ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೇಡರೇಶನ್ ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ ಇದರ ವಾರ್ಷಿಕ ಮಹಾಸಭೆಯು ಉಕ್ಕುಡ ತಾಜುಲ್ ಉಲಮಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಅಧ್ಯಕ್ಷರಾದ ಅಬೂಬಕ್ಕರ್ ಹಿಮಮಿ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ದ.ಕ ಜಿಲ್ಲಾ ಸಮಿತಿಯ ಸದಸ್ಯರಾದ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು ರವರ ದುಃಆದ ಮೂಲಕ ಚಾಲನೆಗೊಂಡ ಸಭೆಯನ್ನು ಎಸ್.ವೈ.ಎಸ್ ವಿಟ್ಲ ಸೆಂಟರ್ ಕಾರ್ಯದರ್ಶಿ ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.
ನಂತರ ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಕೊಡಂಗಾಯಿ ವಾರ್ಷಿಕ ವರದಿ ಮಂಡಿಸಿದರು, ಹಾಗೂ ಕೋಶಾಧಿಕಾರಿ ಅಬ್ದುಲ್ ಜಲೀಲ್ ಒಕ್ಕೆತ್ತೂರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ದ.ಕ ಈಸ್ಟ್ ಝೋನ್ ಸಮಿತಿ ನಾಯಕರಾದ ಶಾಹುಲ್ ಹಮೀದ್ ಸಖಾಫಿ ಪಾಣಾಜೆ ರವರ ನೇತೃತ್ವದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಿ.ಎಂ ಅಬೂಬಕ್ಕರ್ ಹಿಮಮಿ ಸಖಾಫಿ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಅಶ್ಫಾಕ್ ಕೊಡಂಗಾಯಿ ಪುನರಾಯ್ಕೆಯಾದರು. ಕೋಶಾಧಿಕಾರಿ ಯಾಗಿ ಜಹಾಝ್ ಖಲೀಲ್ ಅಳಿಕೆ, ಉಪಾಧ್ಯಕ್ಷರಾಗಿ ಹಸನ್ ಸಅದಿ ಕುಕ್ಕಿಲ ಹಾಗೂ ಗಫೂರ್ ಕಂಬಳಬೆಟ್ಟು ಮತ್ತು ಕಾರ್ಯದರ್ಶಿ ಗಳಾಗಿ ಅಶ್ರಫ್ ಗೋಳಿಕಟ್ಟೆ , ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ , ಸೈಫುದ್ದೀನ್ ಅಳಕೆಮಜಲು, ನಬೀಲ್ ಕೇಪುಳಗುಡ್ಡೆ ಹಾಗೂ ಕಲಂದರ್ ಕಾನತ್ತಡ್ಕ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ದ.ಕ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ ಸಂಘಟನಾ ತರಗತಿ ನಡೆಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಇಬ್ರಾಹಿಂ ಬ್ರೈಟ್ ಮಾರ್ಬಲ್ ಹಾಗೂ ಕೆಸಿಎಫ್ ನಾಯಕರಾದ ಶರೀಫ್ ಮುಸ್ಲಿಯಾರ್ ಮಾತನಾಡಿ ಶುಭಹಾರೈಸಿದರು. ಸಭೆಯಲ್ಲಿ ಎಸ್.ವೈ.ಎಸ್ ವಿಟ್ಲ ಸೆಂಟರ್ ನಾಯಕರಾದ ಅಬ್ದುಲ್ ರಹೀಂ ಸಖಾಫಿ ವಿಟ್ಲ ಹಾಗೂ ಡಿವಿಷನ್ ನಾಯಕರಾದ ಅಬ್ದುಲ್ ಖಾದರ್ ಕೊಡಂಗಾಯಿ, ಅಶ್ರಫ್ ಸಖಾಫಿ ಮಂಡ್ಯೂರು, ರಝಾಕ್ ಬೈರಿಕಟ್ಟೆ, ಅಝೀಝ್ ಮದನಿ ಗೋಳಿಕಟ್ಟೆ, ರಝಾಕ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಅಶ್ಫಾಕ್ ಕೊಡಂಗಾಯಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.