janadhvani

Kannada Online News Paper

IAS, IPS ಉನ್ನತ ಶಿಕ್ಷಣವನ್ನು ಸೇವಾ ಮನೋಭಾವದೊಂದಿಗೆ ಪೂರ್ತಿ ಗೊಳಿಸಿ : ಡಾ. ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದ.ಕ.

ಎಸ್ಸೆಸ್ಸೆಫ್ ಕರ್ನಾಟಕ ‌ರಾಜ್ಯ ವಿಸ್ಡಂ ವಿಭಾಗದ EDUFOCUS ಕಾರ್ಯಕ್ರಮ ವು ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸ ಅದಿ ಉಸ್ತಾದರ ಅಧ್ಯಕ್ಷ ತೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ!. ರಾಜೇಂದ್ರ ಕೆ.ವಿ. ಅವರು ಐಪಿಎಸ್ ಐಎಎಸ್ ವಿದ್ಯಾಭ್ಯಾಸದ ಬಗ್ಗೆ ಅತ್ಯಂತ ಮಹತ್ವವಾದ ತರಗತಿಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ದುಆ ಮೂಲಕ ಚಾಲನೆ ನೀಡಿದ ರಾಜ್ಯ ನಾಯಕ ಸಯ್ಯದ್ ಅಲವಿ ತಂಙಳ್ ಮದನಿ ಕರ್ಕಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಉದ್ಘಾಟಿಸಿದರು.

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ, ರಾಜ್ಯ SSF ಪದಾಧಿಕಾರಿಗಳು ರಾಜ್ಯ SSF ನಾಯಕರುಗಳು, SSF ಜಿಲ್ಲಾ ವಿಸ್ಡಂ ಕಾರ್ಯದರ್ಶಿಗಳು ನಾಯಕರುಗಳು ಕಾರ್ಯಕರ್ತರ ಸಹಿತ ಕ್ಯಾಂಪಸ್ ‌ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯ ವಿಸ್ಡಂ ಕಾರ್ಯದರ್ಶಿ ಎನ್‌.ಸಿ.ರಹೀಂ ಕಾರ್ಕಳ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com