ಚಿಕ್ಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿಯೂ ಮಾಣಿ ದಾರುಲ್ ಇರ್ಶಾದ್ ಶಿಲ್ಪಿಯೂ ಆದ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದರು.

ಮರಿಕ್ಕಳ ಜಮಾಅತ್ ವತಿಯಿಂದ ನಡೆದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಪ್ರಥಮ ಆಂಡ್ ನೇರ್ಚೆಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತಾಡುತ್ತಿದ್ದರು.

ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಗ್ರಂಥಾಲಯವಿರುವುದು ಮಾಣಿ ದಾರುಲ್ ಇರ್ಶಾದ್ ಸಂಸ್ಥೆಯಲ್ಲಿ. ಅದೊಂದು ಸಂಸ್ಥೆ ಸಂಗ್ರಹಿಸಿದ ಗ್ರಂಥಾಲಯವಾಗಿದ್ದು ಎರಡನೇ ಅತಿ ದೊಡ್ಧ ಗ್ರಂಥಾಲಯವಿರುವುದು ಬೇಕಲ್ ಉಸ್ತಾದರ ಮನೆಯಲ್ಲಿ ಅದು ಅವರು ಒಬ್ಬರೇ ಸಂಗ್ರಹಿಸಿದ ಗ್ರಂಥಗಳಾಗಿವೆ.
ಮಾಣಿಯಲ್ಲಿ ಸಿಗದ ಕೆಲವೊಂದು ಗ್ರಂಥಗಳೂ ತಾಜುಲ್ ಫುಖಹಾರ ಕೈಯಲ್ಲಿದೆ.
ಗ್ರಂಥಗಳೊಂದಿಗೆ ಅವರಿಗಿರುವ ಪ್ರೀತಿ ಎಷ್ಟರ ಮಟ್ಟಿಗೆ ಉತ್ಕೃಷ್ಟವಾಗಿತ್ತು ಎಂಬುದನ್ನು ಅದರಿಂದ ಮನವರಿಕೆಮಾಡಬಹುದು ಎಂದರು.

ಉಧ್ಘಾಟನಾ ಭಾಷಣ ನಿರ್ವಹಿಸಿದ ಕೆ.ಸಿ.ರೋಡ್ ಹುಸೈನ್ ಸಅದಿ, ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರು ಮರಣಕ್ಕಿಂತ ಕೆಲವೇ ದಿನಗಳ ಮುಂಚೆ ಇಪ್ಪತ್ತೈದು ಸಾವಿರದಷ್ಟು ಬೆಲೆಬಾಳುವ ಮೊತ್ತದ ಗ್ರಂಥಗಳು ಖರೀದಿಸಿದ್ದರು ಎಂದರು.
ಮೊದಲ ಬಾರಿ ಶೈಖುನಾರ ಊರಿಗೆ ನಾನು ಬಂದಾಗ ನಾನು ಅವರೊಂದಿಗೆ ಕೇಳಿದೆ ನೀವು ಈ ಊರಿನವರಾ..? ಆಗ ಅವರು ತಮಾಷೆಯಾಗಿ ಹೇಳಿದರು ನನಗೆ ಊರಿಲ್ಲವೆಂದು ಗ್ರಹಿಸಿದ್ದೀರಾ.?
ಆಗ ನಾನು ಹೇಳಿದೆ ಬೇಕಲದವರೆಂದೆನಿಸಿದ್ದೆ. ಅಗ ಅವರು ಹೇಳಿದರು ಬೇಕಲ ನಾನು ಹೋಗಿ ಆದದ್ದೆಂದರು.

ಅನುಸ್ಮರಣಾ ಭಾಷಣ ಮಾಡಿದ ಅನಸ್ ಸಿದ್ದೀಖಿರವರು, ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರು ಗುರುಗಳನ್ನು ಅತಿಯಾಗಿ ಪ್ರೀತಿಸುವವರಾಗಿದ್ದರು ಎಂದರು.
ನನ್ನ ಮುತ್ತಾತ ತಾಜುಶ್ಶರೀಅ ಅಲಿಕುಞಿ ಉಸ್ತಾದರು ಬೇಕಲ ಉಸ್ತಾದರ ಗುರುವಾಗಿದ್ದರು.
ಅಜ್ಜ ರಾತ್ರಿ ಎಲ್ಲಿಗೂ ಹೋಗದ ಸಂಧರ್ಭದಲ್ಲಿ ಬೇಕಲ ಉಸ್ತಾದರು ಆತಿಥ್ಯಕ್ಕಾಗಿ ಅವರ ಮನೆಗೆ ರಾತ್ರಿ ಆಹ್ವಾನಿಸಿದ್ದರು.
ಅಂದು ಕುಟುಂಬ ಸಮೇತ ನಾವು ಬಂದಿದ್ದೆವು.
ಸ್ವತಃ ಗುರುಗಳಿಗೆ ಅವರು ನೀಡಿದ ಆತಿಥ್ಯ ಕಂಡು ನಾವು ನಿಬ್ಬೆರಗಾಗಿದ್ದೆವು.
ಮಟನ್ ಚಿಕನ್ ಹೊರತಾಗಿ ನಾಡಿನಲ್ಲಿ ಸಿಗುವ ಬೆಲೆಬಾಳುವ ಅತ್ಯಂತ ದುಬಾರಿಯೆನಿಸಿದ ಮೀನನ್ನೂ ತರಿಸಿ ಭರ್ಜರಿ ಔತಣಕೂಟವನ್ನೇರ್ಪಡಿಸಿದ್ದರು.
ಬೀಳ್ಕೊಡುವಾಗ ಇಪ್ಪತ್ತೈದು ಸಾವಿರ ರುಪಾಯಿ ನಗದನ್ನೂ ದಕ್ಷಿಣೆಯನ್ನಾಗಿ ನೀಡಿದ್ದರು.
ಸ್ವತ ಗುರುಗಳನ್ನು ಗೌರವಿಸುವ ರೀತಿ ಅವರಿಂದ ನೋಡಿ ಕಲಿಯಬೇಕಾಗಿದೆ ಎಂದರು.

ಸ್ವಾಗತ ಭಾಷಣ ಮಾಡಿದ ಸ್ಥಳೀಯ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ ರವರು, ಸ್ವತಃ ಊರಿನಲ್ಲಿ ಇಷ್ಟೊಂದು ಗೌರವ ಪಡೆದ ಮತ್ತೊಂದು ವಿದ್ವಾಂಸನನ್ನು ನಾನು ಕಂಡಿಲ್ಲ ಎಂದರು.
ತನ್ನ ಮೂವತ್ತು ವರ್ಷ ಪ್ರಾಯದಲ್ಲಿ ಊರಿನ ಜಮಾಅತ್ ಅಧ್ಯಕ್ಷರಾಗಿ ಆಯ್ಕೆಯಾದ ಶೈಖುನಾರವರು ಮರಣ ತನಕ ಪ್ರಸ್ತುತ ಪದವಿಯಲ್ಲೇ ಮುಂದುರಿದಿದ್ದರು.
ಊರಿನಲ್ಲಿ ಉಸ್ತಾದ್ ಎಂದರೆ ಬೇಕಲ ಉಸ್ತಾದರಾಗಿದ್ದರು.
ಮದುವೆ ಮನೆಯಲ್ಲಿ, ಮರಣ ಮನೆಯಲ್ಲಿ ಉಸ್ತಾದ್ ಬರುತ್ತಾರೆಂದರೆ ಅದು ತಾಜುಲ್ ಫುಖಹಾರ ಕುರಿತಾಗಿತ್ತು.
ಊರಿನ ಯಾವುದೇ ಕಾರ್ಯಕ್ರಮವೂ ಅವರಲ್ಲಿ ಅಭಿಪ್ರಾಯ ಕೇಳದೆ ನಡೆಯುತ್ತಿರಲಿಲ್ಲ.
ಅವರ ಆಡಳಿತಾವಧಿಯಲ್ಲಿ ನೂತನವಾದದ ಯಾವುದೇ ನರಪಿಳ್ಳೆಯೂ ಈ ಊರಿಗಾಗಮಿಸಿರಲಿಲ್ಲ ಹಾಗೂ ಯಾವೊಬ್ಬ ನರಪಿಳ್ಳೆಯೂ ಆ ಗುಂಪಿಗೆ ಸೇರಿಲ್ಲ ಎಂಬುದು ಅವರ ಸುನ್ನತ್ ಜಮಾಅತ್ ನೊಂದಿಗಿರುವ ಅಚಲವಾದ ವಿಶ್ವಾಸ ಹಾಗೂ ಧೀರವಾದ ಪ್ರಭೋದನೆಯಾಗಿತ್ತು. ಎಂದರು.
ನನ್ನ ಇಲ್ಲಿನ ಏಳೆಂಟು ವರ್ಷಗಳ ಸೇವಾವಧಿಯಲ್ಲಿ ನಾ ಕಂಡಂತೆ ಊರಿನ ಸರ್ವರೂ ಅವರನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು ಹಾಗೂ ಅತ್ಯಂತ ಹೆಚ್ಚಾಗಿ ಆಧರದಿಂದ ಗೌರವಿಸುತ್ತಿದ್ದರು.
ಅವರ ಮರಣ ಬಳಿಕ ಈ ಊರಿನ ಚಿತ್ರಣವೇ ಬದಲಾಗಿತ್ತು.
ಮಸೀದಿ ಬಳಿ ಪ್ರಕಾಶವೊಂದು ಉದಿಸಿದ ಪ್ರತೀತಿ.
ಮಸೀದಿಯ ಆಸುಪಾಸು ಅಭೂತಪೂರ್ವ ಅಭಿವೃದ್ಧಿಯನ್ನು ಕಂಡಿತ್ತು.
ಅವರ ಮಖ್ಬರ ಬಳಿ ಬಾರದ ಸಯ್ಯಿದ್ ವಿದ್ವಾಂಸರಿಲ್ಲ.
ಇಡೀ ಊರಿಗೆ ಊರೇ ಪ್ರಕಾಶಮಾನಯವಾಗಿತ್ತು ಅದೆಲ್ಲವೂ ಅವರ ಪಾಂಡಿತ್ಯದ ಬರಕತ್ತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಅದಿಯ ಪ್ರೊಫೆಸರ್ ಸ್ವಾಲಿಹ್ ಸಅದಿ ಉಸ್ತಾದ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ,ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ಎಸ್.ಎಂ.ಎ ರಾಜ್ಯಾಧ್ಯಕ್ಷ ಕೆ.ಕೆ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗ, ರಾಜ್ಯ ಪ್ರ: ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೆ.ಸಿ.ಎಪ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಶೈಖ್ ಬಾವ ಹಾಜಿ, ಕೆ.ಎಂ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ,ಅಲ್ ಮದೀನಾ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು.ಮಹಮ್ಮದಲಿ ಸಖಾಫಿ ಅಶ್ಅರಿಯ್ಯ,ತ್ವಾಹಾ ಸಅದಿ ಅಜಿಲಮೊಗರು,ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ,ಕಾರ್ಯದರ್ಶಿಗಳಾದ ಕೆ.ಎಂ ಮುಸ್ತಫಾ ನಈಮಿ ಹಾವೇರಿ,ಹುಸೈನ್ ಸಅದಿ ಹೊಸ್ಮಾರ್ ,ಇಸ್ಮಾಯಿಲ್ ಸಅದಿ ಕಿನ್ಯ,ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ ,ಮುನೀರ್ ಸಖಾಫಿ ಉಳ್ಳಾಲ,ಅಶ್ರಫ್ ಕಿನಾರ ಹಾಗೂ ಸಂಘಟನಾ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.error: Content is protected !! Not allowed copy content from janadhvani.com