janadhvani

Kannada Online News Paper

SYS ಈಸ್ಟ್ ಜಿಲ್ಲಾ :ಟೀಮ್ ಇಸಾಬಾ ಕ್ಯಾಂಪ್

ಪುತ್ತೂರು: ಎಸ್ ವೈ ಎಸ್ ಈಸ್ಟ್ ಜಿಲ್ಲಾ ಟೀಂ ಇಸಾಬಾ ಕ್ಯಾಂಪ್ ಇತ್ತೀಚೆಗೆ ಕಬಕ ತಾಜ್ ಮಹಲ್ ಮಂಝಿಲ್‌ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಬದ್ರಿಯತ್ ಹಾಗೂ ರಿಫಾಯಿ ಮೌಲೂದ್ ಪಾರಾಯಣದ ಮೂಲಕ ಆರಂಭಿಸಲಾಯಿತು.

SYS ಜಿಲ್ಲಾ ಈಸ್ಟ್ ನಾಯಕರಾದ ಸಯ್ಯದ್ ಸಾದಾತ್ ತಂಙಳ್‌ರವರ ನೇತೃತ್ವದಲ್ಲಿ ನಡೆದ ಟೀಂ ಇಸಾಬಾ ಶಿಬಿರವನ್ನು ಎಸ್ ವೈ ಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಬೂಬಕರ್ ಸ‌ಅದಿ ಮಜೂರು ಉದ್ಘಾಟಿಸಿದರು.
ಪೂರ್ವಿಕ ಉಲಮಾಗಳು ಕಾಣಿಸಿಕೊಟ್ಟ ನೈಜ ಸುನ್ನತ್ ಜಮಾಅತ್ ಪಥವಾದ ಎಸ್ ವೈ ಎಸ್ ನಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದೂ,
2021 ಪೆಬ್ರವರಿ 21 ರಂದು ಕುಂಬ್ರ ಮರ್ಕಝ್‌ನಲ್ಲಿ ನಡೆಯುವ ಬೃಹತ್ ಎಸ್ ವೈ ಎಸ್ ಈಸ್ಟ್ ಜಿಲ್ಲಾ ಕ್ಯಾಂಪನ್ನು ಯಶಸ್ವಿಗೊಳಿಸಬೇಕೆಂದು ಕರೆಯಿತ್ತ ಜಿಲ್ಲಾ ಅಧ್ಯಕ್ಷರು ಇಸಾಬಾ ಅನಿವಾರ್ಯತೆ ಬಗ್ಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಈಸ್ಟ್ ಜಿಲ್ಲಾ ಕಾರ್ಯದರ್ಶಿಗಳಾದ ಸಾದಿಕ್ ಮಾಸ್ಟರ್ ಮಲೆಬೆಟ್ಟು ಮಾತನಾಡಿ 20 ಸೆಂಟರ್‌ಗಳಿಂದ ಆಗಮಿಸಿದ ಟೀಂ ಇಸಾಬಾ ಕಾರ್ಯಕರ್ತರಿಗೆ ವಿವಿಧ ಹಂತಗಳಲ್ಲಿ ನೀಡುವ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಕಾರ್ಕ್ರಮದ ಕೊನೆಯಲ್ಲಿ ಪುತ್ತೂರು ಸೆಂಟರ್ ಎಸ್ ವೈ ಎಸ್ ಅಧ್ಯಕ್ಷರಾದ ಅಬ್ದುಲ್ ರ್ರಝಾಕ್ ಖಾಸಿಮಿ ಕೂರ್ನಡ್ಕ ಮಾತನಾಡಿ ನಮ್ಮ ಉಲಮಾಗಳ ಸಾಂತ್ವನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿ,ಕಾರ್ಯಕರ್ತರು ಕೂಡಾ ಸಕ್ರಿಯವಾಗಬೇಕೆಂದು ಕರೆ ನೀಡಿದರು.
ಪೆಬ್ರವರಿ 21 ರಂದು ನಡೆಯುವ ಸಾವಿರ SYS ಕಾರ್ಯಕರ್ತರ ಶಿಬಿರದ ಕುರಿತು ಮಾಹಿತಿ ನೀಡಲಾಯಿತು.

ಸಮಾವೇಶದ ಅಂಗವಾಗಿ ಜನವರಿ 19 ರಂದು ಪುತ್ತೂರಿನ ಬನ್ನೂರಿನಲ್ಲಿ ಈಸ್ಟ್ ಜಿಲ್ಲಾ ಕ್ಯಾಂಪ್ ಹಾಗೂ 2021 ಜನವರಿ26 ರಂದು ಸೆಂಟರ್ ಮಟ್ಟದ ಘೋಷಣಾ ಸಮಾವೇಶ ಮತ್ತು ನಾಯಕತ್ವ ತರಬೇತಿ 60(sixty camp) ನಡೆಯಲಿದೆ.
ಕಾರ್ಯಕ್ರಮದಲ್ಲಿ ಟೀಂ ಇಸಾಬಾ ಜಿಲ್ಲಾ ನಾಯಕರಾದ ಇಕ್ಬಾಲ್ ಬಪ್ಪಳಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ಟೀಂ ಇಸಾಬಾ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂ ಪದ್ಮುಂಜ,ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಜಿಲ್ಲಾ ಇವೆಂಟ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿ ಶುಭಹಾರೈಸಿದರು.
ಇಸಾಬಾ ನಾಯಕರಾದ ಸಾಲಿಹ್ ಮುರ ಸ್ವಾಗತಿಸಿದರು.
ಹನೀಫ್ ಹಾಜಿ ಇಂದ್ರಾಜೆ,ಶಂಸುದ್ದೀನ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com