ದಮ್ಮಾಮ್: ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ದಮ್ಮಾಮ್ ಅಲ್ ಬಾದಿಯಾ ಸಮಿತಿಯ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ನಮ್ಮನ್ನಗಲಿದ ಸ್ಥಾಪನೆ ಸಂಘಟನೆಗಳ ಹಾಗೂ ಕುಟುಂಬದಿಂದ ಮರಣ ಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಬಹು ಅಬ್ದುಲ್ ಕರೀಂ ಲತ್ವೀಫಿ ಸೋಕಿಲರವರ ನೆತೃತ್ವದಲ್ಲಿ ನಡೆಯಿತು.
ದಮ್ಮಾಮ್ ಅಲ್ ಬಾದಿಯಾ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಸದಸ್ಯರು ಸಯ್ಯಿದ್ ರಾಶೀದ್ ತಂಙಳ್ ದೀವುರವರ ಅಧ್ಯಕ್ಷತೆಯಲ್ಲಿ ಜರಗಿತು.ಸಯ್ಯಿದ್ ಸಲಾಂ ತಂಙಳ್ ರವರುಸಬೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದ ಗತವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿಲಾಯಿತು. ಮೂಡಡ್ಕ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಸಂಘಟನೆಯ ಬಗ್ಗೆ ಹಾಗೂ ಕಾರ್ಯಚರಣೆಯ ಬಗ್ಗೆ ವಿವರಿಸಿ. ಮೂಡಡ್ಕ ದಮ್ಮಾಮ್ ನೂತನ ಕಾರ್ಯಕಾರಿ ಸಮಿತಿಯನ್ನು ಮಂಡಿಸಿದರು.
ಗೌರವ ಅಧ್ಯಕ್ಷರಾಗಿ ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ, ಸಲಹೆ ಸಮಿತಿ ಅಬ್ದುಲ್ ಕರೀಂ ಲತ್ವೀಫಿ ಸೋಕಿಲ, ಮುಹಮ್ಮದ್ ಅಲಾಂಪಾಡಿ, ಬಶೀರ್ ಬಜಾರ್, ಅಧ್ಯಕ್ಷರಾಗಿ ಸಯ್ಯಿದ್ ಸಲಾಂ ತಂಙಳ್ ಉಪ್ಪಿನಂಗಡಿ, ಪ್ರದಾನ ಕಾರ್ಯದರ್ಶಿಯಾಗಿ ಬಶೀರ್ ಮದನಿ ನೆಲ್ಲಿಪಲ್ಲಿಕೆ, ಕೋಶಾಧಿಕಾರಿ ಅಶ್ರಫ್ ಬಾಜಾರ್, ಉಪಾಧ್ಯಕ್ಷರಾಗಿ ಸಯ್ಯಿದ್ ರಾಶೀದ್ ತಂಙಳ್ ದೀವು, ಜೊತೆ ಕಾರ್ಯದರ್ಶಿಯಾಗಿ ಖಲೀಲ್ ಆರೋದು, ಸಂಚಾಲಕರಾಗಿ ಆಸಿಕ್ ಪೂಂಜಲ್ಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇರ್ಶಾದ್ ಮಡಂತ್ಯಾರ್, ಇಬ್ರಾಹಿಂ ಖಲೀಲ್ ಮುಡಿಪು, ಅಬ್ದುಲ್ ರಝಾಕ್ ಅಡ್ಯಾರ್ ಕಣ್ಣೂರು, ಹನೀಫ್ ಹೊನ್ನಾವರ, ಹಾರೀಶ್ ಕೃಷ್ಣಪುರ, ಮುಝಮ್ಮಿಲ್ ಗುರುಪುರ, ಮುಹಮ್ಮದ್ ಮಾರಿಪಳ್ಳರವರನ್ನು ಆಯ್ಕೆ ಗೊಳಿಸಲಾಯಿತು. ಕಾರ್ಯಕ್ರಮವನ್ನು ಬಶೀರ್ ಮದನಿ ನೆಲ್ಲಿಪಲ್ಲಿಕೆ ಸ್ವಾಗತಿಸಿ, ನೂತನ ಜೊತೆ ಕಾರ್ಯದರ್ಶಿ ಖಲೀಲ್ ಆರೋದು ಧನ್ಯವಾದಗೈದರು.