SSF ಕೊಪ್ಪ ಡಿವಿಷನ್ ವ್ಯಾಪ್ತಿಯ SSF ಕುದುರೆಗುಂಡಿ ಮಟ್ಟದಲ್ಲಿ 01 ಜನವರಿ 2021 ರ ಸಂಜೆ 07ಗಂಟೆಗೆ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ಮಹಾಸಭೆಯನ್ನು ನಡೆಸಲಾಯಿತು.
ನೌಫಲ್ ಹಿಮಮಿ ಅಲ್ ಹಾದಿ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಶರೀಫ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಲೀಮ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿಯ ಸಾರಥಿಗಳು
ಅಧ್ಯಕ್ಷರಾಗಿ ಸಲೀಮ್, ಪ್ರಧಾನ ಕಾರ್ಯದರ್ಶಿಯಾಗಿ ಬಾಕಿರ್ ಹಸನ್, ಕೋಶಾಧಿಕಾರಿಯಾಗಿ ಶಮೀಮ್, ಉಪಾಧ್ಯಕ್ಷರಾಗಿ ನೌಫಲ್ ಹಿಮಮಿ ಅಲ್ ಹಾದಿ ಮತ್ತು ಅಶ್ಫಕ್, ಕಾರ್ಯದರ್ಶಿಗಳಾಗಿ ಶರೀಫ್, ಹುಸೈನ್, ಸಲೀಮ್ ಬಿ, ಬಿಲಾಲ್, ನಿಷಾದ್ ,ಮುಝಮ್ಮಿಲ್ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರ್ಫುದ್ದೀನ್ ಅವರು ಕೊನೆಯಲ್ಲಿ ಕೃತಜ್ಞತೆ ಸಲ್ಲಿಸಿದರು.