ಮಂಗಳೂರು: SYS ಉದ್ದಬೆಟ್ಟು ಬ್ರಾಂಚ್ ಅಧೀನದಲ್ಲಿ ಐತಿಹಾಸಿಕ ಸುನ್ನೀ ಮಹಾಸಂಗಮ, ತಾಜುಲ್ ಉಲಮಾ ಹಾಗೂ ಇತ್ತೀಚೆಗೆ ನಮ್ಮನ್ನು ಆಗಲಿದ ಶೈಖುನಾ ತಾಜುಶ್ಶರೀಅ ಆಲೀ ಕುಂಙ ಉಸ್ತಾದರ ಅನುಸ್ಮರಣೆ ಕಾರ್ಯಕ್ರಮ ದಿನಾಂಕ ಏಪ್ರಿಲ್ 9-4-21 ಶುಕ್ರವಾರ ಮಗ್ರಿಬ್ ನಮಾಜ್ ಬಳಿಕ ಮಲ್ಲೂರು ಬದ್ರಿಯಾನಗರದ ಮೈದಾನದಲ್ಲಿ, ಶೈಖುನಾ ಸಜೀಪ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಉದ್ದಬೆಟ್ಟು ಎಂದರೆ ತಕ್ಷಣ ನೆನಪಾಗುವುದು ಮಹಾನಾರಾದ ವಲೀಯುಲ್ಲಾಹಿ ಶೈಖ್ ಹಸನ್ ಹೈದ್ರೋಸ್ ತಂಙಳ್ ಹಾಗೂ ಸಜೀಪ ಉಸ್ತಾದ್ ಎಂಬ ಮಹಾನ್ ವ್ಯಕ್ತಿಗಳಿಂದ ಪಾದ ಸ್ಪರ್ಶಗೊಂಡ ಅನುಗ್ರಹೀತ ನಾಡಾಗಿದೆ
ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯದ್ ಕುಟುಂಬದ ಆಗ್ರಗಣ್ಯ ನೇತಾರ, ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಬಾಯಾರ್ ಹಾಗೂ ಮೂನಾಕ್ಕಾಲ್ ಸ್ವಲಾತ್ ಮಜ್ಲಿಸ್ ನ ಮೂಲಕ ಪರಿಹಾರವನ್ನು ನೀಡುತ್ತಿರುವ *ನೂರುಸ್ಸಾದಾತ್ ಬಾಯಾರ್ ತಂಙಳ್* ದುವಾ ಹಾಗೂ ಆಶೀರ್ವಾಚನ ನೀಡಲಿದ್ದಾರೆ.
ಖ್ಯಾತ ವಾಗ್ಮೀ,ಪ್ರಭಾಷಣದ ಉದ್ದಕ್ಕೂ ಧಾರಾಳ ಇಲ್ಮನ್ನೇ ಹೇಳುವ ಹಾಫೀಳ್ ಮಸ್ಹೂದ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಅಸಾಸ್ ಸಂಸ್ಥೆಯ ಚೇಯರ್ಮಾನ್ ಬಹುಮಾನ್ಯರಾದ MPM ಅಶ್ರಪ್ ಸಅದಿ ಉಸ್ತಾದರು ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ.
SSF ಉದ್ದಬೆಟ್ಟು ಶಾಖೆಯ ಅಧ್ಯಕ್ಷರಾದ ಉಸ್ಮಾನ್ ನಿಝಾಮಿ ಸಂದೇಶ ಭಾಷಣ ಮಾಡಲಿರುವ ವೇದಿಕೆಯಲ್ಲಿ, ಖ್ಯಾತ ಹಾಡುಗಾರ ಮಾಸ್ಟರ್ ಮುಈನುದ್ದೀನ್ ಬೆಂಗಳೂರು ನಅತೇ ಶರೀಫ್ ಹಾಡಲಿದ್ದಾರೆ.
ಸದ್ರಿ ಕಾರ್ಯಕ್ರಮದಲ್ಲಿ MG ಇಕ್ಬಾಲ್ ಮಲ್ಲೂರು ಸ್ವಾಗತಿಸಲಿದ್ದು,SYS ಉದ್ದಬೆಟ್ಟು ಬ್ರಾಂಚ್ ನ ಅಧ್ಯಕ್ಷರಾದ ಮುಹಮ್ಮದ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಯೂಸುಪ್ ಬದ್ರಿಯಾನಗರ ಸಮಾರಂಭ್ ಗೌರವ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಇಸ್ಮಾಯಿಲ್ ME ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ವಿವಿಧ ಧಾರ್ಮಿಕ ,ಸಾಮಜಿಕ,ರಾಜಕೀಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲಾರೂ ನಮ್ಮೊಂದಿಗೆ ಸಹಕರಿಸುವುದರೊಂದಿಗೆ ಗರಿಷ್ಟ ರೀತಿಯಲ್ಲಿ ಪ್ರಚಾರ ಮಾಬೇಕೆಂದು ವಿನಂತಿಸಿಕೊಳ್ಳುತ್ತಾ ಇದ್ದೇವೆ.
By:ಸ್ವಾಗತ ಸಮಿತಿ (ಸುನ್ನೀ ಮಹಾ ಸಂಗಮ ಬದ್ರಿಯಾನಗರ ಮಲ್ಲೂರು)
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್