ರಿಯಾದ್ : ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸರಿ ಸುಮಾರು 25 ವರ್ಷಗಳಿಂದ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ನಿವಾಸಿ ಸಯ್ಯಿದ್ ಗೌಸ್ ಪೀರ್ ಎಂಬುವವರು ಸೋಮವಾರ (ಡಿ- 21) ಹೃದಯಾಘಾತದಿಂದ ಮರಣಹೊಂದಿದ್ದು, ಕೆಸಿಎಫ್ ನೆರವಿನಲ್ಲಿ ದಫನ ಕಾರ್ಯ ನಡೆಸಲಾಯಿತು.
ದಫನ ಕಾರ್ಯಕ್ಕೆ ಬೇಕಾದ ಪೇಪರ್ ವರ್ಕ್ ಹಾಗು ಇನ್ನಿತರ ಕೆಲಸಗಳನ್ನು ಪೂರ್ತಿಗೊಳಿಸಲು ಆವಶ್ಯಕತೆ ಕೋರಿ ಬಂದಾಗ ಕೂಡಲೆ ಸ್ಪಂದಿಸಿ ಸಹಕರಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್)ಇದರ ಸಾಂತ್ವನ ವಿಭಾಗದ ಕನ್ವೀನರ್ ಬಾಷಾ ಗಂಗಾವಳಿಯವರು, ಕುಟುಂಬಸ್ಥರಾದ ಇಂಮ್ತಿಯಾಜ್ ರಿಗೆ ಸಂಪೂರ್ಣ ಸಹಕರಿಸಿ ತ್ವರಿತಗತಿಯಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಪೂರ್ತೀಕರಿಸಿ ಡಿ.28ರಂದು ರಿಯಾದ್ ನಲ್ಲಿ ಮಯ್ಯಿತ್ ನಮಾಜ್ ಹಾಗೂ ದಫನ ಕಾರ್ಯ ನಿರ್ವಹಿಸಲಾಗಿದೆ.
ಮೃತರ ಕುಟುಂಬವು ಊರಿನಲ್ಲಿ ಇದ್ದು ತಂದೆ, ತಾಯಿ ಹೆಂಡತಿ ಹಾಗು 2 ಗಂಡು ಮಕ್ಕಳನ್ನು ಅಗಲಿದ್ದಾರೆ. ಕುಟುಂಬಸ್ಥರಾದ ಇಂಮ್ತಿಯಾಜ್ ಖಾನ್ ಹಾಗು ನಾಸಿರ್ ಎಂಬುವವರು ರಿಯಾದ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಊರಿನಿಂದ NOC ಹಾಗು ಇನ್ನಿತರ ಅವಕಾಶ ಕಾರ್ಯಕ್ಕೆ ಕೆ.ಸಿ.ಎಫ್ ತಂಡದೊಂದಿಗೆ ಸಂಪೂರ್ಣ ಸಹಕರಿಸಿದ್ದಾರೆ.
ದಫನ ಕಾರ್ಯದಲ್ಲಿ ಕುಟುಂಬದ ಸದಸ್ಯರು ಹಾಗು ಸ್ನೇಹಿತರು ಪಾಲ್ಗೊಂಡರು.