ಬೆಂಗಳೂರು: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ವತಿಯಿಂದ ಪ್ರತಿ ದಿನ ಹದೀಸ್ ತರಗತಿಗಳಿಗೆ ನೇತೃತ್ವ ನೀಡಿದ ಮುಜೀಬ್ ಸಖಾಫಿ ಉಸ್ತಾದವರನ್ನು ಸನ್ಮಾನಿಸುವ ಕಾರ್ಯಕ್ರಮ, ಬೆಂಗಳೂರು ಹಲಸೂರು ಮರ್ಕಿನ್ಸ್ ಕ್ಯಾಂಪಸಿನಲ್ಲಿ ಮರ್ಕಿನ್ಸ್ ಪ್ರಿನ್ಸಿಪಾಲರಾದ ಜಹ್ಫರ್ ಅಹ್ಮದ್ ನೂರಾನಿ ಅವರ ಪ್ರಾರ್ಥನೆಯೊಂದಿಗೆ KSWA ಬೆಂಗಳೂರು ಅಧ್ಯಕ್ಷರಾದ ಬಶೀರ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮವನ್ನು ಹಂಝತುಲ್ಲಾ ಕುವೆಂಡ ಉದ್ಘಾಟಿಸಿದರು,ಉಲಮಾ ಮತ್ತು ಉಮರಾಗಳು ಒಟ್ಟಾಗಿ ಮುನ್ನಡೆಸುತ್ತಿರುವ KSWA ಸಂಘಟನೆಯ ಜನಪರ ಸೇವೆಯು ಸಮಾಜಕ್ಕೆ ಅತ್ಯಂತ ಫಲಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
KSWA ಸೌದಿ ಅರೇಬಿಯ ರಾಷ್ಟ್ರೀಯ ಚೆಯರ್ಮೇನ್ ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ, ಸೌದಿ ಅರೇಬಿಯಾ ರಾಷ್ಟ್ರೀಯ ಸಂಚಾಲಕರಾದ ಹಫೀಳ್ ಸಅದಿ ಕೊಳಕೇರಿ ಆಶೀರ್ವಚನ ನೀಡಿದರು.
ಜಿಸಿಸಿ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಮುನ್ನುಡಿ ಭಾಷಣ ನಡೆಸುತ್ತಾ, ಕೊಡಗಿನ ಜನತೆಗಾಗಿ KSWA ಅರ್ಪಿಸಿದ ದಾರುಲ್ ಖೈರ್, ಪ್ರಳಯ ಪೀಡತರಿಗೆ ನರವು, ವಿಧ್ಯಾರ್ಥಿ ವೇತನ ಮುಂತಾದ ಸಾಧನೆಗಳ ಬಗ್ಗೆ ನೆನಪಿಸಿದರು.
ಹದೀಸ್ ತರಗತಿಗಳಿಗೆ ನೇತೃತ್ವ ನೀಡಿದ ಮುಜೀಬ್ ಸಖಾಫಿ ಉಸ್ತಾದವರನ್ನು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಜಿಸಿಸಿ ನೇತಾರರು ಗೌರವಿಸಿದರು. ಬೆಂಗಳೂರಿನ ಸುನ್ನಿ ಸಂಘ ಸಂಸ್ಥೆಗಳ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾಜುದ್ದೀನ್ ಫಾಝಿಲಿ ಪ್ರಾರಂಭದಲ್ಲಿ ಸ್ವಾಗತಿಸಿ, ಹಂಝ ಹಲಸೂರು ಕೊನೆಯಲ್ಲಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಫೆ.21(ನಾಳೆ)ರಿಂದ ಇತಿಹಾಸ ಪ್ರಸಿದ್ಧ ಕೊಡಗು ಎಮ್ನೆಮ್ಮಾಡು ಮಖಾಂ ಉರೂಸ್ ಆರಂಭ
ಹಲೀಮ ಅಲ್ ಕಿಂದಿ ವುಮೆನ್ಸ್ ಅಕಾಡೆಮಿ’ಮರ್ಕಝ್ ಕೊಟ್ಟಮುಡಿ’ – ದ್ವಿತೀಯ ಪಿಯುಸಿಗೆ ಶೇ100 ಫಲಿತಾಂಶ
SYS 30ನೇ ವಾರ್ಷಿಕ ಸಮ್ಮೇಳನ ಪ್ರಚಾರ- ಕೊಡಗು ಜಿಲ್ಲಾ ಉಲಮಾ ಸಂಗಮ
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿ- ನೂತನ ಸಾರಥಿಗಳು
‘ಪರಂಪರೆಯ ಪ್ರತಿನಿಧಿಗಳಾಗೋಣ’ : ಸಿದ್ಧಾಪುರದಲ್ಲಿ ನಡೆದ ಅದ್ದೂರಿ ಎಸ್ ವೈ ಎಸ್ ಯುವಜನೋತ್ಸವ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಅಶಾಂತಿ ಉಂಟು ಮಾಡುವವರಿಗೆ ಕಠಿಣ ಶಿಕ್ಷೆಯಾಗಲಿ: ಎಸ್ಸೆಸ್ಸೆಫ್ ಕೊಡಗು
ಕೊಡಗು ಎಸ್ಸೆಸ್ಸೆಫ್ ಕ್ಯಾಂಪಸ್ ಅಸ್ಸೆಂಬ್ಲಿ ಯಶಸ್ವಿ ಸಮಾಪ್ತಿ
ಕೊಡಗು ಸುನ್ನೀ ಸಮನ್ವಯ ಸಮಿತಿಯಿಂದ ಮೊಹಲ್ಲಾ ನಾಯಕರ ಸಂಗಮ
ಮರ್ಕಝುಲ್ ಹಿದಾಯ ಕೊಟ್ಟಮುಡಿ- ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ
ಕುಶಾಲನಗರ :ಗೂಂಡಾಗಳಿಂದ ಹಲ್ಲೆಗೊಳಗಾದ ರಾಝಿಕ್ ನನ್ನು ಭೇಟಿಯಾದ ಎಸ್ಸೆಸ್ಸೆಫ್ ಜಿಲ್ಲಾ ನಾಯಕರು