janadhvani

Kannada Online News Paper

ವಿದ್ಯಾರ್ಥಿ ವೇತನ ಸಮಸ್ಯೆ : ಬ್ಯಾರಿ ಮಹಾಸಭಾ ವೇದಿಕೆಯಿಂದ ಅಲ್ಪಸಂಖ್ಯಾತ ಅಧ್ಯಕ್ಷರ ಭೇಟಿ

ಮಂಗಳೂರು: ದ.ಕ.ಜಿಲ್ಲೆಯ ವಿಧ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ವಿವಿಧ ವಿಧ್ಯಾರ್ಥಿ ವೇತನ ಸೌಲಭ್ಯ , 2020-21 ನೆ ಸಾಲಿನಲ್ಲಿ ವೃತ್ತಿ ಆಧಾರಿತ ಅಲ್ಪ ಸಂಖ್ಯಾತ ವಿಧ್ಯಾರ್ಥಿಗಳ ಅರಿವು ಶೈಕ್ಷಣಿಕ ಸಾಲ ಯೋಜನೆಯ ಬಾಕಿ ಇರುವ ಮತ್ತು ಹಾಲಿ ಕಂತುಗಳನ್ನು ಬಿಡುಗಡೆ ಗೊಳಿಸಿ ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳಿಂದ ವಿಧ್ಯಾರ್ಥಿಗಳಿಗೆ ಶುಲ್ಕ ವಸೂಲಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸ ಬೇಕು ಎಂದು ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕ್ಕಂಪಾಡಿ ನೇತೃತ್ವದ ಅಖಿಲ ಭಾರತ ಬ್ಯಾರಿ ಮಹಾ ಸಭಾ ನಿಯೋಗ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಅಬ್ದುಲ್ ಅಜೀಂ ರವರನ್ನು ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ನಿಯೋಗವು ಅದ್ಯಕ್ಷರಲ್ಲಿ ಮಾತನಾಡಿ, ಪ್ರಸ್ತುತ ಮುಸ್ಲಿಮ್ ಸಮುದಾಯದಲ್ಲಿ ವಧು ವರರ ವಿವಾಹ ವಯಸ್ಸಿನ ಬಗ್ಗೆ ಗೊಂದಲ ಸೃಷ್ಟಿ ಆಗಿದ್ದು, ದೇಶದಲ್ಲಿ ಮುಸ್ಲಿಮ್ ಅಲ್ಪ ಸಂಖ್ಯಾತ ವ್ಯಕ್ತಿಗಳಿಗೆ ವಿವಾಹ ವಾಗಲು ಶರೀಯತ್ ನಿಯಮ ಚಾಲನೆಯಲ್ಲಿದೆ. ಖಡ್ಡಾಯ ವಯಸ್ಸಿನ ಮಿತಿ ಮುಸ್ಲಿಮ್ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ. ಮುಸ್ಲಿಮ್ ಸಮುದಾಯವು ದೇಶದ ಕಾನೂನನ್ನು ಗೌರವಿಸುವುದರೊಂದಿಗೆ ಶರಿಯತ್ ಅನುಕೂಲತೆಯ ಪ್ರಯೋಜನಾರ್ಥಿಗಳಾಗಿದ್ದಾರೆ. ವಿವಾಹದ ಖಡ್ಡಾಯ ವಯಸ್ಸಿನ ವಿಷಯದಲ್ಲಿ , ಮುಸ್ಲಿಮ್ ವಧು ವರರು ದೈಹಿಕ ಪ್ರಾಯಾಸ್ತರಾಗುವುದೆ ಅರ್ಹತೆ ಎಂದು ಶರಿಯತ್ ಕಾನೂನು ಹೇಳುತ್ತದೆ.

ಆದುದರಿಂದ ರಾಜ್ಯದ ಕೆಲವು ಇಲಾಖೆಗಳು ವಧು ವರರ ವಯಸ್ಸಿನ ಸಣ್ಣ ವ್ಯತ್ಯಯಗಳನ್ನು ಕಾರಣವಾಗಿಟ್ಟು ವಿವಾಹದಂತಹ ಶುಭ ಸಮಾರಂಭಗಳ ಹಾಲ್ ಗಳಿಗೆ ತೆರಳಿ ವಿವಾಹ ಕಾರ್ಯಕ್ಕೆ ಆಡ್ಡಿ ಪಡಿಸಿ ಪ್ರಕರಣ ದಾಖಲಿಸುವುದು ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಿತ ಇಲಾಖೆ ಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ವಿನಂತಿಸಲಾಯಿತು.

ನಿಯೋಗದಲ್ಲಿ ಸದಸ್ಯರಾದ ಮೊಹಮ್ಮದ್ ಹನೀಫ್ ಯು, ಮುಸ್ತಫಾ ಸಿ. ಎಂ, ಅಹ್ಮದ್ ಬಜಾಲ್,ಮೊಹಮ್ಮದ್ ಸ್ವಾಲಿ ಹ್ ಬಜ್ಪೆ ರವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com