janadhvani

Kannada Online News Paper

ಈಶ್ವರಮಂಗಲ: ಇಜ್ತಿನಾಬ್-90 ಹಾಗೂ ತಾಜುಶ್ಶರೀಅ ಅನುಸ್ಮರಣೆ ಯಶಸ್ವಿ

ಪುತ್ತೂರು: ನೂತನವಾದ, ರಾಜಕೀಯ ಅರಾಜಕತೆ, ಮಾದಕ ದೃವ್ಯಗಳ ಉಪಯೋಗ ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ನಡೆಯುವ ಅನಾಚಾರಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಇಜ್ತಿನಾಬ್-90 ಕಾರ್ಯಕ್ರಮ ಹಾಗೂ ತಾಜುಶ್ಶರೀಅ ಅನುಸ್ಮರಣೆ ಈಶ್ವರಮಂಗಲ ತ್ವಯಿಬಾ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಇಸ್ಮಾಯಿಲ್ ಸಖಾಫಿ ಕರ್ನೂರ್ ರವರು ಉದ್ಘಾಟಿಸಿದರು. ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಅಧ್ಯಕ್ಷರು ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ರವರು ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಕರೀಂ ಮಾಸ್ಟರ್ ದರ್ಬಾರುಕಟ್ಟೆಯವರು ವಿಷಯ ಮಂಡನೆ ಮಾಡಿದರು. ಅಬ್ದುಲ್ ಅಝೀಝ್ ಮಿಸ್ಬಾಹಿ ಯವರು ಅನುಸ್ಮರಣಾ ಪ್ರಭಾಷಣ ಮಾಡಿದರು. ಹಂಝ ಮುಸ್ಲಿಯಾರ್ ಈಶ್ವರಮಂಗಲ, ಮುಹಮ್ಮದ್ ಮದನಿ ಭಾಷಣ ಮಾಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ನಾಯಕರು ಎಸ್ ಎಸ್ ಎಫ್ ಈಶ್ವರಮಂಗಲ ಸೆಕ್ಟರ್ ನಾಯಕರು ಹಾಗೂ ಎಸ್ ವೈ ಎಸ್ ಹತ್ತು ಬ್ರಾಂಚ್ ಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಸ್ ವೈ ಎಸ್ ದಕ ಈಸ್ಟ್ ಜಿಲ್ಲಾ ಸದಸ್ಯರು, ಈಶ್ವರಮಂಗಲ ಸೆಂಟರ್ ಉಸ್ತುವಾರಿಯೂ ಆದ ಸಿದ್ದೀಖ್ ಕಟ್ಚೆಕಾರ್ ರವರನ್ನು ಸಭೆಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯಿಲ
ಸ್ವಾಗತಿಸಿ ಉಮರ್ ಸಅದಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ವಿತರಿಸಲಾತಿತು.

error: Content is protected !! Not allowed copy content from janadhvani.com