janadhvani

Kannada Online News Paper

ಜನವರಿ 27ಕ್ಕೆ SYS ದ.ಕ ವೆಸ್ಟ್‌ ಜಿಲ್ಲಾ ಸಮಿತಿಯಿಂದ COUNT-20 ಕ್ಯಾಂಪ್

ಮಂಗಳೂರು: 2021 ಜನವರಿ 27 ಬುಧವಾರ ಬೆಳಗ್ಗೆ 9.30 ರಿಂದ ಅಪರಾಹ್ನ 2.30ರ ವರೆಗೆ ಎಸ್ ಎಸ್ ಆಡಿಟೋರಿಯಂ ಮೆಲ್ಕಾರ್ ಪಾಣೆಮಂಗಳೂರ್ನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರವ ಕೌಂಟ್-20 ಸಾಂಘಿಕ ಶಿಬಿರದ ಜಿಲ್ಲಾ ಮಟ್ಟದಲ್ಲಿರುವ ಸಮಾವೇಶವನ್ನು ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ದುಆ ನೇತ್ರತ್ವವನ್ನು ಜಿಲ್ಲಾ ಸಮಿತಿ ಸದಸ್ಯರಾದ ಸಯ್ಯಿದ್ ಜಲಾಲ್ ತಂಙಳ್, ಅಳೇಕಲ ಉಳ್ಳಾಲ ರವರು ನೆರವೇರಿಸಲಿರುವರು. ಜಿಲ್ಲಾಧ್ಯಕ್ಷ ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಖಲೀಲ್ ಮುಸ್ಲಿಯಾರ್ ರವರು ಮುನ್ನುಡಿ ಬಾಷಣ ಮಾಡಲಿರುವರು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಯವರು ಮಾಡಲಿರುವರು.

ನಂತರ ನಡೆಯಲಿರುವ ಶಿಬಿರಗಳಲ್ಲಿ ಎಸ್ ವೈ ಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಅಬ್ದುರ್ರಶೀದ್ ಝೈನಿಯವರು ಸಾಂಘಿಕ ವಿಷಯವಾಗಿ, ಎಸ್ ಪಿ ಹಂಝ ಸಖಾಫಿ ಬಂಟ್ವಾಳ ರವರು ಲೀಡರ್ಷಿಪ್ ಟ್ರೈನಿಂಗ್ ಹಾಗೂ ಎಸ್ ವೈ ಎಸ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಸುಲೈಮಾನ್ ಸಖಾಫಿ ಮಾಲೆಕಲ್ ರವರು “ಸುನ್ನೀ ಚಳವಳಿಯ ಹಾದಿ” ಎಂಬ ವಿಷಯವಾಗಿ ಮುಖ್ಯ ಭಾಷಣ ಮಾಡಲಿದ್ದಾರೆ.

ಟಿ ಎಂ ಮೊಹಿದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆ ಕೆ ಎಂ‌ ಕಾಮಿಲ್ ಸಖಾಫಿ, ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರ್, ಅಶ್ರಫ್ ಕಿನಾರ ಮಂಗಳೂರು, ಕೆ ಇ ಸಾಲೆತ್ತೂರು, ಹನೀಫ್ ಹಾಜಿ ಉಳ್ಳಾಲ, ಎನ್ ಎಸ್ ಉಮರ್ ಮಾಸ್ಟರ್, ಅಬ್ದುಲ್ ಹಮೀದ್ ಬಜ್ಪೆ ಹಾಗೂ ಇನ್ನಿತರ ನೇತಾರರು ಭಾಗವಹಿಸಲಿದ್ದಾರೆ.

ಜಿಲ್ಲಾ ಸಮಿತಿ ಕೌನ್ಸಿಲರ್ ಗಳು, ಸೆಂಟರ್ ಪದಾಧಿಕಾರಿಗಳು, ಬ್ರಾಂಚ್ ಅಧ್ಯಕ್ಷರು ಕಾರ್ಯದರ್ಶಿ ಕೋಶಾಧಿಕಾರಿಗಳು ಹಾಗೂ ಕಾರ್ಯಾಚರಣೆಗೆ ಅಗತ್ಯವೆನಿಸುವ ವಿಶೇಷ ಪ್ರತಿನಿಧಿಗಳು ಸೇರಿ ಸಾವಿರದಷ್ಟು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com